ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ
ಸಂಜೆ ಜರುಗಿದ ಹಾಲೋಕಳಿ ಸಂದರ್ಭದಲ್ಲಿ ಹಾಲಗಂಬ ಏರಲು ಅನೇಕ ಯುವಕರು ಹರಸಹಾಸ ಮಾಡಿದರು. ಇವರು ಹಾಲಗಂಬ ಏರುತ್ತಿದ್ದಂತೆಯೇ ಮೇಲೆ ಕುಳಿತ ವ್ಯಕ್ತಿ ಕಂಬ ಜಾರಲೆಂದೇ ಹಾಲು, ತುಪ್ಪ, ಬಾಳೆಹಣ್ಣಿನ ರಸ ಸೇರಿದಂತೆ ಇನ್ನಿತರ ಜಾರುವ ಪದಾರ್ಥ ಎರಚಿದರು. ಇವೆಲ್ಲವನ್ನು ಎದುರಿಸಿ ಯುವಕರು ಕೊನೆಗೂ ಮೇಲೇರಿ ಯಶಸ್ಸು ಕಂಡರು.
ಈ ಸಂದರ್ಭದಲ್ಲಿ ತವನಪ್ಪ ಕೋರಿ, ಹರ್ಷವರ್ಧನ್ ಪಟವರ್ಧನ, ದೋಂಡಿಬಾ ಗಾಯಕವಾಡ, ಬಸವರಾಜ ಖೇಮನ್ನವರ, ಲಕ್ಕಪ್ಪ ಶಿರಹಟ್ಟಿ, ರಾಜು ಪಾಟೀಲ ಸೇರಿದಂತೆ ಆಸಂಗಿ, ಅಸ್ಕಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಅಪಾರ ಪ್ರಮಾಣದ ಜನಸ್ತೋಮ ನೆರೆದಿತ್ತು.