ಮಾರುತೇಶ್ವರ ಮೂರ್ತಿ, ಕಳಸ ಭವ್ಯ ಮೆರವಣಿಗೆ

KannadaprabhaNewsNetwork |  
Published : Feb 12, 2025, 12:30 AM IST
ಗದ್ದನಕೇರಿ ಕ್ರಾಸ್‌ನಲ್ಲಿ ಮಾರುತೇಶ್ವರ ಮೂರ್ತಿ, ಕಳಸ ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು ಸಾಗಿದರು. | Kannada Prabha

ಸಾರಾಂಶ

ಗದ್ದನಕೇರಿ ಕ್ರಾಸ್‌ ನಲ್ಲಿ ನೂತನವಾಗಿ ನಿರ್ಮಿಸಿದ ಹನುಮಂತದೇವರ ಮಂದಿರ ಉದ್ಘಾಟನೆ, ಮಾರುತೇಶ್ವರ ಮೂರ್ತಿ, ಕಳಸ ಮೆರವಣಿಗೆ ಶ್ರದ್ಧೆ, ಭಕ್ತಿಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಕಲಾದಗಿ

ಗದ್ದನಕೇರಿ ಕ್ರಾಸ್‌ ನಲ್ಲಿ ನೂತನವಾಗಿ ನಿರ್ಮಿಸಿದ ಹನುಮಂತದೇವರ ಮಂದಿರ ಉದ್ಘಾಟನೆ, ಮಾರುತೇಶ್ವರ ಮೂರ್ತಿ, ಕಳಸ ಮೆರವಣಿಗೆ ಶ್ರದ್ಧೆ, ಭಕ್ತಿಯಿಂದ ನೆರವೇರಿತು.

ಮೆರವಣಿಗೆ ಮುಂಚೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆದು, ಗದ್ದನಕೇರಿ ಕ್ರಾಸ್‌ನಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಿಂದ ಹೊರಟ ಮೆರವಣಿಗೆ ಗದ್ದನಕೇರಿ ಕ್ರಾಸ್‌ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಕಲಾ ಮೇಳ ತಂಡಗಳು ಆರತಿ, ಕುಂಭ ಹೊತ್ತಿ ಸಾಗಿದ ಮಹಿಳೆಯರು ಮೆರವಣಿಗೆಗೆ ಮೆರಗು ತಂದರು.

ಗದ್ದನಕೇರಿಯ ಮಳೆರಾಜೇಂದ್ರ ಮಠದ ಮಳೆಯಪ್ಪಯ್ಯ ಸ್ವಾಮೀಜಿ, ಅನಗವಾಡಿಯ ಅನಸೂಯಾ ತಾಯಿ, ಮುರನಾಳ ಯಲ್ಲಮ್ಮ ತಾಯಿ ಮೆರವಣಿಗೆ ಚಾಲನೆ ನೀಡಿದರು. ಶಾಸಕರಾದ ಜೆ.ಟಿ. ಪಾಟೀಲ, ಎಚ್.ವೈ. ಮೇಟಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಯಮಾರ್ ಸರನಾಯಕ, ಗ್ರಾಪಂ ಅಧ್ಯಕ್ಷೆ ಮಾಲಾ ಸಂಗಣ್ಣ ನಲವತವಾಡ, ಪಾಂಡು ಯಡಹಳ್ಳಿ, ಸುಭಾಶ್ಚಂದ್ರ ಮೆಣಸಗಿ, ವಿ.ವಿ. ರೋಳ್ಳಿ, ಶಿವಪ್ಪ ಪರಾಂಡೆ, ಶಂಕ್ರಪ್ಪ ಮೈತ್ರಾಣಿ, ಬ್ರಹ್ಮಲಿಂಗಪ್ಪ ಹಗರನ್ನವರ, ರಾಜು ಸನ್ನಪ್ಪನವರ, ಮಹಾದೇವಪ್ಪ ಪೂಜಾರ, ಎಂ.ಎಚ್. ಪಡಸಾಲಿ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಅಪಘಾತ ಸೈಕಲ್‌ ಸವಾರ ಸಾವು
ವಿದ್ಯುತ್‌ ತೊಂದರೆ ಸರಿಪಡಿಸದಿದ್ದರೇ ಅಹೋರಾತ್ರಿ ಧರಣಿ