ಯಲಬುರ್ಗಾ: ತಾಲೂಕಿನ ಕಲಭಾವಿ ಗ್ರಾಮದ ಶ್ರೀಮಾರುತೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ನಾನಾ ಕಡೆಯಿಂದ ಆಗಮಿಸಿದ್ದ ಭಕ್ತರು ಬೇಡಿಕೊಂಡ ಹರಕೆ ತೀರಿಸಿದರು. ಭಕ್ತರಿಗೆ ೫ ಕ್ವಿಂಟಲ್ ಗೋಧಿ ಹುಗ್ಗಿ, ೧.೨೦ಕೆಜಿ ಶೇಂಗಾ ಹೋಳಿಗೆ, ೧.೨೦ ಕೆಜಿ ಎಳ್ಳು ಹೋಳಿಗೆ, ೧.೧೦ಕೆಜಿ ಬದಾಮಿ ಪೂರಿ, ೨೫ ಕೆಜಿ ಜಿಲೇಬಿ ಸೇರಿದಂತೆ ರೊಟ್ಟಿ, ಕಾಳು ಪಲ್ಯ, ಖಾದ್ಯ ಪದಾರ್ಥ ತಯಾರಿಸಲಾಗಿತ್ತು.
ಸಂಜೆ ರಥೋತ್ಸವಕ್ಕೂ ಮುಂಚೆ ಗೊಲ್ಲ ಸಮುದಾಯದವರಿಂದ ಹಾಲೋಕುಳಿ ನಡೆಯಿತು. ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು.ಸಂಜೆ ನಡೆದ ರಥೋತ್ಸವದಲ್ಲಿ ಕಲ್ಲಭಾವಿ ಗ್ರಾಮದ ಸುತ್ತಮುತ್ತಲಿನ ಹಲವು ಗ್ರಾಮಗಳಾದ ಪುಟಗಮರಿ,ಗಾಣದಾಳ,ತಾಳಕೇರಿ, ಚಿಕ್ಕವಂಕಲಕುಂಟಾ, ಹಿರೇವಂಕಲಕುಂಟಾ, ಮರಕಟ್, ಮಾಟಲದಿನ್ನಿ, ವಜನಭಾವಿ, ಚೌಡಾಪುರ, ಯಡ್ಡೋಣಿ, ಕಂದಕೂರ, ಚಿಕ್ಕಮನ್ನಾಪುರ, ಶಿಡ್ಲಭಾವಿ, ಗಾಣದಾಳ ಸೇರಿ ವಿವಿಧ ತಾಲೂಕಿನ ಸಹಸ್ರಾರು ಭಕ್ತ ಸಮೂಹ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಕುಷ್ಟಗಿ ಮದ್ದಾನೇಶ್ವರ ಹಿರೇಮಠದ ಶ್ರೀಕರಿಬಸವೇಶ್ವರ ಸ್ವಾಮೀಜಿ, ಸೋಮನಾಳದ ಮಲ್ಲಯ್ಯ ತಾತನವರು, ವಿರೂಪಾಕ್ಷಯ್ಯ ತಾತ, ಹನುಮಂತಪ್ಪ ಕುಂಟೆಪ್ಪಜ್ಜ, ಅರ್ಚಕ ಮುಕ್ಕುಂದಪ್ಪ ಪೂಜಾರ ಇತರರು ಹನುಮಾನ ಧ್ವಜಾರೋಹಣದಲ್ಲಿ ಭಾಗಿಯಾಗಿದ್ದರು.ಈ ಸಂದರ್ಭ ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್, ಜಗದೀಶಪ್ಪ ಸಿದ್ದಾಪುರ, ದ್ಯಾಮಣ್ಣ ದೇವಲ್, ಬಸನಗೌಡ ಮಾಲಿಪಾಟೀಲ್, ದೇವಪ್ಪ ವಜ್ರದ, ಮಾರ್ಕಂಡೇಪ್ಪ ಹುಣಶಿಹಾಳ, ಶರಣಮ್ಮ ಕಡೆಮನಿ, ಹನುಮಂತಪ್ಪ ದೇವಲ್, ಕಟ್ಟೆಪ್ಪ ತಳವಾರ್, ಶಾಮಣ್ಣ ಗದ್ದಿ, ಮಾರ್ಕಂಡೇಪ್ಪ ಮೇಟಿ, ಹನುಮೇಶ ಬ್ಯಾಳಿ, ಮಂಜು ದೇವಲ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು.