ನಾಪೋಕ್ಲು: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಜ್ಞಾನ ವಿಚಾರಗೋಷ್ಠಿ ಯಲ್ಲಿ ಮೂರ್ನಾಡು ಮಾರುತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೊಡಗು ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಡಿಕೇರಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿಜ್ಞಾನ ವಿಚಾರಗೋಷ್ಠಿ ಯಲ್ಲಿ ಇಲಾಖೆಯಿಂದ ನೀಡಲಾಗಿದ್ದ "ಕ್ವಾಂಟಮ್ ಯುಗದ ಪ್ರಾರಂಭ ಮತ್ತು ಸವಾಲುಗಳು " ವಿಷಯದ ಕುರಿತು ನೀಡಲಾಗಿತ್ತು. ಇದರಲ್ಲಿ ಮಾರುತಿ ವಿದ್ಯಾ ಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿನಿಯರಾದ ಹಬೀಬಾ ಎಂ.ಯು.ಮತ್ತು ಪ್ರಕೃತಿ.ಆರ್. ವಿಚಾರ ಮಂಡನೆ ಮಾಡಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ವಿದ್ಯಾಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಇವರು ಸೆ. 11ರಂದು ಕೂಡಿಗೆ ಯಲ್ಲಿ ನಡೆಯುವ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.----------------------------------------
ಸುಂಟಿಕೊಪ್ಪದಲ್ಲಿ ಈದ್ ಮಿಲಾದ್ ಹಬ್ಬದ ಸಂಭ್ರಮಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಸುಂಟಿಕೊಪ್ಪದಲ್ಲಿ ಮುಸ್ಲಿಂ ಬಾಂಧವರು ಮಹಮ್ಮದ್ ಪೈಗಂಬರರ 1500 ಜನ್ಮದಿನದ ಪ್ರಯುಕ್ತ ದಫ್ ಬಾರಿಸುತ್ತಾ ಶಾಂತಿ ಸೌಹಾರ್ದತೆಯ ಸಂಕೇತದ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.ಶನಿವಾರದಂದು ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್, ಸುನ್ನಿ ಹನಫಿ ಮುಸ್ಲಿಂ ಜಮಾಅತ್, ಮುನ್ವರಲ್ ಇಸ್ಲಾಂ ಮದರಸ, ಸುನ್ನಿ ಶಾಫಿ ಜಮಾಅತ್, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಳೆದ 3 ದಿನಗಳಿಂದ ಮಸೀದಿಯ ಮದ್ರಸಗಳಲ್ಲಿ ವಿದ್ಯಾಭ್ಯಾಸ ನಡೆಸುವ ಮಕ್ಕಳಿಗೆ ಧಾರ್ಮಿಕತೆಯ ಬಗ್ಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಧಾರ್ಮಿಕತೆಯ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಸೀದಿಗಳ ಮೌಲವಿಗಳಿಂದ ಧಾರ್ಮಿಕ ಪ್ರವಚನವನ್ನು ಮುಸ್ಲಿಂ ಬಾಂಧವರಿಗೆ ನೀಡಿದರು.ಶನಿವಾರದಂದು ಬೆಳಗ್ಗೆ ಸುಂಟಿಕೊಪ್ಪ ಪಟ್ಟಣದ ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಮುಸ್ಲಿಂ ಭಾಂದವರು ಮೆರವಣಿಗೆಯಲ್ಲಿ ವಿಶೇಷ ಉಡುಗೆಗಳನ್ನು ತೊಟ್ಟು ಹಾಡಿನೊಂದಿಗೆ ದಫ್ ಬಡಿಯುತ್ತಾ ಶಾಲೆ ಮಕ್ಕಳು ಚಪ್ಪಾಳೆ, ಹೂಗುಚ್ಚ, ಹಸಿರು ಧ್ವಜ ಹಿಡಿದು ಧ್ವನಿ ವರ್ಧಕದಲ್ಲಿ ಮಹಮ್ಮದ್ ಪೈಗಂಬರರ ಶಾಂತಿ ಸೌಹಾರ್ದತೆ ಆದರ್ಶ ಗುಣಗಳನ್ನು ಪ್ರಚುರಪಡಿಸುತ್ತಿದ್ದರೆ, ಈದ್‌ಮಿಲಾದ್ ಆಚರಣೆಗೆ ಮತ್ತಷ್ಟು ಇಂಬು ನೀಡಿತ್ತು. ರಸ್ತೆ ಬದಿಯಲ್ಲಿ ಮುಸ್ಲಿಂ ಮಹಿಳೆಯರು ಗುಂಪು ಗುಂಪಾಗಿ ನಿಂತಿದ್ದು, ಸಾರ್ವಜನಿಕರು ಘೋಷಯಾತ್ರೆನ್ನು ಸಂಭ್ರಮದಿಂದ ವೀಕ್ಷಿಸಿದರು.ಸುಂಟಿಕೊಪ್ಪ ಪಟ್ಟಣದ ಸುಂಟಿಕೊಪ್ಪ ಮುಸ್ಲಿಂ ಜಮಾಯತ್‌ನ ಇಬ್ರಾಹಿಂ ಅಹೌಸನಿ, ಸುನ್ನಿ ಹನಫಿ ಮುಸ್ಲಿಂ ಜಮೀಯ ಮಸೀದಿ ಮೌಲನಾ ಜುಬ್ಬೇರ್ ಅಜಾರತ್, ಸುನ್ನಿಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಮೌಲವಿ ಇಕ್ಬಾಲ್ ಉಸ್ತಾದ್ ಹಾಗೂ ಗದ್ದೆಹಳ್ಳದ ನೂರುಜುಮ್ಮ ಮಸ್ಜಿದ್‌ನ ಅಬ್ಧುಲ್ ಅಜೀಜ್ ಅವರು ಧಾರ್ಮಿಕ ಪ್ರವಚನ ಪ್ರಾರ್ಥನೆಯನ್ನು ಮಸೀದಿಯ ಮೌಲ್ವಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ನಂತರ ಸಭಾ ಸಮಾರಂಭದ ವೇದಿಕೆಯಲ್ಲಿ ಧಾರ್ಮಿಕ ಪ್ರವಚನಗಳನ್ನು ಆಶೀರ್ವಚನಗಳನ್ನು ನೀಡಿದರು.ಹಬ್ಬ ಆಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಘಟಿಸದಂತೆ ಮುಂಜಾಗ್ರತ ಕ್ರಮವನ್ನು ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜ್, ಅಪರಾಧ ವಿಭಾಗದ ಇನ್ಸ್ಪೇಕ್ಟರ್ ಭಾರತಿ ಹಾಗೂ ಸಿಬ್ಬಂದಿ ಪೊಲೀಸರು ಬಿಗಿ ಬಂದೋಬಸ್ತನ್ನು ಏರ್ಪಡಿಸಿದ್ದರು.