ಮಸ್ಕಿ ದ. ಭಾರತದ ನಂ.1 ಮಹತ್ವಾಕಾಂಕ್ಷಿ ತಾಲೂಕು

KannadaprabhaNewsNetwork |  
Published : Dec 09, 2023, 01:15 AM IST
08-12-ಎಂಎಸ್ಕೆ-01: | Kannada Prabha

ಸಾರಾಂಶ

180 ತಾಲೂಕುಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನಕ್ಕೆ. ನೀತಿ ಆಯೋಗದಿಂದ ₹1.5 ಕೋಟಿ ಪುರಸ್ಕಾರ. ಮಹತ್ವಾಕಾಂಕ್ಷಿ ಜಿಲ್ಲೆ ರೀತಿಯದ್ದೇ ಆದ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮ. ಗ್ರಾಮೀಣ ಜನರ ಗುಣಮಟ್ಟ ಹೆಚ್ಚಿಸಿ, ಆಡಳಿತ ಸುಧಾರಣೆಗಾಗಿ ರೂಪಿಸಿದ ಸ್ಪರ್ಧೆ ಇದು. ನೀತಿ ಆಯೋಗದ ವಿವಿಧ ಮಾನದಂಡಗಳ ಸೂಚ್ಯಂಕದಲ್ಲಿ ನಂ.1 ಸ್ಥಾನ ಪಡೆದ ಮಸ್ಕಿ. ಮೂಲಸೌಲಭ್ಯ, ಶಿಕ್ಷಣ, ಕೃಷಿ ಸೇರಿ ವಿವಿಧ ಮಾನದಂಡಗಳನ್ನು ಆಧರಿಸಿ ರ್‍ಯಾಂಕಿಂಗ್‌. ಮಹತ್ವಾಕಾಂಕ್ಷಿ ಜಿಲ್ಲೆ ರೀತಿಯದ್ದೇ ಆದ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮ. ಗ್ರಾಮೀಣ ಜನರ ಗುಣಮಟ್ಟ ಹೆಚ್ಚಿಸಿ, ಆಡಳಿತ ಸುಧಾರಣೆಗಾಗಿ ರೂಪಿಸಿದ ಸ್ಪರ್ಧೆ ಇದು. ನೀತಿ ಆಯೋಗದ ವಿವಿಧ ಮಾನದಂಡಗಳ ಸೂಚ್ಯಂಕದಲ್ಲಿ ನಂ.1 ಸ್ಥಾನ ಪಡೆದ ಮಸ್ಕಿ. ಮೂಲಸೌಲಭ್ಯ, ಶಿಕ್ಷಣ, ಕೃಷಿ ಸೇರಿ ವಿವಿಧ ಮಾನದಂಡಗಳನ್ನು ಆಧರಿಸಿ ರ್‍ಯಾಂಕಿಂಗ್‌.

- ಮಹತ್ವಾಕಾಂಕ್ಷಿ ಜಿಲ್ಲೆ ರೀತಿಯದ್ದೇ ಆದ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮ- ಗ್ರಾಮೀಣ ಜನರ ಗುಣಮಟ್ಟ ಹೆಚ್ಚಿಸಿ, ಆಡಳಿತ ಸುಧಾರಣೆಗಾಗಿ ರೂಪಿಸಿದ ಸ್ಪರ್ಧೆ ಇದು- ನೀತಿ ಆಯೋಗದ ವಿವಿಧ ಮಾನದಂಡಗಳ ಸೂಚ್ಯಂಕದಲ್ಲಿ ನಂ.1 ಸ್ಥಾನ ಪಡೆದ ಮಸ್ಕಿ

- ಮೂಲಸೌಲಭ್ಯ, ಶಿಕ್ಷಣ, ಕೃಷಿ ಸೇರಿ ವಿವಿಧ ಮಾನದಂಡಗಳನ್ನು ಆಧರಿಸಿ ರ್‍ಯಾಂಕಿಂಗ್‌

---ಕನ್ನಡಪ್ರಭ ವಾರ್ತೆ ಮಸ್ಕಿ

ನೀತಿ ಆಯೋಗ ಬಿಡುಗಡೆ ಮಾಡಿದ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮ (ಎಬಿಪಿ)ದ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ದಕ್ಷಿಣ ಭಾರತದಲ್ಲಿಯೇ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದೆ. ಮೂಲಸೌಲಭ್ಯ, ಶಿಕ್ಷಣ, ಕೃಷಿ ಸೇರಿ ವಿವಿಧ ಮಾನದಂಡಗಳ ಆಧಾರದ ಮೇಲೆ ಈ ರ್‍ಯಾಂಕಿಂಗ್‌ ನೀಡಲಾಗಿದ್ದು, ಮೊದಲ ಸ್ಥಾನ ಪಡೆದ ಮಸ್ಕಿ ತಾಲೂಕು 1.5 ಕೋಟಿ ರು. ಪ್ರೋತ್ಸಾಹಧನಕ್ಕೆ ಭಾಜನವಾಗಿದೆ.

ಗ್ರಾಮೀಣ ಜನರ ಗುಣಮಟ್ಟ ಹೆಚ್ಚಿಸುವ, ಆಡಳಿತ ಸುಧಾರಿಸುವ ಗುರಿಯೊಂದಿಗೆ ನೀತಿ ಆಯೋಗವು ಜಾರಿ ತಂದಿರುವ ಮಹತ್ವಾಕಾಂಕ್ಷಿ ಜಿಲ್ಲೆ ಕಾರ್ಯಕ್ರಮ ಮಾದರಿಯಲ್ಲೇ ಅನುಷ್ಠಾನಗೊಳಿಸಿರುವ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮ (ಎಬಿಪಿ)ದಲ್ಲಿ ಮಸ್ಕಿ ತಾಲೂಕು ಉತ್ತಮ ಸುಧಾರಣೆ ದಾಖಲಿಸಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ. ಇದೇ ವರ್ಷ ಬಿಡುಗಡೆಯಾಗಿದ್ದ ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮ(ಎಡಿಪಿ)ಗಳ ಪಟ್ಟಿಯಲ್ಲಿ ರಾಯಚೂರು ಜಿಲ್ಲೆ ಕೂಡ ಪ್ರಥಮ ಸ್ಥಾನ ಪಡೆದಿದ್ದು ವಿಶೇಷ.

185 ತಾಲೂಕುಗಳ ಸ್ಪರ್ಧೆ:

ಡಿ.6ರಂದು ಕೇಂದ್ರದ ನೀತಿ ಆಯೋಗ ಪ್ರಕಟಿಸಿದ ಆಯೋಗದ ಮಾನದಂಡಗಳ ಅಭಿವೃದ್ಧಿ ಸೂಚ್ಯಂಕದಲ್ಲಿ ದಕ್ಷಿಣ ಭಾರತದ (ಝೋನ್-3ರ) 186 ತಾಲೂಕುಗಳಲ್ಲಿ ಮಸ್ಕಿ ತಾಲೂಕು ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದರಿಂದ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗಾಗಿ ಈ ಕಾರ್ಯಕ್ರಮದಡಿ ಜಿಲ್ಲಾಧಿಕಾರಿಗಳ ಖಾತೆಗೆ ಕೇಂದ್ರದಿಂದ 1.50 ಕೋಟಿ ರು. ಜಮೆಯಾಗಲಿದೆ. ಈ ಅನುದಾನವು ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಬಡತನ ನಿರ್ಮೂಲನೆ, ಆರೋಗ್ಯ ಮತ್ತು ಪೋಷಣೆ, ಶಿಕ್ಷಣ, ಕೃಷಿ, ಜಲ ಮೂಲಗಳ ಸಂರಕ್ಷಣೆ ಸೇರಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಬಳಕೆಯಾಗಲಿದೆ.

ಈಗಾಗಲೇ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮದಡಿ ಅಂತರ್ಜಲ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತಾಲೂಕಿನ ಗುಂಡ ಗ್ರಾಪಂನ ರತ್ನಾಪುರ ಹಟ್ಟಿ, ಬಪ್ಪೂರು ಗ್ರಾಪಂನ ಗುಡಗಲದಿನ್ನಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಪಂ ಯೋಜನಾ ನಿರ್ದೇಶಕರು ಚರ್ಚಿಸಿದ್ದು, ಕೆಲ ದಿನಗಳಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.

-ಬಾಕ್ಸ್‌-

ಏನಿದು ಎಬಿಪಿ?

ಆಸ್ಪಿರೇಷನಲ್‌ ಬ್ಲಾಕ್‌ ಪ್ರೋಗ್ರಾಂ(ಎಬಿಪಿ) ಅಂದರೆ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮವನ್ನು ಕಳೆದ ವರ್ಷ ಜನವರಿ ತಿಂಗಳಲ್ಲಿ ಘೋಷಣೆ ಮಾಡಲಾಗಿತ್ತು. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮಗಳ(ಎಡಿಪಿ) ಮಾದರಿಯಲ್ಲೇ ಈ ಕಾರ್ಯಕ್ರಮ ಜಾರಿಯಾಗಿದೆ. ಶಿಕ್ಷಣ, ಮೂಲಸೌಲಭ್ಯ, ನೀರಾವರಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಮೂಲಕ ಜನರ ಜೀವನಮಟ್ಟ ಎತ್ತರಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. 27 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 329 ಜಿಲ್ಲೆಗಳ 500 ತಾಲೂಕುಗಳು ಈ ಯೋಜನೆಯ ಭಾಗ. ಒಟ್ಟು 40 ಮಾನದಂಡಗಳ ಆಧಾರದ ಮೇಲೆ ತಾಲೂಕುಗಳಿಗೆ ರ್‍ಯಾಂಕಿಂಗ್‌ ನೀಡಲಾಗುತ್ತದೆ.

-ಕೋಟ್‌-

ಸುಸ್ಥಿರ ಅಭಿವೃದ್ಧಿ ಗುರಿಗಳ ಜೊತೆಗೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಈ ಯೋಜನೆಯಡಿ ಸಿಗುವ ಅನುದಾನವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಬಡತನ ನಿರ್ಮೂಲನೆ, ಆರೋಗ್ಯ ಮತ್ತು ಪೋಷಣೆ, ಶಿಕ್ಷಣ, ಕೃಷಿ, ಜಲ ಮೂಲಗಳ ಸಂರಕ್ಷಣೆ ಸೇರಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

- ಅರಮನೆ ಸುಧಾ, ತಹಸೀಲ್ದಾರ್ ಮಸ್ಕಿ---ಮಸ್ಕಿ ತಾಲೂಕು ಸಿದ್ಧಪಡಿಸಿದ ಎಸ್‌ಡಬ್ಲ್ಯುಟಿಪಿ ಮಾದರಿ ಅರ್ಜಿಯಲ್ಲಿ ಈ ತಾಲೂಕಿನಲ್ಲಿ ಆರೋಗ್ಯ, ಪೌಷ್ಟಿಕತೆ ನಿವಾರಣೆ, ಶಿಕ್ಷಣ, ಕೃಷಿ ಮತ್ತು ಸಂಬಂಧಿತ ಸೇವೆಗಳ ಅಭಿವೃದ್ಧಿ ಕುರಿತು ಸಲ್ಲಿಸಿದ ವರದಿ ಬಗ್ಗೆ ನೀತಿ ಆಯೋಗ ಪ್ರಶಂಸೆ ವ್ಯಕ್ತಪಡಿಸಿದೆ. - ಉಮೇಶ್‌, ತಾಪಂ ಇಒ ಮಸ್ಕಿ----ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮದಡಿ ನೀತಿ ಆಯೋಗ ಆಯ್ಕೆ ಮಾಡಿದ ದಕ್ಷಿಣ ಭಾರತದ 180 ತಾಲೂಕುಗಳ ಪೈಕಿ ಮಸ್ಕಿ ತಾಲೂಕು ಪ್ರಥಮ ಸ್ಥಾನ ಪಡೆದಿರುವುದು ಖುಷಿಯ ವಿಚಾರ. ಈ ಸಾಧನೆಯಿಂದ ಸಿಗುವ 1.50 ಕೋಟಿ ರು. ಅನುದಾನದಲ್ಲಿ ಆಯೋಗ ನಿಗದಿಪಡಿಸಿದ ಅಭಿವೃದ್ಧಿ ಸೂಚಿಗಳಲ್ಲಿ ಉತ್ತಮ ಸಾಧನೆ ತೋರಲು ಬಳಸಲಾಗುವುದು.- ರಾಹುಲ್ ತುಕಾರಾಂ ಪಾಂಡ್ವೆ, ಜಿಪಂ ಸಿಇಒ ರಾಯಚೂರು

08-12-ಎಂಎಸ್ಕೆ-01ಎಬಿಪಿಯಡಿ ಗುರುತಿಸಿದ ಮಸ್ಕಿ ತಾಲೂಕಿನ ಬಪ್ಪೂರು ಗ್ರಾಪಂ ಗುಡಗಲದಿನ್ನಿ ಕೆರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!