ವಿಜಯಪುರ: ಶರಣರು ಇಷ್ಟಲಿಂಗದ ಹೊರತಾಗಿ ಬೇರಾವ ದೇವತೆಗಳನ್ನೂ ಪೂಜಿಸುವುದಿಲ್ಲ ಎಂದು ಕೂಡಲಸಂಗಮದ ನಿರಂಜನ ಪ್ರಣವ ಸ್ವರೂಪಿ ಶ್ರೀ ಪ್ರಭುಲಿಂಗ ಸ್ವಾಮೀಜಿ ತಿಳಿಸಿದರು.
ರಾಷ್ಟ್ರೀಯ ಬಸವದಳದ ಜಯದೇವ್ ಮಾತನಾಡಿ, ವಿಶ್ವಗುರು ಬಸವಣ್ಣನವರು ೧೭-೦೭-೧೧೯೬ರಂದು ಉರಿಯುಂಡ ಕರ್ಪೂರದಂತೆ, ಸಮುದ್ರ ಸೇರಿದ ನದಿಯಂತೆ ಲಿಂಗೈಕ್ಯರಾದ ದಿನವನ್ನು ''''''''ಬಸವ ಪಂಚಮಿ'''''''' ಎಂದೂ, ಅದರ ಮರುದಿನವೇ ದಾಸೋಹಮೂರ್ತಿ ನೀಲಾಂಬಿಕೆ ತಾಯಿ ಲಿಂಗೈಕ್ಯರಾದ ದಿನವನ್ನು ''''''''ನೀಲಾಂಬಿಕೆ ಷಷ್ಠಿ'''''''' ಎಂದೂ ಶರಣರು ಆಚರಿಸುತ್ತಿದ್ದಾರೆಂದರು.
ಬೇಕರಿ ವಿ.ಶಿವಣ್ಣ ಮಾತನಾಡಿ, ೧೨ನೆಯ ಶತಮಾನದಲ್ಲೇ ಬಸವಣ್ಣನವರು ಜಾತಿ ಪದ್ಧತಿ ವಿರುದ್ಧ ಧ್ವನಿ ಎತ್ತಿ, ಲಿಂಗಭೇದ ಹೋಗಲಾಡಿಸುವ ಸಾಹಸ ಮಾಡಿದರು. ಅನುಭವ ಮಂಟಪದ ಅಡಿಯಲ್ಲಿ ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಅವರು ಮಾಡಿದ ಸಾಮಾಜಿಕ ಕ್ರಾಂತಿ ಅಪ್ರತಿಮ. ಇಂದಿಗೂ ಅವರು ಹಾಕಿಕೊಟ್ಟ ಮಾರ್ಗವೇ ನಮಗೆ ದಾರಿದೀಪ ಎಂದರು.ಕಾರ್ಯಕ್ರಮದಲ್ಲಿ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗದ ಸಂಚಾಲಕ ಸುರೇಶ್ ಬಾಬು, ಉಪಾಧ್ಯಕ್ಷೆ ಅಂಬಾಭವಾನಿ, ಕೋರಮಂಗಲ ರುದ್ರಪ್ಪ ಟ್ರಸ್ಟ್ ಅಧ್ಯಕ್ಷ ಸಿ.ಭಾಸ್ಕರ್, ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ದೀಪಾ ಮುರಳೀಧರ್, ಮಹಂತಿನ ಮಠ ಧರ್ಮ ಸಂಸ್ಥೆ ಖಜಾಂಚಿ ಎ.ಮಧು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಡಪದ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಭಾರತಿ, ಎಎಸ್‌ವಿಎನ್‌ವಿ ಸಂಘದ ನಿರ್ದೇಶಕಿ ಸುವರ್ಣ ಶಿವಕುಮಾರ್, ಬಾಬು ರಾಜೇಂದ್ರ ಪ್ರಸಾದ್ ಇತರರು ಉಪಸ್ಥಿತರಿದ್ದರು.
ವಿಜಯಪುರದಲ್ಲಿ ರಾಷ್ಟ್ರೀಯ ಬಸವದಳ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ''''ಬಸವ ಪಂಚಮಿ'''' ಕಾರ್ಯಕ್ರಮದಲ್ಲಿ ಕೂಡಲಸಂಗಮದ ನಿರಂಜನ ಪ್ರಣವ ಸ್ವರೂಪಿ ಪ್ರಭುಲಿಂಗ ಸ್ವಾಮೀಜಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು.