ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಶಿವಾನಂದ ಜೀನನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಿ.ಎಸ್. ಯಡಿಯೂರಪ್ಪ ಜನ್ಮದಿನ ನಿಮಿತ್ತ ಬಾಗಲಕೋಟೆ ಬಿಜೆಪಿಯಿಂದ ಹಮ್ಮಿಕೊಂಡ ಸಮಾರಂಭದಲ್ಲಿ ಬಿಜೆಪಿ ಅವಧಿಯ ವಿವಿಧ ಯೋಜನೆಗಳ ಫಲಾನುಭವಿಗಳ ಸನ್ಮಾನಿಸಿ ಮಾತನಾಡಿದರು.
ಯಡಿಯೂರಪ್ಪನ್ನವರು ಏಕಾಂಗಿಯಾಗಿ ರಾಜ್ಯ ಸುತ್ತಾಡಿ ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸಿದ ಮಹಾನ್ ನಾಯಕ, ಅವರು ಬಡವರ ಭಾಗ್ಯವಿದಾತರಾಗಿ ಕೆಲಸ ಮಾಡಿದವರು. ಅವರು ಸಿಎಂ ಆದಾಗ ಜಾರಿಗೆ ತಂದ ಭಾಗ್ಯಲಕ್ಷ್ಮೀ ಯೋಜನೆ ಲಕ್ಷಾಂತರ ಹೆಣ್ಣುಮಕ್ಕಳ ಬದುಕಿಗೆ ಬೆಳಕಾಗಿದೆ. ಜೊತೆಗೆ ಕ್ಷೀರಭಾಗ್ಯ, ಸಂಧ್ಯಾಸುರಕ್ಷಾ ಹಾಗೂ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿಸಾಲ ಯೋಜನೆ ಜಾರಿಗೆ ತಂದರು. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ರೈತ ಮಗನಾಗಿ ನಾಡಿಗೆ ಕೊಡುಗೆ ನೀಡಿದರು ಎಂದು ಹೇಳಿದರು.ಫಲಾನುಭವಿಗಳ ಸನ್ಮಾನ:
ಕಾರ್ಯಕ್ರಮದಲ್ಲಿ ಸಹ ಪ್ರಭಾರಿ ಬಸವರಾಜ ಯಂಕಂಚಿ, ಗುಂಡುರಾವ ಶಿಂಧೆ, ರಾಜು ಶಿಂತ್ರೆ, ಶಶಿಕುಮಾರ ಗುತ್ತೆನ್ನವರ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಸತ್ಯನಾರಾಯಣ ಹೇಮಾದ್ರಿ, ಚಂದ್ರು ರಾಮವಾಡಗಿ, ಯಲ್ಲಪ್ಪ ಎಳಮ್ಮಿ, ಶಂಕರ ಕದಂ, ಹೊನ್ನಪ್ಪ ಅಂಬಿಗೇರ, ಕೃಷ್ಣಾ ಖಾಕಂಡಕಿ, ಬಸವರಾಜ ನೀಲನಾಯಕ, ಬಸವರಾಜ ಬಡಿಗೇರ, ರಮೇಶ ಉಪ್ಪಾರ ಹಾಗೂ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.