ಕಾರಟಗಿ: ಗ್ರಾಮೀಣ ಪ್ರದೇಶದಲ್ಲಿ ಶ್ರಾವಣ ಹಾಗೂ ಕಾರ್ತಿಕ ಮಾಸಗಳಲ್ಲಿ ನಡೆಯುವ ಪುರಾಣ ಪ್ರವಚನಗಳ ಸಂದರ್ಭದಲ್ಲಿ ಆಯೋಜಿಸುವ ಸಾಮೂಹಿಕ ವಿವಾಹಗಳಿಂದ ಬಡಜನರಿಗೆ ಅನುಕೂಲವಾಗಿದ್ದು, ಇಂತಹ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಿವೆ ಎಂದು ಬುಕ್ಕಸಾಗರದ ಸಂಸ್ಥಾನಮಠದ ಕರಿಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮರುಳಸಿದ್ಧಯ್ಯ ಹಿರೇಮಠ ಮಾತನಾಡಿ, ವೈದಿಕ ಸಂಪ್ರದಾಯಕ್ಕಿಂತ ವೈಚಾರಿಕ ಚಿಂತನೆ ಮೌಲ್ಯಯುತವಾದುದು. ಜಾತಿಗಿಂತ ನೀತಿ ಹಾಗೂ ಮಾನವೀಯತೆ ದೊಡ್ಡದು. ಮೂಢನಂಬಿಕೆಗಳಿಗೆ ಕಟ್ಟುಬೀಳದೆ ಆದರ್ಶ ಜೀವನ ನಡೆಸಬೇಕು. ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಸಾಧಿಸಲು ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಎಲ್ಲೆಡೆ ಹೆಚ್ಚಾಗಿ ಆಯೋಜಿಸಬೇಕು ಎಂದರು.
15 ಜೋಡಿ ನವವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶ್ರೀ ಶರಣ ಬಸವೇಶ್ವರ ದೇವಸ್ಥಾನದಿಂದ ವಾದ್ಯಮೇಳಗಳೊಂದಿಗೆ ನವವಧು-ವರರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.ಪುರಾಣ ಸಮಿತಿಯ ಪ್ರಮುಖರಾದ ಗುಂಡಪ್ಪ ಕುಳಗಿ, ಕೋಟಗಿ ಮಲ್ಲಿಕಾರ್ಜುನ, ಜಗದೀಶಪ್ಪ ಅವರಾದಿ, ಶಿವರೆಡ್ಡಿ ನಾಯಕ, ಬೂದಿ ಗಿರಿಯಪ್ಪ, ಚನ್ನಬಸಪ್ಪ ಸುಂಕದ, ಸಿದ್ದರಾಮಪ್ಪ ಪಲ್ಲೇದ, ಅಮರೇಶ ಸಾಲಗುಂದಿ, ಉಮೇಶ ಭಂಗಿ, ಶರಣಪ್ಪ ಗದ್ದಿ, ಅಯ್ಯಪ್ಪ ಉಪ್ಪಾರ, ಬಾಲಪ್ಪ ಆರಾಪುರ, ಯಂಕಪ್ಪ ಹತ್ತಿಕಾಳ, ರುದ್ರೇಶ ಗಣಾಚಾರಿ, ಶರಣಪ್ಪ ದಿವಟರ್, ಗುರುಲಿಂಗಯ್ಯಸ್ವಾಮಿ, ಬಸವರಾಜಸ್ವಾಮಿ ಪಾಲ್ಗೊಂಡಿದ್ದರು.