ಹುಬ್ಬಳ್ಳಿ:
ಭಾನುವಾರ ಇಲ್ಲಿನ ಗೋಕುಲ್ ರಸ್ತೆಯ ಅಕ್ಷಯ್ ಪಾರ್ಕ್ ಸಂತೆ ಮೈದಾನದಲ್ಲಿ ಸಮತಾ ಸೇವಾ ಸಂಸ್ಥೆ ಹಾಗೂ ನವಯುಗ ಸಂಘಟನೆ ವತಿಯಿಂದ 24ನೇ ವರ್ಷದ ಸರ್ವಧರ್ಮ ಉಪನಯನ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೃಷ್ಣ ಗಂಡಗಾಳೆಕರ್ ನೇತೃತ್ವದಲ್ಲಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಎಲ್ಲರ ಬಾಳಲ್ಲಿ ಬೆಳಕು ಚೆಲ್ಲಿದ್ದಾರೆ. ನೂತನ ವಧುಗಳು ಹೊಸ ಮನೆ ಪ್ರವೇಶಿಸಿದ ಬಳಿಕ ಅತ್ತೆ-ಮಾವನನ್ನು ತಂದೆ-ತಾಯಿಯಂತೆ ನೋಡಿಕೊಳ್ಳಬೇಕು. ಹಾಗೆಯೇ ಮನೆಗೆ ಸೊಸೆಯಾಗಿ ಬರುವ ವಧುವನ್ನು ಪತಿ, ಅತ್ತೆ, ಮಾವ ಮನೆಯ ಮಗಳಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಮಾತನಾಡಿ, ನವಯುಗ ಸಂಘಟನೆಯ ಮುಂದಾಳತ್ವದಲ್ಲಿ ಜನಪರ ಕೆಲಸ ಹಮ್ಮಿಕೊಂಡಿರುವುದು ಅಭಿನಂದನಾರ್ಹ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವಂತಾದರೆ ಬಡವರಿಗೆ, ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿದೆ ಎಂದರು,
ಈ ವೇಳೆ ಮುಖಂಡ ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ಸಿದ್ದು ಮೊಗಲಿಶೆಟ್ಟರ್, ಸುಭಾಸಸಿಂಗ್ ಜಮಾದಾರ, ಆನಂದ ಗುರುಸ್ವಾಮಿ, ಸುಬ್ರಮಣ್ಯಂ ಶಿರಕೋಳ, ಪ್ರಕಾಶ ಬಾಫನಾ, ತೋಟಪ್ಪ ನಿಡಗುಂದಿ, ರವಿ ನಾಯಕ, ಸೀಮಾ ಲದವಾ, ರಮೇಶ ಮಾದಪ್ಪನವರ, ರಾಜು ಕಾಳಿ, ಸಂತೋಷ ವರ್ಣೇಕರ, ನಾಗರಾಜ ಕಲಾಲ್, ಮುಕುಂದ ಗುಗ್ಗರಿ, ರವಿ ಬಂಕಾಪುರ, ನಾರಾಯಣ ಗಂಡಗಾಳೆಕರ, ರವೀಂದ್ರ ಎಲಕಾನ, ಭೀಮಣ್ಣ ಗಂಡಗಾಳೆಕರ, ಸಂಗೀತ ಬದ್ದಿ ಸೇರಿದಂತೆ ಹಲವರಿದ್ದರು.