ಇಳಕಲ್ಲ ನಗರದ ಗಾಯತ್ರಿ ಮಹಿಳಾ ಸಂಘದ ಗಾಯತ್ರಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕಿಯರು ಸಿಹಿ ಹಾಗೂ ಗುಲಾಬಿ ಹೂವು ಕೊಟ್ಟು ಹಣೆಗೆ ತಿಲಕ ಇಟ್ಟು ಆರತಿ ಮಾಡಿ ಸ್ವಾಗತಿಸಿಕೊಂಡರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ಗಾಯತ್ರಿ ಮಹಿಳಾ ಸಂಘದ ಗಾಯತ್ರಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕಿಯರು ಸಿಹಿ ಹಾಗೂ ಗುಲಾಬಿ ಹೂವು ಕೊಟ್ಟು ಹಣೆಗೆ ತಿಲಕ ಇಟ್ಟು ಆರತಿ ಮಾಡಿ ಸ್ವಾಗತಿಸಿಕೊಂಡರು. ನಂತರ ಶಾಲೆಯವರು, ಮಕ್ಕಳ ಪಾಲಕರು ಸಾಮೂಹಿಕ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದರು. ವೀರೇಶ ಸ್ವಾಮಿ ದೇವಾಂಗಮಠ ಪೂಜೆ ನೆರವೇರಿಸಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರು.
ಜಯಶ್ರೀ ರಾಮದರ್ಗ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ವೀಣಾ ದೇವಾಂಗಮಠ ಮಾತನಾಡಿ ಪ್ರಾರಂಭದಲ್ಲಿರುವ ಉತ್ಸಾಹ ಇದೇ ರೀತಿ ವರ್ಷಪೂರ್ತಿ ಇರಲಿ ಹಾಗೂ ತಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಜಯಶ್ರೀ ರಾಮದರ್ಗ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಬೇಕೆಂದರು. ಶಿಕ್ಷಕರ ಹಾಗೂ ಪಾಲಕರ ಮಾತನ್ನು ಪಾಳಿಸಿ ವಿದ್ಯಾವಂತರಾಗಿ ಎಂದು ಮಕ್ಕಳಿಗೆ ತಿಳಿ ಹೇಳಿದರು. ಇದೇ ವೇಳೇ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ನಂತರ ಮಕ್ಕಳಿಗೆ ಸಿಹಿ ನೀಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.