ಕನ್ನಡಪ್ರಭ ವಾರ್ತೆ ಮದ್ದೂರು
ರೈತ ಅನ್ನದಾತ ದೇಶದ ಬೆನ್ನೆಲುಬು, ರೈತನೇ ದೈವ ಸ್ವರೂಪಿಯೆಂದು ಸ್ವಾತಂತ್ರ್ಯೋತ್ಸವದಂದು ಜೈ ಕಿಸಾನ್ ಘೋಷ ವಾಕ್ಯವೂ ಹಳ್ಳಿ-ಹಳ್ಳಿಗೂ ತಲುಪುವಂತೆ, ರೈತನೂ ಕೂಡ ದೇಶದ ನಿರ್ಮಾಣದಲ್ಲಿ ಅತೀ ದೊಡ್ಡ ಶ್ರಮಿಕ, ಪಾಲುದಾರನೆಂಬ ವಾಸ್ತವ ಸತ್ಯವನ್ನು ಗಟ್ಟಿ ಧ್ವನಿಯಲ್ಲಿ ಜಗತ್ತಿಗೆ ತಿಳಿಸಿಕೊಡುವ ಉದ್ದೇಶದೊಂದಿಗೆ ರೈತ ರಕ್ತದಾನ ಶಿಬಿರವನ್ನು ಸಂಘಟಕರು ಆಯೋಜಿಸಿದ್ದಾರೆ.
ಕಾವೇರಿ ನೀರಿನ ಹೋರಾಟದಲ್ಲಿ ರಕ್ತ ಕೊಟ್ಟೇವೂ... ನೀರು ಕೊಡೆವು ಎಂಬ ಮಂಡ್ಯ ರೈತರ ಹಳೇ ಘೋಷವಾಕ್ಯ ಅಂದು ದೇಶ ಆಳುವವರ ನಿದ್ದೆಗೆಡಿಸಿತ್ತು.... ಇಂದು ಅದೇ ಮಂಡ್ಯ ಜಿಲ್ಲೆಯ ರೈತರು.. ರೈತರ ಮಕ್ಕಳು.. ರೈತರ ಶ್ರಮದ ಪಾಲನ್ನು ಅವಲಂಬಿಸಿ ಬದುಕುತ್ತಿರುವವರೆಲ್ಲಾ ಸೇರಿ ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಡರೋಗಿಗಳ ಜೀವಗಳಿಗಾಗಿ, ಅಮೂಲ್ಯ ಜೀವಗಳ ರಕ್ಷಣೆಗಾಗಿ ರಕ್ತ ಕೊಟ್ಟೇ ತೀರುವೆವು ಎಂಬ ಘೋಷ ವಾಕ್ಯದೊಂದಿಗೆ ರಕ್ತದಾನದ ಮೂಲಕ ರೈತ ಅನ್ನದಾತನಾಗಿ, ರಕ್ತದಾನಿಯೂ ಆಗಿದ್ದಾನೆ ಎಂದು ಸಾಬೀತು ಮಾಡುವುದು, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಅನ್ನದಾತನ ಹೆಸರಿನಲ್ಲಿ ರಕ್ತದಾನ ಶಿಬಿರ ನಡೆಯುತ್ತಿದೆ. ಶಿಬಿರವನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.ಆ.೧೭ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಶ್ರೀಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘ, ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯಿಂದ ಬೃಹತ್ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆ.೧೭ರ ಬೆಳಗ್ಗೆ ೯ ಗಂಟೆಗೆ ನಗರದ ಶ್ರೀಲಕ್ಷ್ಮೀಜನಾರ್ದನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಟಿ.ಹನುಮಂತು ತಿಳಿಸಿದರು.
ಗೋಷ್ಠಿಯಲ್ಲಿ ಶ್ರೀ ಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಷಡಕ್ಷರಿ, ಉಪಾಧ್ಯಕ್ಷ ಜಗದೀಶ್, ನಿರ್ದೇಶಕರಾದ ಎಂ.ಎಸ್.ಶಿವಪ್ರಕಾಶ್, ಗುಳ್ಳಪ್ಪ ಇದ್ದರು.