ಗ್ರಾಮಗಳಲ್ಲಿ ಗದ್ದಿಗೌಡರ ಪರ ಭರ್ಜರಿ ಪ್ರಚಾರ

KannadaprabhaNewsNetwork |  
Published : Apr 26, 2024, 12:48 AM IST
ಲೋಕಾಪುರ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಲೋಕಾಪುರ: ಲೋಕಸಭೆ ಚುನಾವಣೆ ಪ್ರಚಾರ ನಿಮಿತ್ತ ಪೆಟ್ಲೂರ, ತಿಮ್ಮಾಪುರ, ಮುದ್ದಾಪುರ, ಹೆಬ್ಬಾಳ ಚಿತ್ರಭಾನುಕೋಟಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಬ್ಬರದ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರಲೋಕಸಭೆ ಚುನಾವಣೆ ಪ್ರಚಾರ ನಿಮಿತ್ತ ಪೆಟ್ಲೂರ, ತಿಮ್ಮಾಪುರ, ಮುದ್ದಾಪುರ, ಹೆಬ್ಬಾಳ ಚಿತ್ರಭಾನುಕೋಟಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಬ್ಬರದ ಪ್ರಚಾರ ನಡೆಸಿದರು.

ಈ ವೇಳೆ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗಣ್ಣ ಕಾತರಕಿ ಮಾತನಾಡಿ, ದೇಶ ಮೊದಲು ಎಂಬ ಚಿಂತೆಯಲ್ಲಿ ಪ್ರಾರಂಭವಾದ ಬಿಜೆಪಿ ನಿರಂತರ ಹೋರಾಟ, ಸಂಘರ್ಷ ಮತ್ತು ಪಕ್ಷದ ಅನೇಕ ಹಿರಿಯ ನಾಯಕರ ಬಲಿದಾನದಿಂದಾಗಿ ಇಂದು ಪ್ರಪಂಚದ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮನವರಿಕೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಮಾತನಾಡಿ, ಕಳೆದ ೧೦ ವರ್ಷಗಳಲ್ಲಿ ಕರ್ನಾಟಕಕ್ಕೆ ಕೇಂದ್ರ ನೀಡುವ ಅನುದಾನ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ೨೦೦೪ ರಿಂದ ೨೦೧೪ ರ ವರೆಗಿನ ಕಾಂಗ್ರೆಸ್‌ ಅವಧಿಗೆ ಹೋಲಿಸಿದರೆ, ಕರ್ನಾಟಕಕ್ಕೆ ನೀಡುತ್ತಿರುವ ಅನುದಾನ ಪ್ರಮಾಣ ಶೇ.೨೭೩ ರಷ್ಟು ಏರಿಕೆಯಾಗಿದೆ, ಜನರಿಗೆ ಕಾಂಗ್ರೆಸ್‌ ಬರೀ ಸುಳ್ಳುಗಳನ್ನು ಹೇಳುತ್ತ ಬಂದಿದೆ, ಜನರಿಗೆ ಮೋದಿ ಮಾಡಿರುವ ಕೆಲಸಗಳ ಬಗ್ಗೆ ಜ್ಞಾನವಿದೆ. ದೇಶದ ಹಿತ ಬಿಜೆಪಿ ಕೈಯಲ್ಲಿದೆ. ಎಲ್ಲರೂ ಬಿಜೆಪಿಗೆ ಮತ ನೀಡಿ ಎಂದು ವಿನಂತಿಸಿದರು.

ಬಿಜೆಪಿ ಮುಖಂಡರಾದ ಎಂ.ಎಂ. ವಿರಕ್ತಮಠ, ವ್ಹಿ.ಎಂ. ತೆಗ್ಗಿ, ಕಲ್ಲಪ್ಪಣ್ಣ ಸಬರದ, ಶಿವಾನಂದ ಹುದ್ದಾರ, ಮಾರುತಿ ಕರೆನ್ನವರ, ಶ್ರೀಶೈಲಗೌಡ ಪಾಟೀಲ, ನಾಗಪ್ಪ ಅಂಬಿ, ಶ್ರೀಶೈಲ ಚಿನ್ನಣ್ಣವರ, ಬಿ.ಎಲ್. ಬಬಲಾದಿ, ಗಡ್ಡೆಪ್ಪ ಬಾರಕೇರ, ರಾಜುಗೌಡ ಪಾಟೀಲ, ಜೆಡಿಎಸ್ ತಾಲೂಕಾಧ್ಯಕ್ಷ ರಂಗನಾಥ ಮಾಯಪ್ಪಗೋಳ, ಸಿ.ಕೆ. ಪಾಟೀಲ, ಸಿದ್ದು ಪೂಜಾರ, ಸದಾಶಿವ ಪೂಜಾರಿ, ಗೋಪಾಲ ಲಮಾಣಿ, ಶಿವನಗೌಡ ಪಾಟೀಲ, ಹೊಳಬಸು ಕಾಜಗಾರ, ರಮೇಶ ದೇವರಡ್ಡಿ, ಲೋಕಣ್ಣ ಮುದ್ದಾಪುರ, ಶ್ರೀಶೈಲ ಮುದ್ದಾಪುರ, ಗೋಪಾಲಗೌಡ ಪಾಟೀಲ, ತಿಮ್ಮಾಪುರ, ಮುದ್ದಾಪುರ, ಹೆಬ್ಬಾಳ ಚಿತ್ರಭಾನುಕೋಟಿ ಗ್ರಾಮದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ