ಕನ್ನಡಪ್ರಭ ವಾರ್ತೆ ಪಾಂಡವಪುರ
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ತಾಲೂಕಿ ರೈಲ್ವೇ ನಿಲ್ದಾಣ ಸಮೀಪದ ಪಿಎಸ್‌ಎಸ್‌ಕೆ ಪ್ರೌಢಶಾಲೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾಧಿಕಾರಿಗಳು ಮತ ಯಂತ್ರಗಳನ್ನು ವಿತರಣೆ ಮಾಡದರು.ತಾಲೂಕು ಚುನಾವಣಾಕಾರಿಗಳಿಂದ ಮತಯಂತ್ರಗಳನ್ನು ಪಡೆದ ಅಧಿರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿಯೇ ಮತಯಂತ್ರಗಳನ್ನು ಪರಿಶೀಲಿಸಿಕೊಂಡು ಬಳಿ ತಮ್ಮನ್ನು ನಿಯೋಜಿಸಿದ್ದ ಮತಗಟ್ಟೆ ಕೇಂದ್ರಗಳಿಗೆ ಸಾರಿಗೆ ಬಸ್‌ಗಳ ಮೂಲಕ ತೆರಳಿದರು.
ಪಿಎಸ್‌ಎಸ್‌ಕೆ ಪ್ರೌಢ ಶಾಲೆಗೆ ಡೀಸಿ ಡಾ.ಕುಮಾರ ಹಾಗೂ ಎಸ್ಪಿ ಎನ್.ಯತೀಶ್ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಸಲು ಕ್ರಮ ವಹಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ಮತ ಕೇಂದ್ರಗಳಲ್ಲಿ ಯಾವುದೇ ರೀತಿಯ ಗೊಂದಲಗಳು ನಿರ್ಮಾಣವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.ತಾಲೂಕಿನ ಒಟ್ಟು 2,03,098 ಮತದಾರರಿದ್ದಾರೆ. ಇದರಲ್ಲಿ ಪುರುಷ -1,00,079 ಮತ್ತು ಮಹಿಳೆ 1,03,010 ಇದ್ದಾರೆ. ತಾಲೂಕಿನಲ್ಲಿ ಒಟ್ಟು 264 ಮತಗಟ್ಟೆಗಳಿದ್ದು ಇದರಲ್ಲಿ ಪಿಂಕ್- 5, ಪಿಡಬ್ಲೂಡಿ-1, ಸಾಂಪ್ರದಾಯಕ ಮತಗಟ್ಟೆ-2, ಯುವ ಮತದಾರರ ಮತಗಟ್ಟೆ-2 ನಿಯೋಜಿಸಲಾಗಿದೆ. ಚುನಾವಣಾ ಪ್ರಕ್ರಿಯೆಯಗಾಗಿ 1500 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.ಒಳರೋಗಿಗಳು ಮತದಾನ ಮಾಡಲು ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆಕನ್ನಡಪ್ರಭ ವಾರ್ತೆ ಮಂಡ್ಯಕೆ.ಎಂ.ದೊಡ್ಡಿಯಲ್ಲಿರುವ ಆಸ್ಟರ್ ಜಿ.ಮಾದೇಗೌಡರ ಆಸ್ಪತ್ರೆಯಿಂದ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಾಗಿರುವವರಿಗೆ ಮತದಾನ ಮಾಡಲು ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಹೆಚ್ಚಿನ ಆಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು. ಇದನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಯ ಒಳ ರೋಗಿಗಳಿಗೆ ಮತದಾನ ಮಾಡಲು ಉಚಿತವಾಗಿ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತಿದೆ. ಒಳ ರೋಗಿಯ ಸುರಕ್ಷತೆಯ ದೃಷ್ಟಿಯಿಂದ ವೈದ್ಯರು ಅಥವಾ ದಾದಿಯರೊಡನೆ ಕಳುಹಿಸಿ ಮತ ಚಲಾಯಿಸಿದ ನಂತರ ರೋಗಿಯನ್ನು ಮತ್ತೆ ಆಸ್ಪತ್ರೆಗೆ ಸುರಕ್ಷಿತವಾಗಿ ಮರಳಿ ಕರೆತರಲಾಗುವುದು ಎಂದು ಆಸ್ಪತ್ರೆಯ ಮುಖ್ಯಸ್ಥ ಪಿ.ಎಸ್. ಗಣೇಶಪ್ರಭು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.