
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಪೊಲೀಸ್ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಳ್ಳು ಹೇಳಿ ನಂಬಿಸಿ, ಇವರ ಕಡೆಯಿಂದ ಒಟ್ಟು ₹2,04,71,500 ಗಳನ್ನು ಹಾಕಿಸಿಕೊಂಡು ಟ್ರೇಡಿಂಗ್ ಹೆಸರಿನಲ್ಲಿ ಆನ್‌ಲೈನ್ ಮೂಲಕ ವಂಚನೆ ಮಾಡಲಾಗಿತ್ತು. ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿತರಿಗೆ ಪತ್ತೆ ಮಾಡಿ, ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ, ಈ ಮೊದಲು ₹70,00,000 ಗಳನ್ನು ದೂರುದಾರರ ಖಾತೆಗೆ ಜಮಾ ಮಾಡಿಸಲಾಗಿತ್ತು. ಪ್ರಸ್ತುತ ₹65,64,000 ಗಳನ್ನು ದೂರುದಾರರ ಖಾತೆಗೆ ಜಮಾ ಮಾಡಿಸಿದ್ದು, ಪ್ರಕರಣದಲ್ಲಿ ಒಟ್ಟು ₹1,35,64,000 ಗಳನ್ನು ಆರೋಪಿತರಿಂದ ದೂರುದಾರರಿಗೆ ಮರಳಿಸಲಾಗಿದೆ ಎಂದರು.ಎರಡನೇ ಪ್ರಕರಣ:
ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಜಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ, ತಾಲೂಕು ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಮಣಿಗಿರಿ (ನಿವೃತ್ತ) ಹಾಗೂ ಮುಧೋಳ.ಎಂ.ಟಿ (ಮರಣ ಹೊಂದಿದ್ದಾರೆ) (ಖರೀದಿ ಸಂದರ್ಭದಲ್ಲಿದ್ದವರು) ಇವರುಗಳು 2018-19ರಲ್ಲಿ ಕರ್ತವ್ಯಲೋಪ ಮಾಡಿ ಸರ್ಕಾರಕ್ಕೆ ₹75,90,000 ಗಳನ್ನು ಹಣವನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದರು. ಈ ಕುರಿತು ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು ₹27,55,183 ಗಳನ್ನು ಮರಳಿಸಲು ಆದೇಶ ಮಾಡುವಂತೆ ನ್ಯಾಯಾಲಯಕ್ಕೆ ವರದಿ ನೀಡಲಾಗಿದೆ ಎಂದರು.ಮೂರನೇ ಪ್ರಕರಣ:ಜಿಲ್ಲೆಯ ವೈದ್ಯರೊಬ್ಬರಿಗೆ ಡಿವೋರ್ಸ್ ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ, http://m.bitcoin-vt.com ಎಂಬ ವೆಬ್‌ಸೈಟ್‌ಗಳಲ್ಲಿ ಹಣ ಹೂಡಿಕೆ ಮಾಡಿ ಕ್ರಿಪ್ಟೋ ಟ್ರೇಡಿಂಗ್ ಮಾಡಿ ಲಾಭಾಂಶ ಮಾಡಿಕೊಟ್ಟು ದೂರುದಾರರ ಸಾಲ ತೀರಿಸುವುದಾಗಿ ಸುಳ್ಳು ಹೇಳಿ ನಂಬಿಸಿ ದೂರುದಾರರ ಕಡೆಯಿಂದ ತಮ್ಮ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಒಟ್ಟು ₹2,15,50,000 ಹಾಕಿಸಿಕೊಂಡು ಮೋಸ ವಂಚನೆ ಮಾಡಿದ್ದರು. ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಂಚಿಸಿದ ಆರೋಪಿತರಿಂದ ಮತ್ತು ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು ₹25,11,000 ಗಳನ್ನು ಆರೋಪಿತರಿಂದ ದೂರುದಾರರಿಗೆ ಮರಳಿಸಲಾಗಿದೆ ಎಂದರು.ನಾಲ್ಕನೇ ಪ್ರಕರಣ:
ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ Jet Serve Aviation Private Ltd. (Flyola) ಎಂಬ ವೆಬ್‌ಸೈಟ್‌ನಲ್ಲಿ ಪ್ರಯಾಗರಾಜ ವಿಮಾನ ನಿಲ್ದಾಣದಿಂದ ಪ್ರಯಾಗರಾಜ ಕುಂಭಮೇಳ ಸ್ಥಳಕ್ಕೆ ಹೆಲಿಕಾಪ್ಟರ್ ಮೂಲಕ ಹೋಗಲು ಸರ್ವಿಸ್ ಕೊಡುತ್ತೇವೆ ಎಂದು ಹೆಲಿಕಾಪ್ಟರ್ ಸರ್ವಿಸ್ ಕೊಡದೇ ₹4,08,000 ಹಣವನ್ನು ವಂಚಿಸಲಾಗಿತ್ತು. ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಂಚಿಸಿದ ಆರೋಪಿತರಿಂದ ಮತ್ತು ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು ₹4,08,000 ಗಳನ್ನು ಆರೋಪಿತರಿಂದ ದೂರುದಾರರಿಗೆ ಮರಳಿಸಲಾಗಿದೆ ಎಂದರು.ಐದನೇ ಪ್ರಕರಣ:ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ಹಾಗೂ ಅವರ ಪರಿಚಯದ 09 ಜನರಿಗೆ ಇಕಾಮ್ ಡೆಲಿವರಿ ಪ್ರಾಂಚೈಸಿ ಕೊಡುತ್ತೇವೆಂದು ನಂಬಿಸಿ ಅವರಿಂದ ಒಟ್ಟು ₹58,00,000 ಗಳನ್ನು ಪಡೆದುಕೊಂಡು ಯಾವುದೇ ಫ್ರಾಂಚೈಸಿ ಕೊಡದೆ ವಂಚಿಸಲಾಗಿತ್ತು. ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಂಚಿಸಿದ ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು ₹10,00,000 ಗಳನ್ನು ಪಿರ್ಯಾದಿ ಮತ್ತು ಸಾಕ್ಷಿದಾರರಿಗೆ ಮರಳಿಸಲಾಗಿದೆ. ಅದರಂತೆ ಉಳಿದ ಆರೋಪಿತರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ₹12,00,000 ಗಳನ್ನು ಫ್ರೀಜ್ ಮಾಡಿಸಿ, ನ್ಯಾಯಾಲಯದ ಆದೇಶ ಪಡೆದುಕೊಂಡಿದ್ದು, ಬ್ಯಾಂಕಿನಿಂದ ಸಾಕ್ಷಿದಾರರಿಗೆ ರಿಫಂಡ್ ಮಾಡಿಸುವ ಕೆಲಸ ಪ್ರಕ್ರಿಯೆಯಲ್ಲಿದೆ ಎಂದರು.ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೇಲ್ಕಂಡ ಒಟ್ಟು 05 ಪ್ರಕರಣಗಳಲ್ಲಿ ಆರೋಪಿತರು ವಂಚನೆ ಮಾಡಿದ ಹಣದಲ್ಲಿ ಸುಮಾರು ₹1,32,38,183 ಹಣವನ್ನು ದೂರುದಾರರಿಗೆ ಮರಳಿಸಲಾಗಿದೆ. ಅಲ್ಲದೇ ವಿಜಯಪುರ ನಗರ ಹಾಗೂ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೊಬೈಲ್ ಗಳನ್ನು ಸಿ.ಇ.ಐ.ಆರ್ ಪೋರ್ಟಲ್ ಮೂಲಕ ವಿವಿಧ ಕಂಪನಿಯ ಒಟ್ಟು ₹2,40,000 ಮೌಲ್ಯದ 10 ಮೊಬೈಲ್‌ಗಳನ್ನು ಪತ್ತೆ ಮಾಡಿ, ಅವುಗಳ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದರು.ಇದೇ ವೇಳೆ ಈ ಪ್ರಕರಣಗಳಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಗೋಷ್ಠಿಯಲ್ಲಿ ಫ್ರೊಬೆಷನರಿ ಎಸ್.ಪಿ ಇಶಿತಾ ಗುಪ್ತಾ, ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಸುನೀಲ ಕಾಂಬಳೆ, ಪಿಐ ರವಿ ಯಡವಣ್ಣವರ ಇದ್ದರು.