ಪೆಟ್ರೋಲ್,ಡೀಸೆಲ್ ಬೆಲೆಯೇರಿಕೆ ಖಂಡಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Jun 26, 2024, 12:34 AM IST
25ಕೆಜಿಎಲ್6ಕೊಳ್ಳೇಗಾಲದಲ್ಲಿ ಬೆಲೆ ಏರಿಕೆ ಖಂಡಿಸಿ ಸಕಾ೯ರದ ವಿರುದ್ದ ಆಕ್ರೋಶ ಹೊರಹಾಕಿದ ಪ್ರಗತಿಪರ ಸಂಘಟನೆಗಳು ಉಪವಿಭಾಗಾಧಿಕಾರಿ ಮಹೇಶ್ ಅವರಿಗೆ ಮನವಿ ಸಲ್ಲಿಸಿದರು. ಈವೇಳೆ ಅಣಗಳ್ಳಿ ಬಸವರಾಜು, ಮೋಹನ್, ರಿಯಾಜ್ ಇದ್ದರು. | Kannada Prabha

ಸಾರಾಂಶ

ಮೆರವಣಿಯುದ್ದಕ್ಕೂ ಆಟೋಗಳು ಸಾಗಿ ಬಂದರೆ ಕೆಲ ಪ್ರತಿಭಟನಾಕಾರರು ಎತ್ತಿನಗಾಡಿ ಹಾಗೂ ಇತರೆ ವಾಹನಗಳ ಮೇಲೆ ನಿಂತು ಗಮನ ಸೆಳೆಯುವ ಮೂಲಕ ಪ್ರತಿಭಟನೆಯಲ್ಲಿ ಸಾಗಿ ಬಂದರು. ವಿವಿಧ ಪ್ರಗತಿಪರ ಮುಖಂಡರು ಸಹ ರ್‍ಯಾಲಿ ವೇಳೆ ನಡೆದುಕೊಂಡೇ ಬಂದು ದಿಕ್ಕಾರದ ಘೋಷಣೆ ಕೂಗಿ ಸರ್ಕಾರದ ಕ್ರಮಕ್ಕೆ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಶೀಘ್ರವೇ ಬೆಲೆಗಳನ್ನು ಇಳಿಕೆ ಮಾಡುವಂತೆ ಆಗ್ರಹಿಸಿದ ವಿವಿಧ ಪ್ರಗತಿಪರ ಸಂಘಟನೆಗಳು ಮೆರವಣಿಗೆ ಮೂಲಕ ಆಗಮಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಇಳಿಕೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನಾ ರ್‍ಯಾಲಿ ನಡೆಸಿದ ಮುಖಂಡರು, ಪಟ್ಟಣದ ಆರ್.ಎಂ.ಸಿ ಆವರಣದಲ್ಲಿ ಸಮಾವೇಶಗೊಂಡರು. ಬಳಿಕ ಕುರುಬನಕಟ್ಟೆ ರಸ್ತೆ, ಐಬಿ ರಸ್ತೆ, ತಾಪಂ ವೃತ್ತ, ಎಂಜಿಎಸ್ವಿ ರಸ್ತೆ, ಬಸ್ ನಿಲ್ದಾಣ ರಸ್ತೆ, ವಿಷ್ಣು ರಸ್ತೆ, ರಾಜ್ ಕುಮಾರ್ ರಸ್ತೆ, ಮಸೀದಿ ವೃತ್ತ, ಅಂಬೇಡ್ಕರ್ ರಸ್ತೆ ಮೂಲಕ ತಾಲೂಕು ಕಚೇರಿಗೆ ತಲುಪಿ ಉಪವಿಭಾಗಾಧಿಕಾರಿ ಮಹೇಶ್ ರವರಿಗೆ ತಮ್ಮ ಹಕ್ಕೊತ್ತಾಯಗಳ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಬೆಲೆ ಏರಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ತಕ್ಷಣ ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ಇಳಿಕೆ ಮಾಡುವ ಮೂಲಕ ಹೊರೆ ತಪ್ಪಿಸಬೇಕು ಎಂದು ಆಗ್ರಹಿಸಿದರು.

ಮೆರವಣಿಯುದ್ದಕ್ಕೂ ಆಟೋಗಳು ಸಾಗಿ ಬಂದರೆ ಕೆಲ ಪ್ರತಿಭಟನಾಕಾರರು ಎತ್ತಿನಗಾಡಿ ಹಾಗೂ ಇತರೆ ವಾಹನಗಳ ಮೇಲೆ ನಿಂತು ಗಮನ ಸೆಳೆಯುವ ಮೂಲಕ ಪ್ರತಿಭಟನೆಯಲ್ಲಿ ಸಾಗಿ ಬಂದರು. ವಿವಿಧ ಪ್ರಗತಿಪರ ಮುಖಂಡರು ಸಹ ರ್‍ಯಾಲಿ ವೇಳೆ ನಡೆದುಕೊಂಡೇ ಬಂದು ದಿಕ್ಕಾರದ ಘೋಷಣೆ ಕೂಗಿ ಸರ್ಕಾರದ ಕ್ರಮಕ್ಕೆ ಆಕ್ರೋಶ ಹೊರಹಾಕಿದರು.

ರೈತ ಸಂಘದ ಹಿರಿಯ ಮುಖಂಡ ಅಣಗಳ್ಳಿ ಬಸವರಾಜು, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಆರ್.ಮೋಹನ್, ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಷ, ಗೌರವಾಧ್ಯಕ್ಷ ಕೃಷ್ಣನಾಯಕ, ಉಪಾಧ್ಯಕ್ಷ ನಾಗೇಶ್ ನಾಯಕ, ವೆಂಕಟೇಶ್, ಜಿಲ್ಲಾ ಸಂಚಾಲಕ ನಿಸಾರ್ ಅಹಮ್ಮದ್, ಮಣಿ ನಾಯಕ, ಸ್ವಾಮಿ ನಾಯಕ್, ತಾಲೂಕು ಅಧ್ಯಕ್ಷ ಅಯಾಜ್ ಕನ್ನಡಿಗ, ಗೌರವಾಧ್ಯಕ್ಷ ಬಿಸಲಯ್ಯ, ಟೌನ್ ಅಧ್ಯಕ್ಷ ಜಗದೀಶ್ ಶಾಸ್ತ್ರೀ, ಪ್ರಧಾನ ಕಾರ್ಯದರ್ಶಿ ಉಗನಿಯ ಕುಮಾರ್, ರಾಜಿಕ್, ರಾಜ್ಯ ರೈತ ಸಂಘ ಕಾರ್ಯದ ರಾಮಕೃಷ್ಣ, ಪದಾಧಿಕಾರಿಗಳು ವೀರಭದ್ರಸ್ವಾಮಿ, ಅಶ್ವಥ್, ನಾಗರಾಜು ಅರೇಪಾಳ್ಯ, ಚಂದ್ರಪ್ಪ, ವೆಂಕರಾಜು, ಷಣ್ಮುಖ, ನಾಗರಾಜು, ಅಣಗಳ್ಳಿ ದಶರಥ, ವಾಸು ಇನ್ನಿತರಿದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ