ಗದಗ: ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಜಿಲ್ಲಾ ಬಂಜಾರ ಸಮುದಾಯದ ಮುಖಂಡರಿಂದ ಭಾನುವಾರ ತಾಲೂಕಿನ ನಾಗಾವಿಯ ರೇಣುಕಾದೇವಿ ಯಲ್ಲಮ್ಮ ದೇವಸ್ಥಾನದಲ್ಲಿ ಜಿಲ್ಲೆಯೆ ಮುಖಂಡರು ಹೋರಾಟದ ಕುರಿತು ರೂಪುರೇಷೆಗಳನ್ನು ಹಮ್ಮಿಕೊಳ್ಳಲು ಪೂರ್ವಭಾವಿ ಸಭೆ ಜರುಗಿತು.ಸಭೆಯಲ್ಲಿ ಜಿಲ್ಲೆಯ ಬಂಜಾರ ಸಮುದಾಯದ 72 ತಾಂಡಾಗಳ ನಾಯಕ್, ಡಾವ್, ಕಾರಭಾರಿ ಮತ್ತು ಮುಖಂಡರೆಲ್ಲರೂ ಸೇರಿ ಅ. 6ರಿಂದ ಜಿಲ್ಲಾಡಳಿತ ಕಚೇರಿ ಎದರು ಬೃಹತ್ ಪ್ರತಿಭಟನೆಯೊಂದಿಗೆ ಅಹೋರಾತ್ರಿ ಧರಣಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂಭಾಗದಲ್ಲಿ ಮಾಡಲು ತೀರ್ಮಾನಿಸಿದರು.ಬಂಜಾರ, ಕೊರಮ, ಕೊರಚ, ಭೋವಿ ಜಾತಿಗಳಿಗೆ ರಾಜ್ಯ ಸರ್ಕಾರವು ಅನ್ಯಾಯ ಮಾಡಿದೆ. ಒಳಮೀಸಲಾತಿಯ ವರ್ಗೀಕರಣದಲ್ಲಿ ನಮ್ಮ ಸಮುದಾಯಗಳಿಗೆ ಸಂಪೂರ್ಣವಾಗಿ ನ್ಯಾಯ ಸಿಗುವವರೆಗೆ ಹೋರಾಟವನ್ನು ಕೈಬಿಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದರು.ಈ ವೇಳೆ ಕರ್ನಾಟಕ ಬಂಜಾರ ಲಂಬಾಣಿ ಹಕ್ಕು ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಮಾತನಾಡಿದರು. ಮುಖಂಡರಾದ ಕೆ.ಸಿ. ನಭಾಪುರ, ಶಿವಪುತ್ರಪ್ಪ ನಾಯಕ, ಶಿವಪ್ಪ ನಾಯಕ, ಟಿಕು ನಾಯಕ, ಕುಬೇರ ನಾಯಕ, ಚಂದು ನಾಯಕ, ಕಿಮಪ್ಪ ನಾಯ್ಕ, ನೂರಪ್ಪ ನಾಯಕ, ಮೀಟಪ್ಪ ನಾಯಕ, ಶ್ರೀನಿವಾಸ ನಾಯಕ, ಪುರಪ್ಪ ನಾಯಕ, ತೇಜ್ಯಾ ನಾಯಕ, ರಾಜು ನಾಯಕ, ಪಾಂಡಪ್ಪ ನಾಯಕ, ಸೋಮನಾಥ ನಾಯಕ, ಟಾಕರಪ್ಪ ನಾಯಕ, ಡಿ.ಎಲ್. ನಾಯಕ, ರೂಪಲೆಪ್ಪ ನಾಯಕ, ದೇವಾನಂದ ನಾಯಕ, ರಾಮಪ್ಪ ನಾಯಕ, ಶಿವಪ್ಪ ಕಾರಬಾರಿ, ನಾರಾಯಣ ಪೂಜಾರ, ಮಲ್ಲೇಶ್ ಕಾರಭಾರಿ, ನೀಲು ರಾಠೋಡ, ಐ.ಎಸ್. ಪೂಜಾರ, ಸೋಮು ಲಮಾಣಿ, ಚಂದ್ರಕಾಂತ ಚವಾಣ, ಪರಮೇಶ ನಾಯಕ, ದನಸಿಂಗ್ ನಾಯಕ, ವಿಠ್ಠಲ ತೋಟದ, ಟಿ.ಡಿ. ಪೂಜಾರ, ಕುಬೇರಪ್ಪ ಪವಾರ, ಧನುರಾಮ ತಂಬೂರಿ, ಕುಬೇರಪ್ಪ ರಾಠೋಡ ಸೇರಿದಂತೆ ಇತರರು ಇದ್ದರು.