ಮುಂಡರಗಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶವು ಅಭಿವೃದ್ಧಿ ಕಡೆ ಮುಖ ಮಾಡಿದೆ. ಮೋದಿ ಅವರ ಅಭಿವೃದ್ಧಿಪರ ಯೋಜನೆಗಳು ಇತರೆ ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.
ಪಟ್ಟಣದ ಕ.ರಾ. ಬೆಲ್ಲದ ಕಾಲೇಜಿನಲ್ಲಿ ನರೇಂದ್ರ ಮೋದಿ ಅವರ ಅಭಿಮಾನಿ ಬಳಗದಿಂದ ಅವರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸೇವಾ ಪಾಕ್ಷಿಕ ಅಭಿಯಾನದಡಿ ನರೇಂದ್ರ ಮೋದಿಯವರ ಜೀವನ ಸಾಧನೆ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಲಾದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಭಾಷಣ ಸ್ಪರ್ಧೆಯಲ್ಲಿ ಕೆ.ಆರ್. ಬೆಲ್ಲದ ಕಾಲೇಜಿನ ಲಕ್ಷ್ಮೀ ಪೂಜಾರ(ಪ್ರಥಮ), ಜ.ಅ. ಶಿಕ್ಷಣ ಮಹಾವಿದ್ಯಾಲಯದ ಕೊಟ್ರಮ್ಮ ಎಂ. (ದ್ವಿತೀಯ) ಹಾಗೂ ಕೆ.ಆರ್. ಬೆಲ್ಲದ ಕಾಲೇಜಿನ ವಿಜಯಲಕ್ಷ್ಮೀ ಗೊಂಡಬಾಳ(ತೃತೀಯ) ಸ್ಥಾನ ಪಡೆದರು. ಪ್ರಥಮ ಬಹುಮಾನವಾಗಿ ₹4000, ದ್ವಿತೀಯ ₹3000 ಹಾಗೂ ತೃತೀಯ ಬಹುಮಾನವಾಗಿ ₹2000 ನೀಡಿ ಗೌರವಿಸಲಾಯಿತು.
ಈ ವೇಳೆ ನಾಗೇಶ ಹುಬ್ಬಳ್ಳಿ, ಪ್ರಾ. ಸಂತೋಷ ಹಿರೇಮಠ, ಆನಂದಗೌಡ ಪಾಟೀಲ, ಪ್ರಸಾಂತಗೌಡ ಗುಡದಪ್ಪನವರ, ಶಂಕರ ಮರಾಠೆ, ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದ ಎಂ.ಜಿ. ಗಚ್ಚಣ್ಣವರ, ಸಿ.ಎಸ್. ಅರಸನಾಳ, ಎಸ್.ಆರ್. ಚಿಗರಿ, ದೇವು ಹಡಪದ, ರವಿ ಲಮಾಣಿ, ರಮೇಶ ಹುಳಕಣ್ಣವರ, ಜ್ಯೋತಿ ಹಾನಗಲ್ಲ ಮುಂತಾದವರಿದ್ದರು. ಮಂಜುನಾಥ ಮುಧೋಳ ನಿರೂಪಿಸಿ, ವಂದಿಸಿದರು.ನಾಳೆ ದೊರೆಸ್ವಾಮಿಗಳ ಸ್ಮರಣೋತ್ಸವ
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಅ. 1ರ ಸಂಜೆ 6 ಗಂಟೆಗೆ ದೊರೆಸ್ವಾಮಿಗಳ ಪುಣ್ಯಸ್ಮರಣೋತ್ಸವ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಸಮಾರಂಭ ಗ್ರಾಮದ ಶಾಲಾ ಆವರಣದಲ್ಲಿ ನಡೆಯಲಿದೆ.ಸಾನಿಧ್ಯವನ್ನು ಶಾಂತಲಿಂಗ ಶ್ರೀಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್, ಜಿಲ್ಲಾ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿ ಗುಂಜಿಕರ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಪಿಡಿಒ ಯಲ್ಲಪ್ಪ ಸಂಕನಗೌಡ್ರ, ಪ್ರಗತಿಪರ ರೈತರಾದ ಕೊಟುಮುಚಗಿಯ ಸಾವಯವ ರೈತ ವೀರೇಶ ನೇಗಲಿ, ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತ ವಿಜೇತ ಮೃತ್ಯುಂಜಯ ವಸ್ತ್ರದ ಭಾಗವಹಿಸಲಿದ್ದಾರೆ.ಅಂದು ಬೆಳಗ್ಗೆ 8 ಗಂಟೆಗೆ ಸಕಲ ವಾದ್ಯಮೇಳ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೊರೆಸ್ವಾಮಿಗಳ ಪೂಜ್ಯರ ಭಾವಚಿತ್ರದ ಪಲ್ಲಕಿ ಮೆರವಣಿಗೆ ನಡೆಯಲಿದೆ. ಸಂಜೆ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಾಡಿರೇ ರಾಗಗಳ ತೂಗಿರೇ ದೀಪಗಳ ಎಂಬುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಶ್ರೀಮಠದ ಸದ್ಭಕ್ತರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.