ಹುಬ್ಬಳ್ಳಿ:ಹಳೇ ಹುಬ್ಬಳ್ಳಿಯ ಆಸಾರ ಓಣಿಯ ಐತಿಹಾಸಿಕ ಭವಾನಿ ಶಂಕರ ನಾರಾಯಣ ದೇವಸ್ಥಾನದ ಪುಷ್ಕರಣಿ ಜಾಗೆಯನ್ನು ಒತ್ತುವರಿ ಮಾಡಿ, ಅಲ್ಲಿ ರಸ್ತೆ ನಿರ್ಮಾಣ ಮಾಡಿರುವುದಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶನಿವಾರ ನಿಷೇಧಾಜ್ಞೆ ಮಧ್ಯೆಯೂ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಬೃಹತ್ ಪ್ರತಿಭಟನೆ ಮೂಲಕ ಸ್ಥಳೀಯ ಆಡಳಿತಕ್ಕೆ ಖಡಕ್ ಎಚ್ಚರಿಕೆ ನೀಡಿದರು.
ಹಿಂದೂ ಭಾವನೆಗೆ ಧಕ್ಕೆ:
ಕಾಂಗ್ರೆಸ್ ಸರ್ಕಾರದಲ್ಲಿ ಬರೀ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕಾರ್ಯಗಳಾಗುತ್ತಿದ್ದು, ಸರ್ಕಾರ ನೇರವಾಗಿ ಸಹಕಾರ ನೀಡುತ್ತಿದೆ. ದೇವಸ್ಥಾನದ ಪುಷ್ಕರಣಿ ಇರುವ ದಾಖಲೆ ಇದ್ದರೂ ಸಹ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ಮಾಡಿರುವುದು ತಪ್ಪು. ಪೊಲೀಸ್ ಆಯುಕ್ತರು ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದು, ನಿಷೇಧಾಜ್ಞೆ ಹೇರುವ ಮೂಲಕ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ. ಹಿಂದೂಗಳನ್ನು ಕೆಣಕಿದಾಗಲೆಲ್ಲ ಏನೆಲ್ಲಾ ಆಗಿದೆ ಎಂಬುದು ಇತಿಹಾಸ ಹೇಳುತ್ತದೆ. ಅದೇ ರೀತಿ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಹಸ್ತಕ್ಷೇಪ ಮಾಡದೇ ಸುಮ್ಮನಿದ್ದರೆ ಸರಿ. ಇಲ್ಲದೇ ಹೋದಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದರು.ಘೋಷಣೆ ಕೂಗಿ ಆಕ್ರೋಶ:
ಬಂಧನ, ಬಿಡುಗಡೆ:
ಹಳೇ ಹುಬ್ಬಳ್ಳಿ ಸೂಕ್ಷ್ಮ ಪ್ರದೇಶವಾಗಿದ್ದು ಯಾವುದೇ ಕಾರಣಕ್ಕೂ ಗದ್ದಲ-ಗೊಂದಲ ಸೃಷ್ಟಿಯಾಗಬಾರದು ಎಂದು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆಯಿಂದ ದೇವಸ್ಥಾನದ ಸುತ್ತಲಿನ 500 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಈ ಮಧ್ಯೆ ಮಹಿಳಾ ಹೋರಾಟಗಾರರನ್ನು ಬಂಧಿಸಲು ಮಹಿಳಾ ಪೊಲೀಸರು, ಹೋಂಗಾರ್ಡಗಳು ಹರಸಾಹಸ ಪಡಬೇಕಾಯಿತು. ವೈ.ಎಂ. ಮುಂಚಿ ಎಂಬವರ ಕೈಗೆ ಗಾಯವಾಯಿತು. ಪೊಲೀಸ್ ಸಿಬ್ಬಂದಿ ಯಶೋದಾ ಎಂಬುವರ ಮೊಬೈಲ್ ನಾಪತ್ತೆಯಾದ ಘಟನೆಯೂ ನಡೆಯಿತು.ದೇವಸ್ಥಾನವೊಂದರ ಪುಷ್ಕರಣಿ ಮುಚ್ಚಿ ಪಾಲಿಕೆ ಅಧಿಕಾರಿಗಳೇ ಅಕ್ರಮವಾಗಿ ರಸ್ತೆ ಮಾಡಿರುವುದು ದೊಡ್ಡ ಅಪರಾಧ. ಪೊಲೀಸ್ ಆಯುಕ್ತರಂತೂ ಹೋರಾಟ ಹತ್ತಿಕ್ಕುವ ಮೂಲಕ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ರಸ್ತೆ ನಿರ್ಮಾಣ ಮಾಡುವಾಗಲೇ ಈ ಬಗ್ಗೆ ಎಚ್ಚೆತ್ತುಕೊಂಡಿದ್ದರೆ ಇಷ್ಟೊಂದು ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಈಗ ಶಾಂತಿಯಿಂದ ಪ್ರತಿಭಟಿಸಿದ್ದು, ನಾಳೆ ಕ್ರಾಂತಿಯೇ ಆಗಲಿದೆ. ಪೊಲೀಸರ ಲಾಠಿಗಳಿಗೆ ಹೆದರುವುದಿಲ್ಲ.
ಹುಬ್ಬಳ್ಳಿಯ ಪುರಾತನ ದೇವಸ್ಥಾನ ಇದಾಗಿದ್ದು, ಪುಷ್ಕರಣಿ ಇರುವುದು ಗೊತ್ತಿದ್ದರೂ ಪಾಲಿಕೆಯ ಕಾಂಗ್ರೆಸ್ ಸದಸ್ಯರೇ ₹ 25 ಲಕ್ಷ ವೆಚ್ಚದಲ್ಲಿ ಈ ರಸ್ತೆ ಮಾಡಿಸಿದ್ದಾರೆ. ಕಾಂಗ್ರೆಸ್ ಅಣತಿಯಂತೆ ಪಾಲಿಕೆ ಆಯುಕ್ತರು ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಹಣೆಯಲ್ಲಿ ಕುಂಕುಮ ಇಟ್ಟು ನಾಟಕ ಮಾಡುತ್ತಿದ್ದಾರೆ. ಇದು ಮೊದಲ ದಿನದ ಹೋರಾಟವಾಗಿದ್ದು, ಹಿಂದೂಗಳನ್ನು ಕೆಣಕಿದರೆ ನಿಮಗೆ ದೇವರ ಶಾಪ ತಟ್ಟುತ್ತದೆ.
ಮಹೇಶ ಟೆಂಗಿನಕಾಯಿ, ಶಾಸಕಭವಾನಿ ಶಂಕರ ನಾರಾಯಣ ದೇವಸ್ಥಾನದ ಪುಷ್ಕರಣಿ ಇರುವುದು ದಾಖಲೆಯಿಂದ ಗೊತ್ತಾಗಿದೆ. ಪುತಾತತ್ವ ಇಲಾಖೆಯು ರಸ್ತೆ ಅಗದು ಉತ್ಖನನ ಮಾಡಿದರೆ ಸತ್ಯ ಗೊತ್ತಾಗಲಿದೆ. ಅದನ್ನು ಬಿಟ್ಟು ನಮ್ಮ ಹೋರಾಟ ಹತ್ತಿಕ್ಕುವ ಕಾರ್ಯ ಮಾಡುವುದು ಬೇಡ. ಯಾವುದೇ ಕಾರಣಕ್ಕೂ ಪುಷ್ಕರಣಿ ಮುಚ್ಚಿ ರಸ್ತೆ ನಿರ್ಮಾಣವಾಗಲು ನಾವು ಬಿಡುವುದಿಲ್ಲ.