ಎಡ-ಬಲ ಕಾಲುವೆಗೆ ನೀರು ಹರಿಸುವಂತೆ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Nov 22, 2026, 01:15 AM IST
 ಹುಣಸಗಿ ತಾಲ್ಲೂಕಿನ ನಾರಾಯಣಪರು ಗ್ರಾಮದಲ್ಲಿ ಮೇಣಸಿನಕಾಯಿ ಬೆಳೆಗೆ ನೀರು ಹರಿಸುವಂತೆ ದೇವದುರ್ಗ ತಾಲ್ಲೂಕಿನ ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

Massive protest demanding the release of water into the left and right-bank canals

-ದೇಶಕ್ಕೆ ಅನ್ನ ನೀಡುವ ರೈತರು ನೀರಿಗಾಗಿ ಪರದಾಟ: ಆಕ್ರೋಶ

--

ಕನ್ನಡಪ್ರಭ ವಾರ್ತೆ ಹುಣಸಗಿ

ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಿಂದ ನೂರಾರು ಜನ ರೈತರು ಪಾದಯಾತ್ರೆಯೊಂದಿಗೆ ನಾರಾಯಣಪುರ ಪಟ್ಟಣಕ್ಕೆ ಆಗಮಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೃಷಿ ಅಭಿವೃದ್ಧಿ ಸೇನೆಯ ರಾಜ್ಯಾಧಕ್ಷ ಮಸ್ತಾನ ನಾಯಕ, ಮಾತನಾಡಿ, ದೇಶಕ್ಕೆ ಅನ್ನ ನೀಡುವಲ್ಲಿ ನೀರು ಕೇಳುತ್ತಿದ್ದಾನೆ. ನೀರು ನೀಡುವುದು ಸರ್ಕಾರ ಮುಖ್ಯ ಕರ್ತವ್ಯ. ನೀರು ಕೋಡಿ ಇಲ್ಲವೇ ಕುರ್ಚಿ ಬಿಡಿ ಎಂದು ಆಕ್ರೋಷ ವ್ಯಕ್ತಪಡಿಸಿದರು.

ನಾವು ರೈತರು ನೇರವಾಗಿ ವಿಧಾನಸೌದಕ್ಕೆ ತೆರಳಿ ಕೆಲಸ ಮಾಡಿಕೊಳ್ಳಲು ಸಾಧ್ಯವಾಗುವದಿಲ್ಲ. ಆದರೆ, ನಮ್ಮ ಕೆಲಸ ಮಾಡಲು ಸಂಸದರು ಮತ್ತು ಶಾಸಕರನ್ನು ಆಯ್ಕೆ ಮಾಡಿ ಕಳಿಸಿದ್ದೇವೆ. ನಮ್ಮ ಭಾಗದ ಶಾಸಕರು ಎಲ್ಲರೂ ರೈತರಿಗೆ ನೀರು ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ದೇವದುರ್ಗ ತಾಲೂಕಿನ ಹಲವಾರು ಗ್ರಾಮಗಳ ಸಾವಿರಾರು ರೈತರು ಪಾಲ್ಗೊಂಡಿದ್ದರು.

ಯಾದಗಿರಿ ಎಸ್‌ಪಿ ಪ್ರಥ್ವಿಕ್‌ ಶಂಕರ್‌ ನೇತೃತ್ವದಲ್ಲಿ ಹುಣಸಗಿ ಸಿಪಿಐ ರವಿಕುಮಾರ ಹಾಗೂ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್‌ ನಿಯೋಜಿಸಿದ್ದರು. ಜಲಾಶಯಕ್ಕೆ ತೆರಳುವ ರಸ್ತೆಯಲ್ಲಿ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ರಸ್ತೆ ಬಂದ್‌ ಮಾಡಲಾಗಿತ್ತು.

ಬಸವರಾಜ ಗೌಡ ರಾಮನೂರು, ಶಾಂತಪ್ಪಗೌಡ ರಾಮನೂರು, ಬಾಬು ಬಸವರಾಜ ಗುರುವಿನ, ಶಾಮ್‌ ಖಾನಾಪುರ, ಶಿವಪುತ್ರ ಮಸೀದಾಬಾದ, ಇಮಾಮಸಾಬ, ಆಲಂ ಗೊಬ್ಬೂರ, ಫಾರುಕ್‌ ಉಮರಸಾಬ ಪ್ರತಿಭಟನೆಯಲ್ಲಿದ್ದರು.

-

ಫೋಟೊ: 21ವೈಡಿಆರ್13

ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಮೆಣಸಿನಕಾಯಿ ಬೆಳೆಗೆ ನೀರು ಹರಿಸುವಂತೆ ದೇವದುರ್ಗ ತಾಲೂಕಿನ ರೈತರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ: ಶಾಸಕ ಬಸನಗೌಡ ದದ್ದಲ್
ನಾಳೆಯೊಳಗೆ ಮತಗಟ್ಟೆ ಮರುಹೊಂದಾಣಿಕೆ ಪೂರ್ಣ: ಡೀಸಿ