ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಜಾರಿಯಾಗಿರುವ ಸಂವಿಧಾನದ 371 ಜೆ ಕಲಂ ವಿಶೇಷ ಸ್ಥಾನಮಾನದಿಂದ ಕರ್ನಾಟಕ ರಾಜ್ಯದ ಇಪ್ಪತ್ನಾಲ್ಕು ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಅಪಪ್ರಚಾರ ಮಾಡುತ್ತಿರುವ ಬೆಂಗಳೂರಿನ ಕೆಲವು ಸಂವಿಧಾನ ವಿರೋಧಿ ಪಟ್ಟಭದ್ರ ಹಿತಾಸಕ್ತಿಗಳು ಹಸಿರು ಪ್ರತಿಷ್ಠಾನ ಸಂಘಟನೆಯ ನಿಲುವನ್ನು ಉಗ್ರವಾಗಿ ಖಂಡಿಸುವ ಮೂಲಕ ಕಲಬುರಗಿಯಲ್ಲಿ ಭಾರಿ ಪ್ರತಿಭಟನೆ ನಡೆಯಿತು.ಶನಿವಾರ ನಡೆದ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ವಿಭಾಗೀಯ ಕೇಂದ್ರ ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ಮೂಲಕ ಕಲ್ಯಾಣ ಕರ್ನಾಟಕ ವಿರೋಧಿ ಶಕ್ತಿಗಳಿಗೆ ಎಚ್ಚರಿಕೆ ನೀಡಲಾಯಿತು.
ಕಲಬುರಗಿಯ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಸೇರಿದ್ದ ಪ್ರತಿಭಟನಾಕಾರರು ಆಯಾ ಶಿಕ್ಷಣ ಸಂಸ್ಥೆಗಳ, ಸರಕಾರಿ ಮತ್ತು ಅರೆ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ಮುಖಂಡರು ಕಾಲೇಜುಗಳ ಪ್ರಾಚಾರ್ಯರು, ಪ್ರಾಧ್ಯಾಪಕರು, ಬುದ್ಧಿಜೀವಿಗಳ, ಚಿಂತಕರು, ಜನಪರ, ಕನ್ನಡ ಪರ, ದಲಿತ ಹಿಂದುಳಿದ ಅಲ್ಪಸಂಖ್ಯಾತರ, ಯುವ ವಿದ್ಯಾರ್ಥಿ ಕಾರ್ಮಿಕ, ರೈತ ಯುವಪರ ಸಂಘಟನೆಗಳ ಹಾಗೂ ಆಯಾ ಕ್ಷೇತ್ರದ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಸಾಮಾಜಿಕ ಕಾರ್ಯಕರ್ತರು ಕಲಂ 371 ಜೆ ವಿರೋಧಿಸಿರುವ ಹಲವು ಸಂಘಟನೆಗಳ ನಿಲುವನ್ನು ಖಂಡಿಸಿದರು.ಹೋರಾಟ ಉದ್ದೇಶಿ ಶಿಕ್ಷಣ ಸಂಸ್ಥೆಗಳ ಮುಖಂಡರಾದ ಹೈ.ಶಿ . ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ನಮೋಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಾಂತಪ್ಪ ಸೂರನ್, ಚಂದ್ರಶೇಖರ ಶೀಲವಂತ, ಆಲ್ ಖಮರ್ ಸಂಸ್ಥೆಯ ಅಧ್ಯಕ್ಷರಾದ ಅಸದ್ ಅನ್ಸಾರಿ ಹದಿನೈದು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಮಾತ್ನಾಡಿ ಕಲ್ಯಾಣ ಕರ್ನಾಟಕದ 371ನೇ ಜೇ ಕಲಂ ವಿರೋಧಿ ಶಕ್ತಿಗಳ ಧೋರಣೆಗೆ ಖಂಡಿಸಿ ಸಂವಿಧಾನ ವಿರೋಧಿ ಹಸಿರು ಪ್ರತಿಷ್ಠಾನ ಸಂಘಟನನೆಗೆ ನಿಷೇಧಿಸಲು ಸರ್ಕಾರಕ್ಕೆ ಒತ್ತಾಯಿಸಿದರು.
ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, ಹಸಿರು ಪ್ರತಿಷ್ಠಾನ ಸಂಘಟನೆಯವರು 371ನೇ ಕಲಂ ವಿರುದ್ಧ ಇಪ್ಪತ್ನಾಲ್ಕು ಜಿಲ್ಲೆಗಳ ಜನರಿಗೆ ಸುಳ್ಳು ಸುದ್ದಿ ಹುಟ್ಟಿಸಿ ಕಲ್ಯಾಣ ಕರ್ನಾಟಕದ ಸಂವಿಧಾನ ಬದ್ಧ ಹಕ್ಕಿನ ಮೂಲ ಉದ್ದೇಶ ಗಾಳಿಗೆ ತೋರಿ ತಪ್ಪು ಸಂದೇಶ ಪ್ರಚಾರ ಮಾಡುತಿದ್ದಾರೆ . ಇಂದಿನ ಸಾಂಕೇತಿಕ ಹೋರಾಟ ಮೊದಲನೇ ಹಂತದ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.ಚಿಂತಕರು, ಬುದ್ಧಿಜೀವಿಗಳಾದ ಪ್ರತಾಪಸಿಂಗ್ ತಿವಾರಿ, ಆರ್.ಕೆ. ಹುಡುಗಿ, ಬಸವರಾಜ ಕುಮ್ಮನೂರ್, ಡಾ.ಗಲಶೆಟ್ಟಿ, ಡಾ.ಶರಣಪ್ಪ ಸೈದಾಪುರ , ಡಾ.ಸಗೀತಾ ಕಟ್ಟಿ, ಚಂದ್ರಶೇಖರ ಪಾಟೀಲ ಹುಚಕನಳ್ಳಿ, ಬಿ.ಬಿ. ನಾಯಕಡಾ.ಮಾಜೀದ ದಾಗಿ, ಪ್ರೊ. ಬಿರಾದಾರ ಮೇಡಮ್, ರೇಣುಕಾ ಸಿಂಘೆ, ಡಾ.ಗಾಂಧೀಜಿ ಮೋಳಕೇರಿ, ಡಾ.ಮಲ್ಲಿಕಾರ್ಜುನ ಶೆಟ್ಟಿ, ಡಾ.ಹರ್ಷವರ್ಧನ, ಡಾ.ಮಾಜಿದ್ ದಾಗಿ, ಡಾ.ಆನಂದ ಸಿದ್ದಾಮಣಿ, ಸೇರಿದಂತೆ ಸಂಘಟನೆಯ ಮುಖಂಡರಾದ ಲಿಂಗರಾಜ ಸಿರಗಾಪೂರ, ಶರಣು ಐ.ಟಿ, ಮುತ್ತಣ್ಣ ನಾಡಗೇರಿ, ಮಂಜುನಾಥ ನಾಲವರಕರ್, ಸಚಿನ್ ಫರತಾಬಾದ, ಗೋಪಾಲ ನಾಟಿಕರ್, ದತ್ತು ಶಿವಲಿಂಗಪ್ಪ ಭಂಡಕ, ಮನೋಹರ್ ಬೀರನೋರ, ಎಮ್ ಬಿ ನಿಂಗಪ್ಪಾ ಭಾಸಗಿ,ರವಿ ದೇಗಾವ, ಆನಂದ ಕಪನೂರ,ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು, ಯುವ ವಿದ್ಯಾರ್ಥಿಗಳ ಮುಖಂಡರು ಮಾತನಾಡಿದರು.ಸಹಸ್ರಾರು ವಿಧ್ಯಾರ್ಥಿಗಳು ಮೊದಲು ಮಾನವ ಸರಪಳಿ ಹೋರಾಟ ನಂತರ ಭಾರಿ ಪ್ರತಿಭಟನೆ ನಡೆಸಿದರು ಪ್ರತಿಭಟನೆಯಲ್ಲಿ ಅಶೋಕ ಗುರೂಜಿ, ಬೀಮಶೆಟ್ಟಿ ಮುಕ್ಕಾ, ಬಾಬುರಾವ್ ಗಂವಾರ್, ರಾಜು ಜೈನ, ಗಿರೀಶ್ ಗೌಡ ಇನಾಮದಾರ, ಭೀಮರಾಯ ಕಂದಳ್ಳಿ, ಮಾಲಾ ಕಣ್ಣಿ, ಅಸ್ಲಂ ಚೌಂಗೆ, ಸಾಬಿರ್ ಅಲಿ, ಬಾಬಾ ಫಕ್ರುದ್ದೀನ್,ಜೈರಾಜ ಕಿಣಗೀಕರ್, ಡಾ.ಚಿ.ಸಿ. ನಿಂಗಣ್ಣ, ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು.