ಜೀವನದ ಸವಾಲುಗಳನ್ನು ಕರಗತ ಮಾಡಿಕೊಳ್ಳಿ: ಪ್ರಕಾಶ್‌ ಚುಗಾನಿ ಕರೆ

KannadaprabhaNewsNetwork |  
Published : Jan 08, 2025, 12:15 AM IST
07ಬ್ರಹ್ಮ | Kannada Prabha

ಸಾರಾಂಶ

ಬ್ರಹ್ಮ ಕುಮಾರೀಸ್ ಸಂಸ್ಥೆಯ ಮಣಿಪಾಲ್ ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದ ಕಾರ್ಯಕ್ರಮದಲ್ಲಿ ದುಬೈನಿಂದ ಆಗಮಿಸಿದ ವಿಶೇಷ ಅತಿಥಿ ಪ್ರಕಾಶ್ ಚುಗಾನಿ ಅವರು ಜೀವನದ ಸವಾಲುಗಳನ್ನು ಕರಗತ ಮಾಡಿಕೊಳ್ಳುವ ಬಗ್ಗೆ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಬ್ರಹ್ಮ ಕುಮಾರೀಸ್ ಸಂಸ್ಥೆಯ ಮಣಿಪಾಲ್ ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದ ಕಾರ್ಯಕ್ರಮದಲ್ಲಿ ದುಬೈನಿಂದ ಆಗಮಿಸಿದ ವಿಶೇಷ ಅತಿಥಿ ಪ್ರಕಾಶ್ ಚುಗಾನಿ ಅವರು ಜೀವನದ ಸವಾಲುಗಳನ್ನು ಕರಗತ ಮಾಡಿಕೊಳ್ಳುವ ಬಗ್ಗೆ ಉಪನ್ಯಾಸ ನೀಡಿದರು.

ಅವರು ಪ್ರೇಕ್ಷಕರ ಜತೆ ಹಲವು ಚಟುವಟಿಕೆಗಳ ಹಾಗೂ ಸಂವಾದಾತ್ಮಕ ಕ್ರಿಯೆಗಳ ಮೂಲಕ ಸಂವಾದವನ್ನೂ ನಡೆಸಿದರು. ಗಮನಹರಿಸಿದಾಗ ಶಕ್ತಿ ಪ್ರವಹಿಸುವುದು, ಶಕ್ತಿ ಪ್ರವಹಿಸಿದಾಗ ಜೀವನ ವೃದ್ಧಿಸುವುದು, ಮಾತಿನಲ್ಲಿ ಬಂದಾಗ ಕೇವಲ ಕನಸಾಗುವುದು, ಕಲ್ಪನೆಯಲ್ಲಿ ಬಂದಾಗ ಅದು ಸಾಧ್ಯ ಎನ್ನಿಸುವುದು. ನಿಗದಿಪಡಿಸಿದಾಗ ಅದು ನಿಜ ಆಗಿಬಿಡುವುದು ಎಂದು ಅವರು ಅನೇಕ ಉದಾಹರಣೆಗಳೊಂದಿಗೆ ವಿಷಯವನ್ನು ಪ್ರಸ್ತುತ ಪಡಿಸಿದರು. ನಂತರ ಪ್ರಶ್ನೋತ್ತರ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು.

ಸಮಾವೇಶದಲ್ಲಿ ಭಾಗವಹಿಸಿದವರಿಗೆ ತಿರುಹೊತ್ತಗೆ, ಬ್ಲೆಸ್ಸಿಂಗ್ ಕಾರ್ಡ್ ಮುಂತಾದುವನ್ನು ನೀಡಲಾಯಿತು. ನಂತರ ಜ.10ರಿಂದ 12ರ ವರೆಗೆ ಸಂಸ್ಥೆಯಲ್ಲಿ ನಡೆಯುವ ಮೂರು ದಿನದ ಉಚಿತ ರಾಜಯೋಗ ಶಿಬಿರದ ಭಾಗವಹಿಸಲು ಸಭಿಕರನ್ನು ಆಹ್ವಾನಿಸಲಾಯಿತು.

ಪ್ರಕಾಶ್ ಚುಗಾನಿ ಆಗಿಂದಾಗ್ಗೆ ಮಣಿಪಾಲಕ್ಕೆಆಗಮಿಸಿ ತಮ್ಮಲ್ಲಿರುವ ಅಪಾರ ಜ್ಞಾನದ ಖಜಾನೆಯನ್ನು ಎಲ್ಲ ಸಾರ್ವಜನಿಕರಿಗೆ ಹಂಚಲು ಮಣಿಪಾಲ್ ಶಾಖೆಯ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ಸೌರಭ ಇವರು ಮನವಿ ಮಾಡಿ, ಧನ್ಯವಾದಗಳನ್ನು ಅರ್ಪಿಸಿದರು. ಸಾತ್ವಿಕ ಭೋಜನದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ