ಹೂವಿನಬಾವಿ ತಾಂಡಾದಲ್ಲಿ ಮಾತಾ ಕಾಳಿಕಾದೇವಿಯ ಜಾತ್ರೆ

KannadaprabhaNewsNetwork |  
Published : Nov 14, 2026, 01:15 AM IST
 | Kannada Prabha

ಸಾರಾಂಶ

ತಾಂಡಾದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು. ಅಲ್ಲದೆ, ಯುವಕರು ತಂದೆ-ತಾಯಿಗಳನ್ನು ಪ್ರೀತಿಯಿಂದ ಪಾಲನೆ ಪೋಷಣೆ ಮಾಡಬೇಕು. ಮಾತಾ ಗೀತಾದೇವಿ ಹಾಗೂ ಹೂವಿನಬಾವಿ ಕಾಳಿಕಾದೇವಿಯ ಭಕ್ತಿ ಮತ್ತು ಶಕ್ತಿ ನಮ್ಮೆಲ್ಲರ ಮೇಲೆ ಸದಾ ಇರಲಿ,ಎಂದು ಕಲಬುರಗಿ ಮಾಜಿ ಸಂಸದ ಡಾ. ಉಮೇಶ ಜಾಧವ ಹೇಳಿದರು.

ಚಿಂಚೋಳಿ: ತಾಂಡಾದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು. ಅಲ್ಲದೆ, ಯುವಕರು ತಂದೆ-ತಾಯಿಗಳನ್ನು ಪ್ರೀತಿಯಿಂದ ಪಾಲನೆ ಪೋಷಣೆ ಮಾಡಬೇಕು. ಮಾತಾ ಗೀತಾದೇವಿ ಹಾಗೂ ಹೂವಿನಬಾವಿ ಕಾಳಿಕಾದೇವಿಯ ಭಕ್ತಿ ಮತ್ತು ಶಕ್ತಿ ನಮ್ಮೆಲ್ಲರ ಮೇಲೆ ಸದಾ ಇರಲಿ,ಎಂದು ಕಲಬುರಗಿ ಮಾಜಿ ಸಂಸದ ಡಾ. ಉಮೇಶ ಜಾಧವ ಹೇಳಿದರು.

​ತಾಲೂಕಿನ ಹೂವಿನಬಾವಿ ತಾಂಡಾದಲ್ಲಿ ಶ್ರೀ ಮಾತಾ ಕಾಳಿಕಾದೇವಿಯ 12ನೇ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. "ಪ್ರತಿಯೊಬ್ಬ ತಂದೆ-ತಾಯಿಗಳು ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಮತ್ತು ಬಂಜಾರ ಸಮಾಜದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಹೂವಿನಬಾವಿ ಪವಿತ್ರ ಪುಣ್ಯಭೂಮಿಯಾಗಿದ್ದು, ಮಹಾಕಾಳಿಕಾ ದೇವಿ ಹಾಗೂ ಮಾತಾ ಗೀತಾದೇವಿ ಅವರ ಆಶೀರ್ವಾದದಿಂದ ಮತ್ತಷ್ಟು ಪ್ರಸಿದ್ಧಿ ಪಡೆದಿದೆ ಎಂದರು.

ಕಾಳಿಕಾದೇವಿ ​ಮಂದಿರದ ಪೂಜ್ಯ ಮಾತಾ ಗೀತಾದೇವಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

​ಶಿಕ್ಷಣ ಸಂಯೋಜಕ ಅಶೋಕ್ ಹೂವಿನಬಾವಿ ಮಾತನಾಡಿ,ಶ್ರೀಮಾತಾ ಕಾಳಿಕಾದೇವಿ ಜಾತ್ರಾ ಮಹೋತ್ಸವವು ಈ ಭಾಗದ ಬಂಜಾರ ಸಮುದಾಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬವಾಗಿ ಗುರುತಿಸಿಕೊಂಡಿದೆ. ಕಳೆದ 12 ವರ್ಷಗಳಿಂದ ನಿರಂತರವಾಗಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ಈ ಜಾತ್ರೆಯಲ್ಲಿ ಮಾತಾ ಕಾಳಿಕಾದೇವಿಯ ಜೊತೆಗೆ ಮಾತಾ ಗೀತಾದೇವಿಯ ಆರಾಧನೆಗೂ ವಿಶೇಷ ಮಹತ್ವವಿದೆ ಎಂದು ತಿಳಿಸಿದರು.

​ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗಾವಿ ಜಿಲ್ಲೆಯ ಖ್ಯಾತ ಜನಪದ ಕಲಾವಿದ ಬಾಳು ಬೆಳಗುಂದಿ ಅವರು ನಡೆಸಿಕೊಟ್ಟ ಜನಪದ ಸಂಗೀತ ಕಾರ್ಯಕ್ರಮ ನೆರೆದಿದ್ದ ಭಕ್ತರ ಮನಸೂರೆಗೊಂಡಿತು.

ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಹೋಮ-ಹವನ ಹಾಗೂ ಭಜನಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು. ಬಂಜಾರ ಸಮುದಾಯದ ಮಹಿಳೆಯರು ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಪಾಲ್ಗೊಂಡು ದೇವಿಗೆ ವಿಶೇಷ ನೈವೇದ್ಯ ಮತ್ತು ಹರಕೆ ಸಲ್ಲಿಸಿದ್ದು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

​ಧಾರ್ಮಿಕ ಸಭೆಯಲ್ಲಿ ವಿಜಯಪುರದ ಮಹಾದೇವ ನಾಯಕ, ಅರುಣ್ ಪವಾರ್, ವಿಜಯಕುಮಾರ್ ರಾಥೋಡ್, ಉಮೇಶ್ ಕಲಬುರ್ಗಿ, ಅಂಬರ ಜಾಧವ್, ವಿಜಯಕುಮಾರ್ ಚೇಂಗಟಿ, ಅಶೋಕ್ ಹೂವಿನಬಾವಿ, ಕೆ.ಎಂ. ಬಾರಿ, ಪಿಎಸ್ಐ ಶಿವಶಂಕರ್ ಸುಬೇದಾರ್ ಸೇರಿದಂತೆ ತಾಂಡಾದ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ