ಪ್ರತಿಭೆ ಅನಾವರಣಕ್ಕೆ ವಸ್ತು ಪ್ರದರ್ಶನ ಸಹಕಾರಿ

KannadaprabhaNewsNetwork |  
Published : Feb 01, 2024, 02:05 AM ISTUpdated : Feb 01, 2024, 02:06 AM IST
31ಎನ್.ಆರ್.ಡಿ4 ವಿದ್ಯಾರ್ಥಿಗಳು ವಿವಿಧ ವಸ್ತು ಪ್ರದರ್ಶನವನ್ನು ಶಿವರಡ್ಡಿ ಕಿಲಬನೂರವರು ವಿಕೇಣಿ ಮಾಡುತ್ತಿದ್ದಾರೆ. | Kannada Prabha

ಸಾರಾಂಶ

ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಮಕ್ಕಳು ಸಹ ವೇಗವಾಗಿ ಬೆಳೆಯುತ್ತಿದ್ದಾರೆ. ಮಕ್ಕಳಿಗೆ ವೈಜ್ಞಾನಿಕ ಚಟುವಟಿಕೆಗಳ ಬಗ್ಗೆ ತಿಳಿಸಿದರೆ ಶಿಕ್ಷಕರಿಗೂ ಹೆಚ್ಚಿನ ಮಾಹಿತಿ ಗೊತ್ತಾಗುತ್ತದೆ

ನರಗುಂದ: ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳುವುದು ಸೂಕ್ತ ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಿವರೆಡ್ಡಿ ಕಿಲಬನೂರ ಹೇಳಿದರು.

ಅವರು ಪಟ್ಟಣದ ಹೊರ ವಲಯದಲ್ಲಿನ ಸುಕೃತಿ ಚೋಟಾ ಚಾಂಪ್ಸ್ ಇಂಟರನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಂದ ಜರುಗಿದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಮಕ್ಕಳು ಸಹ ವೇಗವಾಗಿ ಬೆಳೆಯುತ್ತಿದ್ದಾರೆ. ಮಕ್ಕಳಿಗೆ ವೈಜ್ಞಾನಿಕ ಚಟುವಟಿಕೆಗಳ ಬಗ್ಗೆ ತಿಳಿಸಿದರೆ ಶಿಕ್ಷಕರಿಗೂ ಹೆಚ್ಚಿನ ಮಾಹಿತಿ ಗೊತ್ತಾಗುತ್ತದೆ ಎಂದರು.

ವಸ್ತು ಪ್ರದರ್ಶನದಲ್ಲಿ ಸೌರಶಕ್ತಿ ಬಳಕೆ, ಪವನಶಕ್ತಿ ಬಳಕೆ, ಟ್ರಾಫಿಕ್‌ ಸಿಗ್ನಲ್‌, ಶುದ್ಧ ನೀರಿನ ಘಟಕ ಮಾದರಿ, ರಕ್ತ ಶುದ್ದಿಕರಣ, ಪರಿಸರ ಸಂರಕ್ಷಣೆ, ಚಂದ್ರಯಾನ-3 ಉಪಗ್ರಹ ಉಡಾವಣೆ, ಗಣಿತ ಮಾದರಿ, ಜಲ ಸಾರಿಗೆ, ಪ್ರಕೃತಿಯಲ್ಲಿ ಮಳೆ ಸುರಿಯುವಿಕೆ ಪ್ರಯೋಗ ಸೇರಿದಂತೆ ಹಲವಾರು ಪ್ರಯೋಗಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸುಭಾಸಚಂದ್ರ ಕೋತಿನ, ಕಾರ್ಯದರ್ಶಿ ಶ್ರೀದೇವಿ ಕೋತಿನ, ಅತಿಥಿಗಳಾಗಿ ಯಾ.ಸ. ಹಡಗಲಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಪ್ರವೀಣ ಚಿಕ್ಕೊಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ರಮೇಶ ಮೋಟೆ, ಚಂದ್ರಿಕಾ ಪಲ್ಲೇದ, ಸುಮಂಗಲಾ ಅಣ್ಣಿಗೇರಿ, ಸುಷ್ಮಾ ನವಲೆ, ನಾಜರೀನ್ ಶೇಖ, ಸ್ನೇಹಾ ಪೂಜಾರಿ, ಗಿರೀಶ ಖಾನಪೇಠ, ಶಿಲ್ಪಾ ಬೆಟಗೇರಿ, ಸವಿತಾ ಅಸೂಟಿ, ಲಕ್ಷ್ಮೀ ತೆಗ್ಗಿನಮನಿ, ಸುನೀತಾ ಹೊಸಗೌಡ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ