ಕನ್ನಡಪ್ರಭ ವಾರ್ತೆ ನಾಪೋಕ್ಲು
8ನೇ ತರಗತಿ ವಿದ್ಯಾರ್ಥಿನಿ ಹಾಸಿನಿ ಸಿ.ವಿ. ರಾಷ್ಟ್ರ ಮಟ್ಟದಲ್ಲಿ ನಾಲ್ಕನೇ ಸ್ಥಾನ ಹಾಗೂ 9ನೇ ತರಗತಿ ವಿದ್ಯಾರ್ಥಿ ತ್ರಿಶೂಲ್ ತಿಮ್ಮಯ್ಯ ಬಿ.ಹೆಚ್. ರಾಷ್ಟ್ರಮಟ್ಟದಲ್ಲಿ ಐದನೇ ಸ್ಥಾನ, 8ನೇ ತರಗತಿ ವಿದ್ಯಾರ್ಥಿನಿ ದಕ್ಷ ಎಂ.ಆರ್. ಜಿಲ್ಲಾ ಮಟ್ಟದಲ್ಲಿ ನಾಲ್ಕನೇ ಸ್ಥಾನ, 10ನೇ ತರಗತಿ ವಿದ್ಯಾರ್ಥಿನಿ ನೀಮ ಎಂ.ಪಿ. ಜಿಲ್ಲಾ ಮಟ್ಟದಲ್ಲಿ 5ನೇ ಸ್ಥಾನ, 8ನೇ ತರಗತಿ ವಿದ್ಯಾರ್ಥಿನಿ ಖುಷಿ ಡಿ.ಸಿ ತಾಲೂಕುಮಟ್ಟದಲ್ಲಿ ನಾಲ್ಕನೇ ಸ್ಥಾನ ಹಾಗೂ ಪ್ರೇಕ್ಷ ಪೊನ್ನಮ್ಮ ಕೆ.ಆರ್ ತಾಲೂಕು ಮಟ್ಟದಲ್ಲಿ ಐದನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಶಾಲೆಯ ಗಣಿತ ಶಿಕ್ಷಕರಾಗಿರುವ ಅನಿಲ್ ಯು ಎಂ, ಬೃಂದಾಕವನ್ ಕುದುಪಜೆ ರಾಜೇಶ್ವರಿ ಡಿ.ಎಂ, ಶಾಲೆಯ ಮುಖ್ಯ ಶಿಕ್ಷಕರಾದ ಕವನ್ ಕುದುಪಜೆ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸ್ವರೂಪ್ ಕೆ ಬಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.