ಮಾತೃಶಕ್ತಿ, ದುರ್ಗಾವಾಹಿನಿ ಆಕರ್ಷಕ ಪಥಸಂಚಲನ

KannadaprabhaNewsNetwork |  
Published : Dec 08, 2025, 03:00 AM IST
 ಪೋಟೋ: 7 ಜಿಎಲ್‌ಡಿ3- ಪಟ್ಟಣದಲ್ಲಿ  ಭಾನುವಾರ ವಿಶ್ವ ಹಿಂದೂ ಪರಿಷತ್ ,ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ವತಿಯಿಂದ ಜರುಗಿದ ಯುವತಿಯರ ಪಥಸಂಚಲನ ಬಹಳಷ್ಟು ಆಕರ್ಷಕವಾಗಿ ನಡೆದು ನೋಡುಗರ ಗಮನ ಸೆಳೆಯಿತು.  | Kannada Prabha

ಸಾರಾಂಶ

ಗುಳೇದಗುಡ್ಡ ಪಟ್ಟಣದಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್ , ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ವತಿಯಿಂದ ಯುವತಿಯರ ಆಕರ್ಷಕ ಪಥಸಂಚಲನ ಜರುಗಿತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್ , ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ವತಿಯಿಂದ ಯುವತಿಯರ ಆಕರ್ಷಕ ಪಥಸಂಚಲನ ಜರುಗಿತು. ಗ್ರಾಮದೇವತೆ ಶ್ರೀ ಮೂಕೇಶ್ವರಿ ದೇವಸ್ಥಾನದಿಂದ ಆರಂಭಗೊಂಡ ಪಥಸಂಚಲನ ರಜಂಗಳ ಪೇಟೆ, ಬನಶಂಕರಿ ದೇವಿ ಗುಡಿ, ಗುಗುರಿಪೇಟೆ, ಅರಳಿಕಟ್ಟಿ, ಚೌಬಜಾರ್, ಗಚ್ಚಿನಕಟ್ಟಿ, ಕಂಠಿಪೇಟೆ, ಸರಬಜಾರ್, ಪುರಸಭೆ, ಝಳಕಿ ಘಂಟಿ, ಪವಾರ್ ಕ್ರಾಸ್, ನೀಲಕಂಠೇಶ್ವರ ದೇವಸ್ಥಾನ ಹಾಗೂ ಸಾಲೇಶ್ವರ ದೇವಸ್ಥಾನ ಮೂಲಕ ಹಾಯ್ದು ವಿಶಾಲವಾದ ಆವರಣಕ್ಕೆ ಬಂದು ತಲುಪಿತು.

ದಾರಿಯುದ್ದಕ್ಕೂ ಭಾರತ ಮಾತೆ, ಸುಭಾಷ್ ಚಂದ್ರ ಬೋಸ್, ಅಕ್ಕಮಹಾದೇವಿ ಹೀಗೆ ಹಲವು ಮಹನೀಯರ ವೇಷಭೂಷಣ ಧರಿಸಿದ್ದ ಪುಟ್ಟ ಮಕ್ಕಳು ನೋಡುಗರ ಗಮನ ಸೆಳೆದರು. ಪಥಸಂಚಲನದ ನಿಮಿತ್ತ ಪಟ್ಟಣದ ಬಹುತೇಕ ರಸ್ತೆಗಳನ್ನು ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಶ್ವೇತ ವಸ್ತ್ರಧಾರಿ ಸ್ವಯಂಸೇವಕರನ್ನು ಸ್ವಾಗತಿಸಿದರು.

ಪಥ ಸಂಚಲನದಲ್ಲಿ ನೇಹಾ ನರೇಗಲ್ ಅವರು ಘೋಷದಂಡದೊಂದಿಗೆ ಪಥ ಸಂಚಲದಲ್ಲಿ ಭಾಗಿಯಾಗಿದ್ದು ಅವರೊಂದಿಗೆ ದುರ್ಗಾವಾಹಿನಿ ಸಂಯೋಜಕ ಬನಶ್ರೀ ಕೋಟಿ, ಮಾತೃ ಶಕ್ತಿ ಪ್ರಮುಖರಾದ ಶಶಿಕಲಾ ಭಾವಿ ಸೇರದಂತೆ ಅನೇಕ ಯುವತಿಯರು, ಪುಟ್ಟ ಮಕ್ಕಳು ಬಿಳಿ ಸೀರೆ, ಕೇಸರಿ ಶಾಲು ಧರಿಸಿ ಪಥಸಂಚನದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ