ತೀರ್ಥಹಳ್ಳಿ ನ್ಯಾಶನಲ್ ಸ್ಮ್ಯಾಶರ್ಸ್ ತಂಡಕ್ಕೆ ಮತ್ಸ್ಯರಾಜ್ ಟ್ರೋಫಿ

KannadaprabhaNewsNetwork |  
Published : Jul 30, 2024, 12:33 AM IST
ಮತ್ಸ್ಯರಾಜ್29 | Kannada Prabha

ಸಾರಾಂಶ

ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ರ್‍ಯಾಂಕಿಂಗ್ ಆಟಗಾರರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಜಿಲ್ಲೆಗಳ ಬ್ಯಾಡ್ಮಿಂಟನ್ ಆಟಗಾರರು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಒಟ್ಟು 10 ತಂಡಗಳಲ್ಲಿ 150ಕ್ಕೂ ಅಧಿಕ ಆಟಗಾರರರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಮಲ್ಪೆಯ ಮತ್ಸ್ಯರಾಜ್ ಗ್ರೂಪ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ವತಿಯಿಂದ ಉಡುಪಿ ಅಜ್ಜರಕಾಡು ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಎರಡು ದಿನಗಳ ಮತ್ಸ್ಯರಾಜ್ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್ ಪಂದ್ಯಾಟದಲ್ಲಿ ತೀರ್ಥಹಳ್ಳಿಯ ನ್ಯಾಶನಲ್ ಸ್ಮ್ಯಾಶರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಮಲ್ಪೆಯ ಮಾಲ್ಶಿ ಕೋಸ್ಟಲ್ ಸ್ಮ್ಯಾಶರ್ಸ್ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು.

ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ರ್‍ಯಾಂಕಿಂಗ್ ಆಟಗಾರರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಜಿಲ್ಲೆಗಳ ಬ್ಯಾಡ್ಮಿಂಟನ್ ಆಟಗಾರರು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಒಟ್ಟು 10 ತಂಡಗಳಲ್ಲಿ 150ಕ್ಕೂ ಅಧಿಕ ಆಟಗಾರರರು ಭಾಗವಹಿಸಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮತ್ಸ್ಯರಾಜ್ ಗ್ರೂಪ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಮಲ್ಪೆ ಅಧ್ಯಕ್ಷ ಕೇಶವ ಕೊಟ್ಯಾನ್, ಉದ್ಯಮಿ ವಿನೀತ್ ಅಮೀನ್, ಸುಧೀರ್ ಶೆಟ್ಟಿ, ಅಭಿಜಿತ್ ಕೋಟ್ಯಾನ್, ಅಕ್ಷಯ್ ಶೇಠ್, ಅಭಿನಂದನ್ ಕೋಟ್ಯಾನ್, ಲಾಲ್ ಸಚಿನ್, ರಾಹುಲ್ ಶೆಟ್ಟಿ, ಆಕೃತಿ ಪೂಜಾರಿ, ಮನೀಶ್ ಪೂಜಾರಿ, ದೀಕ್ಷಿತ್ ಕಾಂಚನ್ ಹಾಗೂ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ