ದಾವಣಗೆರೆ ಬಸವ ಜಯಂತಿಯ ನಗರಿಯಾಗಲಿ ಎಂದಾಗಲಿ: ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ

KannadaprabhaNewsNetwork |  
Published : May 03, 2025, 12:15 AM IST
ಕ್ಯಾಪ್ಷನ2ಕೆಡಿವಿಜಿ39 ದಾವಣಗೆರೆಯಲ್ಲಿ ಬಸವ ಜಯಂತಿ ಉತ್ಸವ ಸಮಿತಿಯಿಂದ ನಡೆದ ಬಸವ ಜಯಂತಿ ಹಾಗೂ ಅಭಿನಂದನಾ ಸಮಾರಂಭವನ್ನು ಶ್ರೀಗಳು, ಗಣ್ಯರು ಉದ್ಘಾಟಿಸಿದರು. .......ಕ್ಯಾಪ್ಷನ2ಕೆಡಿವಿಜಿ40 ದಾವಣಗೆರೆಯಲ್ಲಿ ಬಸವ ಜಯಂತಿ ಉತ್ಸವ ಸಮಿತಿಯಿಂದ ಅಭಾವೀಲಿಂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ  ಡಾ.ಶಾಮನೂರು ಶಿವಶಂಕರಪ್ಪ, ದಾವಿವಿಯಿಂದ ಗೌರವ ಡಾಕ್ಟರೇಟ್ ಪದವಿಗಳಿಸಿದ ಮಾಜಿ ಸಚಿವ ಡಾ.ಎಸ್.ಎ.ರವೀಂದ್ರನಾಥ್ ರಿಗೆ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರು ಅಂದಿನ ವಿರಕ್ತಮಠದ ಮಠಾಧೀಶ ಮೃತ್ಯುಂಜಯ ಸ್ವಾಮೀಜಿ ಸೇರಿ ಪ್ರಾರಂಭ ಮಾಡಿದ್ದು ಇತಿಹಾಸವಾಗಿದೆ. ಇನ್ನು ಮುಂದೆ ದಾವಣಗೆರೆಗೆ ಬೆಣ್ಣೆ ನಗರಿ ಎಂದು ಗುರುತಿಸುವ ಬದಲು ಬಸವ ಜಯಂತಿಯ ನಗರಿ ಎಂದು ಗುರುತಿಸಬೇಕು ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.

ಬಸವ ಜಯಂತಿ । ಅಭಿನಂದನಾ ಸಮಾರಂಭ । ಶಾಮನೂರು, ರವೀಂದ್ರನಾಥ್‌ಗೆ ಸನ್ಮಾನ

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯ ವಿರಕ್ತಮಠದಲ್ಲಿ ಮೊಟ್ಟಮೊದಲ ಬಾರಿಗೆ 1913ರಲ್ಲಿ ಬಸವ ಜಯಂತಿ ಆಚರಣೆಯನ್ನು ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರು ಅಂದಿನ ವಿರಕ್ತಮಠದ ಮಠಾಧೀಶ ಮೃತ್ಯುಂಜಯ ಸ್ವಾಮೀಜಿ ಸೇರಿ ಪ್ರಾರಂಭ ಮಾಡಿದ್ದು ಇತಿಹಾಸವಾಗಿದೆ. ಇನ್ನು ಮುಂದೆ ದಾವಣಗೆರೆಗೆ ಬೆಣ್ಣೆ ನಗರಿ ಎಂದು ಗುರುತಿಸುವ ಬದಲು ಬಸವ ಜಯಂತಿಯ ನಗರಿ ಎಂದು ಗುರುತಿಸಬೇಕು ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಶಿವಯೋಗಿ ಮಂದಿರದ ಆವರಣದಲ್ಲಿ ಗುರುವಾರ ಸಂಜೆ ಬಸವ ಜಯಂತಿ ಉತ್ಸವ ಸಮಿತಿಯಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ, ತಾಲೂಕು ಘಟಕ, ಯುವ ಘಟಕ, ಮಹಿಳಾ ಘಟಕ, ಎಲ್ಲ ಬಸವ ಸಂಘಟನೆಗಳು, ಬಸವ ಭಕ್ತರ ಸಹಯೋಗದಲ್ಲಿ ನಡೆದ ಬಸವ ಜಯಂತಿ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದಲ್ಲಿ ಇವತ್ತು ಜಾತಿ, ಧರ್ಮಗಳ ಸಂಘರ್ಷ ತುಂಬಾ ಜೋರಾಗಿದೆ. ಅದಕ್ಕೆ ಔಷಧಿ ಎಂದರೆ ಬಸವಣ್ಣನವರಾಗಿದ್ದಾರೆ. ಬಸವಣ್ಣ ಎಂದರೆ ಕೂಡುವುದು. ಇಂದಿನ ವೇದಿಕೆಯಲ್ಲಿ ಗಮನಿಸಿ ಸರ್ವ ಪಕ್ಷ, ಸರ್ವ ಜನಾಂಗದವರು ಸೇರಿಕೊಂಡು ಒಂದಾಗಿ ಆಚರಣೆ ಮಾಡುತ್ತಿರುವುದೇ ಸಾಕ್ಷಿಯಾಗಿದೆ ಎಂದರು.

ಇಂದು ಕೇವಲ ಕರ್ನಾಟಕಕ್ಕೆ ಬಸವಣ್ಣ ಸಾಂಸ್ಕೃತಿಕ ನಾಯಕ ಅಲ್ಲ, ಅವರು ಭಾರತ ದೇಶದ ಸಾಂಸ್ಕೃತಿಕ ನಾಯಕ ಅಷ್ಟೇ ಅಲ್ಲದೇ ವಿಶ್ವದ ಸಾಂಸ್ಕೃತಿಕ ನಾಯಕ ಎಂದು ಗೌರವಿಸುವ ದಿನಗಳು ಮುಂದಿನ ದಿನಗಳಲ್ಲಿ ಬರುತ್ತದೆ ಎಂದು ತಿಳಿಸಿದರು.

ಅಭಾವೀಲಿಂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಇಂದಿನ ಪಾರ್ಲಿಮೆಂಟ್ ಮತ್ತು ಅಸೆಂಬ್ಲಿ ವ್ಯವಸ್ಥೆಯು 12ನೇ ಶತಮಾನದಲ್ಲೇ ಅನುಭವ ಮಂಟಪದಲ್ಲಿತ್ತು ಎಂದರು.

ಬಸವಣ್ಣನವರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಶ್ರೀಗಳು, ಗಣ್ಯರು ಉದ್ಘಾಟಿಸಿದರು.

ಅಭಾವೀಲಿಂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ 3ನೇ ಬಾರಿಗೆ ಆಯ್ಕೆಯಾದ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ದಾವಣಗೆರೆ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಮಾಜಿ ಸಚಿವ ಡಾ.ಎಸ್.ಎ.ರವೀಂದ್ರನಾಥ್‌ರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಮಹಾಸಭಾ ಉಪಾಧ್ಯಕ್ಷ ಡಾ.ಅಥಣಿ ವೀರಣ್ಣ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ, ಉದ್ಯಮಿ ಅಣಬೇರು ರಾಜಣ್ಣ, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಮಹಾಂತೇಶ ಅಗಡಿ, ಅಭಾವೀಮ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ, ಎಸ್.ಕೆ.ವೀರಣ್ಣ, ವಿಜಯಪುರದ ಉಪನ್ಯಾಸಕ ಡಾ.ಜೆ.ಎಸ್.ಪಾಟೀಲ್, ಎಸ್.ಜಿ.ಉಳುವಯ್ಯ, ಅಂದನೂರು ಮುಪ್ಪಣ್ಣ, ಬಸವ ಜಯಂತಿ ಮೆರವಣಿಗೆ ಸಮಿತಿ ಅಧ್ಯಕ್ಷ ಎಚ್.ಎನ್.ಶಿವಕುಮಾರ್, ಮಾಜಿ ಮೇಯರ್ ಎಸ್.ಟಿ.ವೀರೇಶ, ಮಾಜಿ ಉಪಮೇಯರ್ ಸೋಗಿ ಶಾಂತಕುಮಾರ, ಪಾಲಿಕೆ ಮಾಜಿ ಸದಸ್ಯರಾದ ಕೆ.ಪ್ರಸನ್ನಕುಮಾರ, ಗಡಿಗುಡಾಳ್ ಮಂಜುನಾಥ, ವೀರಶೈವ ತರುಣ ಸಂಘದ ಕಣಕುಪ್ಪಿ ಮುರುಗೇಶ್, ಸ್ಪೂರ್ತಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎನ್.ಎಸ್.ರಾಜು, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಆವರಗೆರೆ ರುದ್ರಮುನಿ, ತಾಲೂಕು ಘಟಕದ ಅಧ್ಯಕ್ಷ ಶಂಭು ಉರೆಕೊಂಡಿ, ಸಿದ್ದಗಂಗಾ ಸಂಸ್ಥೆಯ ನಿರ್ದೇಶಕ ಡಿ.ಎಸ್.ಹೇಮಂತ್, ಶಿವನಗೌಡ ಪಾಟೀಲ, ಸೋಗಿ ಗುರು, ಧನಂಜಯ, ಸ್ಪೂರ್ತಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎನ್.ಎಸ್.ರಾಜು, ಎ.ಎಚ್.ಸಿದ್ದಲಿಂಗೇಶ್, ಕದಳಿ ವೇದಿಕೆ ಅಧ್ಯಕ್ಷೆ ಮಮತಾ ನಾಗರಾಜ, ಮಹಿಳಾ ಜಿಲ್ಲಾಧ್ಯಕ್ಷೆ ಸುಷ್ಮಾ ಪಾಟೀಲ್, ಕುಸುಮ ಲೋಕೇಶ, ಯುವ ಘಟಕದ ಅವಿನಾಶ್, ಶಂಭು ಉರೆಕೊಂಡಿ, ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''