ವಿಜಯದಶಮಿಯಲ್ಲಿ ಅಸುರಿ ಶಕ್ತಿಗಳು ಅಳಿಯಲಿ

KannadaprabhaNewsNetwork |  
Published : Oct 12, 2026, 01:30 AM IST
11ಕೆಎಂಎನ್ ಡಿ16 | Kannada Prabha

ಸಾರಾಂಶ

ದೇಶದ ಹೊರಗಷ್ಟೇ ಅಲ್ಲ ಒಳಗೂ ರಾಕ್ಷಸರಿದ್ದು, ಅಂತಹ ಅಸುರಿ ಶಕ್ತಿಗಳ ನಿವಾರಣೆಯು ವಿಜಯದಶಮಿ ಸಂದರ್ಭದಲ್ಲಿ ಆಗಬೇಕು ಎಂದು ಶ್ರೀ ಜಡೇಸಿದ್ದ ಶಿವಯೋಗೀಶ್ವರ ಶಾಂತಾಶ್ರಮದ ಡಾ.ಶಿವಾನಂದ ಸ್ವಾಮೀಜಿ ಹೇಳಿದ್ದಾರೆ.

- ಶ್ರೀ ದುರ್ಗಾದೇವಿ ಘಟ ಸ್ಥಾಪನೆಯಲ್ಲಿ ಡಾ.ಶಿವಾನಂದ ಸ್ವಾಮೀಜಿ ಆಶೀರ್ವಚನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದ ಹೊರಗಷ್ಟೇ ಅಲ್ಲ ಒಳಗೂ ರಾಕ್ಷಸರಿದ್ದು, ಅಂತಹ ಅಸುರಿ ಶಕ್ತಿಗಳ ನಿವಾರಣೆಯು ವಿಜಯದಶಮಿ ಸಂದರ್ಭದಲ್ಲಿ ಆಗಬೇಕು ಎಂದು ಶ್ರೀ ಜಡೇಸಿದ್ದ ಶಿವಯೋಗೀಶ್ವರ ಶಾಂತಾಶ್ರಮದ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ವಿಶ್ವ ಹಿಂದು ಪರಿಷದ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಾದೇವಿಯ ಘಟಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವಿಜಯದಶಮಿ ಹಬ್ಬದ ವೇಳೆ ನಮ್ಮಲ್ಲಿರುವ ಅಸುರಿ ಶಕ್ತಿಗಳ ನಿವಾರಣೆಯೂ ಆಗಬೇಕು ಎಂದರು.

ದುಷ್ಟಶಕ್ತಿಗಳ ಸಂಹಾರಕ್ಕಾಗಿಯೇ ನಮ್ಮಲ್ಲಿ ನಾನಾ ದೇವ-ದೇವತೆಗಳ ಅವತಾರಗಳಾಗಿವೆ. ಅಸುರೀ ಶಕ್ತಿಗಳ ನಿವಾರಣೆಗಾಗಿಯೇ ನಮ್ಮೆಲ್ಲ ದೇವತೆಗಳ ಕೈಯಲ್ಲಿ ಆಯುಧಗಳಿವೆ. ನಾನಾ ಬಲಾಢ್ಯ ರಾಕ್ಷಸರನ್ನು ಸಂಹರಿಸಲು ದುರ್ಗಾದೇವಿ ಅವತರಿಸಿದ್ದಳು ಎಂಬುದನ್ನು ದೇವಿ ಭಾಗವತ ಪುರಾಣದಿಂದ ತಿಳಿದಿದ್ದೇವೆ. ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆಯಿಂದ ನಮ್ಮಲ್ಲಿರುವ ಆತ್ಮ ಮತ್ತು ಜ್ಞಾನ ಶಕ್ತಿಗಳು ಜಾಗೃತವಾಗಿ, ಅಸುರೀ ಗುಣ, ರಾಕ್ಷಸೀ ಪ್ರವೃತ್ತಿ ನಿವಾರಣೆ ಆಗಬೇಕು ಎಂದು ತಿಳಿಸಿದರು.

ಮಾಜಿ ಮೇಯರ್ ಎಸ್.ಟಿ.ವೀರೇಶ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ವಿ.ಹಿಂ.ಪ. ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ 10 ದಿನ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮಹಾಶಕ್ತಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಆನಂದ, ಸಹ ಸಂಚಾಲಕರಾದ ಪ್ರಭಾವತಿ ವಿನಾಯಕ, ಬಾಲಚಂದ್ರ ಶ್ರೇಷ್ಠಿ, ಗೌತಮ್ ಜೈನ್, ಪ್ರಮುಖರಾದ ವಿನಾಯಕ ರಾನಡೆ, ಕೊಟ್ರೇಶಗೌಡ, ಶಂಭುಲಿಂಗಪ್ಪ, ಹರೀಶ ಪವಾರ್, ದುರುಗೇಶ, ಪುನೀತ್, ಗೋಪಾಲರಾವ್ ಸಾವಂತ್, ಕಿಶೋರಕುಮಾರ, ಟಿಂಕರ್ ಮಂಜಣ್ಣ, ಸುನಿಲ್ ಗುಡಾಳ್, ಚೇತನಾ ಶಿವಕುಮಾರ, ರೇಖಾ, ಪುಷ್ಪಾ, ದಾಕ್ಷಾಯಣಮ್ಮ, ಮಂಜು, ನಾರಾಯಣ, ದುರ್ಗೇಶ, ಜ್ಯೋತಿ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

ಇದಕ್ಕೂ ಮುನ್ನ ನಿಟ್ಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ದೇವಿಯ ವಿಗ್ರಹವನ್ನು ಮಂಗಳ ವಾದ್ಯಗಳೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣಕ್ಕೆ ಕರೆತರಲಾಯಿತು.

- - -

-(ಫೋಟೋಗಳಿವೆ)

-11ಕೆಡಿವಿಜಿ3:-11ಕೆಡಿವಿಜಿ4:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮ, ಸಂಸ್ಕೃತಿಯ ಏಕತೆ ಪರಂಪರೆಯೇ ದಸರಾ: ಸುರೇಶ್‌ ಋಗ್ವೇದಿ
ಜಿಪಂ ಚುನಾವಣೆ: ಶಿವರಾತ್ರೀಶ್ವರ ಜಯಂತಿಗೆ ಅಡ್ಡಿ