ಕನ್ನಡಪ್ರಭ ವಾರ್ತೆ ಮುಧೋಳ
ನಿವೃತ್ತ ಪ್ರಾಂಶುಪಾಲ ಜಿ.ಎ.ಕಂಬಿ ಮಾತನಾಡಿ, ಇತ್ತೀಚಿನ ದಿನದಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವಿನ ಸಂಬಂಧಗಳು ಹಳಸುತ್ತಿವೆ. ಆದರೆ ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಗುರುಗಳನ್ನು ನೆನಪಿಸಿಕೊಂಡು ಗೌರವಿಸಿ ಇದರ ನೆನಪಲ್ಲಿ 22 ವರ್ಷಗಳ ಹಿಂದಿನ ಸಂಬಂಧವನ್ನು ಜಾಗೃತಗೊಳಿಸುವ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾದದ್ದು ಎಂದರು.
ನಿವೃತ್ತ ಉಪನ್ಯಾಸಕ ಜೆ.ಬಿ. ಪರದೇಶಿ ಮತ್ತು ವಿ.ವಿ. ಹಂಗರಗಿ ಮಾತನಾಡಿ, ಗುರುವಿನ ಮಹತ್ವ ವಿದ್ಯಾರ್ಥಿಗಳಿಗೆ ಅರ್ಥವಾಗಬೇಕು. ವಿದ್ಯಾರ್ಥಿಯಲ್ಲಿನ ಕಲಿಯುವ ಹಂಬಲ ಗುರುವಿಗೆ ಅರ್ಥವಾಗಬೇಕು ಎಂದು ಹೇಳಿದರು.ಆರ್.ಎಂ.ಜಿ ಪ.ಪೂ ಕಾಲೇಜಿನ ಪ್ರಾಚಾರ್ಯ ಬಸವರಾಜ ಗಂಜಿಹಾಳ ಅಧ್ಯಕ್ಷತೆ ವಹಿಸಿದ್ದರು. ಮುಧೋಳ ವಿರಕ್ತಮಠ-ಗವಿಮಠದ ಶ್ರೀ ಬಸವಲಿಂಗ ಮಹಾಸ್ವಾಮಿಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಈ ವೇಳೆ ನಿವೃತ್ತ ಉಪನ್ಯಾಸಕರಾದ ಸಿ.ಎಂ.ಬಳ್ಳೊಳ್ಳಿ, ವಿ.ಪಿ. ಹುಣಶಿಕಟ್ಟಿ, ಎಸ್.ಎ. ಪೂಜಾರಿ, ಜಿ.ಎ.ಕಂಬಿ, ಜೆ.ಬಿ. ಪರದೇಶಿ, ಎಸ್.ಎಚ್. ಮೂಡಲಗಿ, ವಿ.ವಿ.ಹಂಗರಗಿ, ಎಸ್.ಬಿ. ಜಲಗೇರಿ, ಎಸ್.ಕೆ.ಗೌಡರ, ಎ.ವಿ.ಪತ್ತಾರ, ಎಸ್.ಎಸ್. ಜಾಧವ, ಶೈಲಜಾ ಪಾಟೀಲ ಹಾಗೂ ಬಿ.ಎ.ಗಂಜಾಳ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ಸಂಘಟಕರಾದ ಮಹೇಶ ವಾರದ, ಮೈಬೂಬ ಬಾಗವಾನ, ಡಾ.ಶ್ರೀನಿವಾಸ ನಿಪ್ಪಾಣಿ, ಗೌಡಪ್ಪ ಕೋಳೂರ, ವೀರೇಂದ್ರ ಕೇರಿ, ಸತೀಶ ಪೂಜಾರಿ, ಡಾ.ಕಿರಣ ಹುಣಶಿಕಟ್ಟಿ, ಮುತ್ತರಾಜ ಬಳಗಾರ, ಸುಮಾ ನಂದಿಕೋಲ, ಅನಿತಾ ಸುಖನಾದಗಿ, ಶ್ವೇತಾ ಕಳಂಜಿ ಸೇರಿದಂತೆ 50ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ವಿದ್ಯಾರ್ಥಿ ಜೀವನದ ನೆನಪುಗಳ ಮೆಲುಕು ಹಾಕಿದರು.