- ನಿಟುವಳ್ಳಿ ಶ್ರೀ ದುರ್ಗಾಂಬಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಎನ್.ರಾಜಶೇಖರ
ಕನ್ನಡಪ್ರಭ ವಾರ್ತೆ ದಾವಣಗೆರೆ ಭಾರತ ಪ್ರಧಾನಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನರೇಂದ್ರ ಮೋದಿ ಅವರಿಗೆ ದೇವರು ಹಾಗೂ ಭಾರತ ಮಾತೆ ಇನ್ನು ಹೆಚ್ಚಿನ ದೀರ್ಘಾವಧಿಯ ಆರೋಗ್ಯ, ಆಯಸ್ಸು ಮತ್ತು ಅಧಿಕಾರಕ ಶಕ್ತಿ ನೀಡಲೆಂದು ಪ್ರಾರ್ಥಿಸಿ, ಬಿಜೆಪಿ ಜಿಲ್ಲಾ ಘಟಕ ನಗರದ ನಿಟುವಳ್ಳಿಯಲ್ಲಿನ ಗ್ರಾಮದೇವತೆ ಶ್ರೀ ದುರ್ಗಾಂಬಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿತು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ಮಾತನಾಡಿ, ಕೊರೋನಾ ಹಾವಳಿಯ ಕಾಲದಲ್ಲಿ ಹಾಗೂ ಈಗಿನ ಮಧ್ಯಪ್ರಾಜ್ಯ ದೇಶಗಳ ಯುದ್ಧ ಸಮಯದಲ್ಲೂ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಮೋದಿ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನಕ್ಕೆ ತಂದಿದ್ದಾರೆ. ಸಾಮಾಜಿಕ ಭದ್ರತೆ ಅಡಿಯಲ್ಲಿ ದೇಶದ ಜನತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ವ್ಯಕ್ತಿಯ ಆಡಳಿತ ದೇಶಕ್ಕೆ ಇನ್ನೂ ಹೆಚ್ಚಿನ ಕಾಲ ಅಗತ್ಯವಿದೆ ಎಂದು ಹೇಳಿದರು.ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ ಮಾತನಾಡಿ, ಭಾರತದ ಆರ್ಥಿಕತೆ ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ಸ್ಥಾನಮಾನವನ್ನು ಹೆಚ್ಚಿಸಿದ ನಿಜವಾದ ರಾಜಕಾರಣಿ ನರೇಂದ್ರ ಮೋದಿಜಿ. ಭಾರತದ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಮೋದಿ ಅವರ ಸಮರ್ಪಿತ ಸಾರ್ವಜನಿಕ ಸೇವೆ ಮತ್ತು ನಾಯಕತ್ವಕ್ಕಾಗಿ ಅಭಿನಂದನೆ ಸಲ್ಲಿಸಲೇಬೇಕಿದೆ ಎಂದರು.
- - -