ರೇಣುಕಾಚಾರ್ಯ ಜಯಂತಿ ಮನೆ ಮನಗಳಲ್ಲಿ ಆಚರಿಸುವಂತಾಗಲಿ: ರೇವಣಸಿದ್ದೇಶ್ವರ ಸ್ವಾಮೀಜಿ

KannadaprabhaNewsNetwork |  
Published : Mar 14, 2025, 12:32 AM IST
ಸವಣೂರಿನಲ್ಲಿ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಎರಡು ನವಜೋಡಿಗಳು ಶ್ರೀಗಳ ಸಾನ್ನಿಧ್ಯದಲ್ಲಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. | Kannada Prabha

ಸಾರಾಂಶ

ಪ್ರತಿಯೊಂದು ಕುಟುಂಬಗಳು ಅವಿಭಕ್ತ ಕುಟುಂಬಗಳಂತೆ ನಡೆದುಕೊಂಡಾಗ ಜೀವನ ಸಾರ್ಥಕತೆ ಹೊಂದಲಿದೆ.

ಸವಣೂರು: ರೇಣುಕಾಚಾರ್ಯ ಜಯಂತಿಯನ್ನು ಕೇವಲ ಮಂದಿರದಲ್ಲಿ ಆಚರಿಸದೆ ಮನೆ ಮನಗಳಲ್ಲಿ ಆಚರಿಸಬೇಕು ಎಂದು ಬಂಕಾಪುರದ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.ಪಟ್ಟಣದ ರೇಣುಕಾಚಾರ್ಯ ಮಂದಿರದ ಆವರಣದಲ್ಲಿ ರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ ಹಾಗೂ ಸಾಮೂಹಿಕ ವಿವಾಹ ಮತ್ತು ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಭಕ್ತರು ಒಗ್ಗೂಡಿಕೊಂಡು ಶ್ರದ್ಧಾ ಭಕ್ತಿಯಿಂದ ದೇವರ ಕಾರ್ಯದಲ್ಲಿ ಪಾಲ್ಗೊಂಡಾಗ ಅದ್ಧೂರಿ ಆಚರಣೆಗೆ ಸಾಧ್ಯವಾಗಲಿದೆ. ಅದಕ್ಕೆ ಸವಣೂರಿನ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಮಾದರಿಯಾಗಿದೆ. ಪ್ರತಿಯೊಬ್ಬ ಮನುಷ್ಯ ಬಾಳಿ ಬದುಕಬೇಕಾದರೆ ಸಂಸಾರ ಅವಶ್ಯವಾಗಿದೆ. ಪ್ರತಿಯೊಂದು ಕುಟುಂಬಗಳು ಕೂಡಿಕೊಂಡು ಅವಿಭಕ್ತ ಕುಟುಂಬಗಳಂತೆ ನಡೆದುಕೊಂಡಾಗ ಜೀವನ ಸಾರ್ಥಕತೆ ಹೊಂದಲಿದೆ ಎಂದರು.ಹಿರೇಮಣಕಟ್ಟಿಯ ಮುರುಘರಾಜೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಬಿತ್ತುವ ಮೂಲಕ ಪೀಠಗಳು ಧರ್ಮದ ಉದ್ಧಾರಕ್ಕೆ ಹೆಚ್ಚಿನ ಕೆಲಸವನ್ನು ನಿರ್ವಹಿಸುತ್ತಾ ಬರುತ್ತಿವೆ. ಮಕ್ಕಳಿಗೆ ಧರ್ಮ, ಸಂಸ್ಕೃತಿಯ ಪಾಠವನ್ನು ಬೋಧನೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರವೀಣ ಚರಂತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಮೂಹಿಕ ವಿವಾಹದಲ್ಲಿ ಎರಡು ನವಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಕಾರ್ಯಕ್ರಮದ ಅಂಗವಾಗಿ ಸಕಲ ವಾದ್ಯ ವೈಭವಗಳೊಂದಿಗೆ ಪೂರ್ಣ ಕುಂಭಮೇಳದೊಂದಿಗೆ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ತಹಸೀಲ್ದಾರ್ ಭರತರಾಜ ಕೆ.ಎನ್. ಚಾಲನೆ ನೀಡಿದರು. ನಂತರ, ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರೇಣುಕಾಚಾರ್ಯ ಮಂದಿರಕ್ಕೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ರೇಣುಕ ಮಂದಿರದ ಅಧ್ಯಕ್ಷ ರವತಪ್ಪ ಬಿಕ್ಕಣ್ಣವರ, ಸುಮಂತ ಸಿಂಧೂರ, ಚನ್ನವೀರಯ್ಯ ಚರಂತಿಮಠ, ಬಿ.ಎಂ. ಪಾಟೀಲ, ಉಮೇಶ ಕಳಕಪ್ಪನವರ, ಈರಣ್ಣ ಬಾಳಿಕಾಯಿ, ಗುರುಪಾದಪ್ಪ ಶಿಗ್ಗಾಂವಿ, ರಾಜಣ್ಣ ಮಟಿಗಾರ, ಪ್ರಭು ಪಾಟೀಲ, ಫಕ್ಕಿರಯ್ಯ ಹಿರೇಮಠ, ಈರಣ್ಣ ಕಾಳಶೇಟ್ಟಿ, ವಿಜಯ ಪಾಟೀಲ ಸೇರಿದಂತೆ ಭಕ್ತರು ಇದ್ದರು. ಕಾರ್ಯಕ್ರಮವನ್ನು ಶಿಕ್ಷಕ ಬಿ.ಎಸ್. ಚಳ್ಳಾಳ ನಿರ್ವಹಿಸಿದರು. ಲಿಂ. ಸಂಗನಬಸವ ಸ್ವಾಮಿಗಳ ಭಾವಚಿತ್ರದ ಮೆರವಣಿಗೆ

ಶಿಗ್ಗಾಂವಿ: ಪಟ್ಟಣದ ವಿರಕ್ತಮಠದಲ್ಲಿ ಲಿಂ. ಸಂಗನಬಸವ ಸ್ವಾಮಿಗಳ ಪುಣ್ಯಾರಾಧನೆ ಅಂಗವಾಗಿ ಲಿಂ. ಸಂಗನಬಸವ ಸ್ವಾಮಿಗಳ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.ವಿರಕ್ತಮಠದ ಆವರಣದಿಂದ ಸಂಗನಬಸವ ಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು. ಸಕಲ ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಲಿಂ. ಸಂಗನಬಸವ ಸ್ವಾಮಿಗಳ ಭಾವಚಿತ್ರ ಮೆರವಣಿಗೆಯಲ್ಲಿ ಸಂಗನಬಸವ ಸ್ವಾಮಿಗಳು, ಬಸವ ದೇವರು ವಿವಿಧ ಗಣ್ಯರು ಪಾಲ್ಗೊಂಡಿದ್ದರು.

ಇದಕ್ಕೂ ಪೂರ್ವದಲ್ಲಿ ಲಿಂ. ಸಂಗನಬಸವ ಸ್ವಾಮಿಗಳ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಸೇರಿದಂತೆ ಪೂಜಾ ವಿಧಿ ವಿಧಾನಗಳು ನೆರವೇರಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ