ಅಂಕೋಲಾ: ನಿವೃತ್ತ ಶಿಕ್ಷಕರು ಜೀವನೋತ್ಸಾಹವನ್ನು ಎಂದಿಗೂ ಕಳೆದುಕೊಳ್ಳಬಾರದು. ನಿವೃತ್ತಿ ನಂತರವು ಸದಾ ಕ್ರಿಯಾಶೀಲರಾಗಿ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಕಾರ್ಯ ಮಾಡಬೇಕಿದೆ ಎಂದು ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಉದಯ ನಾಯಕ ಸೂರ್ವೆ ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ವತಿಯಿಂದ ತಾಲೂಕಿನ ನಂ. 1 ಶಾಲೆಯಲ್ಲಿ ಹಮ್ಮಿಕೊಳ್ಳಲಾದ ತಾಲೂಕಿನ ವಯೋನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ ಮಾತನಾಡಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರಂತರವಾಗಿ ಹಮ್ಮಿಕೊಳ್ಳುತ್ತಿರುವ ಔಚಿತ್ಯಪೂರ್ಣವಾದ ಕಾರ್ಯಕ್ರಮವಿದು. ನಿಮ್ಮೆಲ್ಲರ ಸೇವೆ ಬಹಳ ತೃಪ್ತಿಯನ್ನು ತಂದಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಹರ್ಷಿತ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ, ಮಾತನಾಡಿದರು.ಬೊಬ್ರುವಾಡ ಶಾಲೆಯ ಪದೋನ್ನತ ಮುಖ್ಯಾಧ್ಯಾಪಕ ಮಾರುತಿ ಲಕ್ಷ್ಮೇಶ್ವರ, ಶಿಕ್ಷಕ ಚಂದ್ರಹಾಸ ಗೌಡ, ವಜ್ರಳ್ಳಿ ಶಾಲಾ ಶಿಕ್ಷಕಿ ರೋಹಿಣಿ ಬಿ. ನಾಯಕ, ಹಡಸಿಗದ್ದೆ ಶಾಲಾ ಶಿಕ್ಷಕಿ ಚಂದ್ರಭಾಗಿ ನಾಯಕ, ಬೆಳಸೆ ನಂ. 1 ಶಾಲಾ ಶಿಕ್ಷಕಿ ಮಥುರಾ ಬಿ. ನಾಯಕ, ಕಂಚಿನಕೇರಿ ಶಾಲಾ ಶಿಕ್ಷಕ ರಾಜು ಆರ್. ನಾಯಕ, ಒಕ್ಕಲಬೆಳಸಿ ಶಾಲಾ ಶಿಕ್ಷಕ ತುಳುಸು ಇಂಕು ಗೌಡ ಅವರನ್ನು ಆತ್ಮೀಯವಾಗಿ, ಸನ್ಮಾನಿಸಿ ಬೀಳ್ಕೊಡಲಾಯಿತು.
ಸಂಘದ ಉಪಾಧ್ಯಕ್ಷೆ ಭಾರತಿ ನಾಯಕ, ಶಿಕ್ಷಕರ ಸಂಘದ ಸದಸ್ಯರಾದ ತುಕಾರಾಮ ಭಂಟ, ದಿವಾಕರ ದೇವನಮನೆ, ಶೋಭಾ ಎಸ್. ನಾಯಕ, ಸಂಜೀವ ರಾಮ ನಾಯಕ, ಶಿಕ್ಷಕರಾದ ವಿನಾಯಕ ನಾಯಕ, ಬೀರಣ್ಣ ನಾಯಕ, ರಮಾಕಾಂತ ನಾಯಕ, ವೇಲಾಯುದ ನಾಯರ, ನಾರಾಯಣ ಆರ್. ನಾಯಕ, ಶ್ರೀನಿವಾಸ ನಾಯಕ, ರೋಹಿದಾಸ ಭಂಟ, ಮುತಾಲಿಕ್ ಶೇಖ, ಮಾಲಾ ಪಟಗಾರ, ವೀಣಾ ಹೆಗಡೆ, ಶಾರದಾ ನಾಯಕ ಸೇರಿದಂತೆ ನಿವೃತ್ತ ಶಿಕ್ಷಕರ ಕುಟುಂಬಸ್ಥರು ಇದ್ದರು.ಶಿಕ್ಷಕರ ಸಂಘದ ಪ್ರ. ಕಾರ್ಯದರ್ಶಿ ರಾಜು ಎಚ್. ನಾಯಕ ಸ್ವಾಗತಿಸಿದರು. ರಾಜೇಶ ನಾಯಕ ಸೂರ್ವೆ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಮಂಜುನಾಥ ವೆಂಕಟರಮಣ ನಾಯಕ ವಂದಿಸಿದರು.