- ಶಾಸಕ ಡಿ.ಜಿ.ಶಾಂತನಗೌಡ ಸಲಹೆ । ಹೊನ್ನಾಳಿಯಲ್ಲಿ ಛತ್ರಪತಿ ಶಿವಾಜಿ 399ನೇ ಜಯಂತಿ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಾರತ ಇತಿಹಾಸದ ಪುಟಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ದೇಶಪ್ರೇಮ ಹಾಗೂ ಹಿಂದುತ್ವ ಬಗ್ಗೆ ಅವರಿಗಿದ್ದ ಅಚಲ ಗೌರವಗಳು ಇಂದಿಗೂ ಚಿರಸ್ಥಾಯಿಯಾಗಿದೆ. ರಾಷ್ಟ್ರದ ವಿಚಾರಗಳು ಬಂದಾಗ ಪ್ರತಿಯೊಬ್ಬರಿಗೂ ಮೊದಲು ನೆನಪಾಗುವುದು ಛತ್ರಪತಿ ಶಿವಾಜಿ ಹೆಸರು. ಶಿವಾಜಿ ಅಪ್ರತಿಮ ದೇಶಭಕ್ತ ಭಾರತಮಾತೆಯ ಸುಪುತ್ರ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ಗುರುವಾರ ತಾಲೂಕು ಆಡಳಿತ ಹಾಗೂ ಮರಾಠ ಸಮಾಜದ ಗುರುಭವನದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ 399ನೇ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ಕೇವಲ ಉತ್ತಮ ಅಂಕ ಗಳಿಸಿ ಉತ್ತಮ ಸಂಬಳ ತೆಗೆದುಕೊಂಡು ಅದ್ಧೂರಿ ಜೀವನ ನಡಸಿದರೆ ಅದು ಜೀವನ ಅಲ್ಲ. ಶಿವಾಜಿ ಮಹಾರಾಜರ ಧೈರ್ಯ ಹಾಗೂ ಸಾಹಸಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಮಕ್ಕಳು ಸಹ ತಾಯಿ ಭಾರತಮಾತೆಯ ಸೇವೆಗೆ ಸಿದ್ಧರಾಗುವಂತ ಗುಣಗಳನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಮಹಾನ್ ದೇಶಭಕ್ತರ ಜಯಂತಿ ಕಾರ್ಯಕ್ರಮಗಳೂ ಸಾರ್ಥಕತೆ ಪಡೆಯುತ್ತವೆ ಎಂದ ಅವರು, ಮುಂದಿನ ವರ್ಷ ತಾಲೂಕು ಆಡಳಿತದಿಂದಲೇ ಸಮುದಾಯದ ಉತ್ತಮ ಅಂಕ ಗಳಿಸಿದ ಪ್ರತಿಭಾವಂತರಿಗೆ ಸನ್ಮಾನಿಸಲಾಗುವುದು ಎಂದರು.
ತಾಲೂಕು ಮರಾಠ ಸಮಾಜ ಅಧ್ಯಕ್ಷ ಎ.ಆರ್. ಚಂದ್ರಶೇಖರಪ್ಪ ಮಾತನಾಡಿ, ಹಿಂದು ಸಾಮ್ರಾಜ್ಯವನ್ನು ಸ್ಥಾಪಿಸಿ ಹಿಂದೂ ಧರ್ಮಕ್ಕಾಗಿ ತನ್ನ ಜೀವಿತಾವಧಿಯನ್ನು ಮೀಸಲಿಟ್ಟ ಪರಾಕ್ರಮಿ ಶಿವಾಜಿ. ಈ ಮಹಾರಾಜರು ನಮ್ಮವರು ಎಂಬ ಹೆಮ್ಮೆ ನಮಗೆ ಸದಾ ಇರಬೇಕು ಎಂದರು.
ಕಾರ್ಯಕ್ರಮಕ್ಕೂ ಮೊದಲು ತಾಲೂಕು ಕಚೇರಿಯಿಂದ ಗುರು ಭವನದವರೆಗೆ ಶಿವಾಜಿ ಪ್ರತಿಮೆಯ ಮರೆವಣಿಗೆ ನಡೆಯಿತು. ನೂರಾರು ಜನರು ಪಾಲ್ಗೊಂಡಿದ್ದರು. ಗ್ರೇಡ್-2 ತಹಸೀಲ್ದಾರ್ ಡಿ.ಎಂ.ಸುರೇಶ್, ರಮೇಶ್ ಆರ್‌ಐ, ಅಶೋಕ್, ಶಿವಾಜಿ ರಾವ್, ಸುರೇಶ್, ರೂಪಾ ದೇವರಾಜ್, ಮನೋಹರ್, ಮಂಜುನಾಥ್ ಇತರರು ಇದ್ದರು.
(ಕೋಟ್) ಶಿವಾಜಿ ಮಹಾರಾಜರು ಯುವಕನಾಗಿದ್ದಾಗಲೇ ಗೆರಿಲ್ಲಾದಂತಹ ಯುದ್ಧತಂತ್ರಗಳನ್ನು ಎಲ್ಲರಿಗೂ ಕಲಿಸಿ ಅನೇಕ ಕೋಟೆಗಳನ್ನು ಗೆದ್ದರು. ಬಿಜಾಪುರ ಸುಲ್ತಾನರ ವಿರುದ್ಧ ತನ್ನದೇ ಆದ ಸೈನ್ಯ ಕಟ್ಟಿ ವಿಶೇಷವಾಗಿ ಗೆರಿಲ್ಲಾ ಮಾದರಿ ದಾಳಿಯಿಂದ ವೈರಿಗಳನ್ನು ಮಟ್ಟಹಾಕಿದವರು, ರಾಜ್ಯ ಕಟ್ಟಿದ ಧೀರರಾಜ ಶಿವಾಜಿ ಮಾದರಿ ಆಡಳಿತ ನಡೆಸಿದ ದೇಶದ ಹೆಮ್ಮೆಯ ರಾಜನಾಗಿದ್ದರು.
- - -
ಹೊನ್ನಾಳಿ ತಾಲೂಕು ಅಡಳಿತ, ಗೂ ಮರಾಠ ಸಮಾಜದಿಂದ ಗುರು ಭವನದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಸಮಾರಂಭವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.