- ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಎಸ್.ಎಸ್.ಸ್ನೇಹಾ ಶಾನುವಳ್ಳಿ ಸಲಹೆ
ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಗೆಲುವಿನ ಕಡೆಗೆ ಗುರಿ ಮುಟ್ಟುವ ಛಲವಿರಬೇಕು ಎಂದು ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಎಸ್.ಎಸ್.ಸ್ನೇಹಾ ಶಾನುವಳ್ಳಿ ಹೇಳಿದರು.
ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಸರ್ಕಾರಿ ಪ್ರೌಢಶಾಲೆ ಆತಿಥ್ಯದಲ್ಲಿ ಆರಂಭಗೊಂಡ ಚಿಕ್ಕಮ ಗಳೂರು ಜಿಲ್ಲಾ ಮಟ್ಟದ 14/17 ವಯೋಮಿತಿ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ಪರ್ಧಿಸಿ ಗೆಲುವಿನ ಗುರಿ ಮುಟ್ಟುವ ಶ್ರೇಷ್ಠ ಛಲ ಇಟ್ಟುಕೊಂಡಿರಬೇಕು. ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದೇ ಮುಖ್ಯ ಎಂದು ತಿಳಿದಿರಬೇಕು.
ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಬಾಳೆಹೊನ್ನೂರಿನಲ್ಲಿ ಉತ್ತಮ ರೀತಿಯಲ್ಲಿ ವ್ಯವಸ್ಥಿತ ಕ್ರೀಡಾಕೂಟ ಆಯೋಜನೆ ಮಾಡಿದ್ದು, ಸ್ಪರ್ಧಿಗಳು ಕ್ರೀಡಾ ಸ್ಫೂರ್ತಿ ಯಿಂದ ಭಾಗವಹಿಸಿ ಬಹುಮಾನ ಪಡೆಯಬೇಕು. ತೀರ್ಪುಗಾರರು ನ್ಯಾಯಯುತ, ನಿಪಕ್ಷಪಾತ ತೀರ್ಪು ನೀಡಬೇಕು.
ಶಾಸಕ ಟಿ.ಡಿ.ರಾಜೇಗೌಡ ಸ್ಪರ್ಧಿಗಳು ಹಾಗೂ ಕ್ರೀಡಾ ಸಾಧಕರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಬಾಳೆಹೊನ್ನೂರಿನಲ್ಲಿ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆ ಅಚ್ಚುಕಟ್ಟಾಗಿ ಆಯೋಜಿಸಿದ್ದು, ಸ್ಪರ್ಧಿಗಳು ಕ್ರೀಡಾ ಮನೋಭಾವ ದೊಂದಿಗೆ ಸ್ಪರ್ಧಿಸಬೇಕು ಎಂದರು.
ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಸ್ನೇಹಾ, ದಕ್ಷಿಣ ವಲಯ ಹ್ಯಾಮರ್ ಥ್ರೋನಲ್ಲಿ ಚಿನ್ನದ ಪದಕ ಪಡೆದ ಸಾಲೀಮ್ ಅವರನ್ನು ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿದರು.
ಬಾಳೆಹೊನ್ನೂರಿನ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಸ್ನೇಹಾ ಶಾನುವಳ್ಳಿ ಅವರನ್ನು ಸನ್ಮಾನಿಸಲಾಯಿತು. ಎಂ.ಎಸ್.ಚನ್ನಕೇಶವ್, ಚಂದ್ರಮ್ಮ, ಎಂ.ಜೆ.ಮಹೇಶ್, ಶಬನಾ ಅಂಜುಮ್, ಮನುಕುಮಾರ್, ಮಹಮ್ಮದ್ ಹನೀಫ್ ಇದ್ದರು.೨೭ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟನೆಗೆ ಆಗಮಿಸಿದ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಸ್ನೇಹಾ, ಹ್ಯಾಮರ್ ಥ್ರೋ ಚಿನ್ನದ ಪದಕ ವಿಜೇತ ಸಾಲೀಮ್ ಅವರ ಮೆರವಣಿಗೆಗೆ ಶಾಸಕ ಟಿ.ಡಿ.ರಾಜೇಗೌಡ ಚಾಲನೆ ನೀಡಿದರು.