ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಸತ್ಯಮಂಗಲದಲ್ಲಿನ ಜೈನ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ‍್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಕನ್ನಡ ನಾಡಿನ ಇತಿಹಾಸವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು, ಕನ್ನಡದ ಏಕೀಕರಣಕ್ಕೆ ಅನೇಕರು ತಮ್ಮದೇ ಕೊಡುಗೆ ನೀಡಿದ್ದಾರೆ, ದಿವಂಗತ ಮುಖ್ಯಮಂತ್ರಿ ದೇವರಾಜ ಅರಸು ಅವರಿಂದ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂತು. ಬದುಕನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಭಾಷೆಯನ್ನು ಮರೆಯಬಾರದು, ಕನ್ನಡವೆಂಬುದು ವಿವಿಧತೆಯಲ್ಲಿ ಏಕತೆಯನ್ನು ತೋರುವ ಭಾಷೆಯಾಗಿದೆ. ಈ ನಾಡಿನಲ್ಲಿ ಅನೇಕ ಸಾಧಕರನ್ನು ಕಾಣಬಹುದು ತಮ್ಮ ಒಡವೆಯನ್ನು ಅಡವಿಟ್ಟು ಕಾಲುವೆ, ಅಣೆಕಟ್ಟುಗಳನ್ನು ಕಟ್ಟಿಸಿದ ಮೈಸೂರಿನ ಅರಸರನ್ನು ನೆನೆದರು. ಕನ್ನಡ ಮಾತನಾಡಿದರೆ ದಂಡ ಹಾಕುವ ಪರಿ ಶೋಚನೀಯ, ಇಂಗ್ಲಿಷ್ ಬೇಕು ಆದರೆ ಕನ್ನಡ ನಾಶವಾಗದಿರಲಿ ಎಂಬ ಸಂದೇಶವನ್ನು ನೀಡಿದರು.ನಯಲಾ ಕಾಲೇಜಿನ ಪ್ರಾಂಶುಪಾಲ ಇಕ್ಬಾಲ್ ಅಹಮದ್ ಮಾತನಾಡಿ ಕರ್ನಾಟಕದಲ್ಲಿ ಇಂತಹ ಸಂಸ್ಕೃತಿ, ಸಂಪತ್ತು ಮತ್ತು ಆದರಣೀಯ ಭಾಷೆಯನ್ನು ಪಡೆದಂತಹ ನಾವೇ ಧನ್ಯರು, ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಅಲಂಕರಿಸಲು ಸಾಧ್ಯ ಎಂದರು.
ವಿದ್ಯಾರ್ಥಿಗಳಿಂದ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯೋಪಾಧ್ಯಾಯರಾದ ಶೈಲ, ಶೃತಿ,ರಾಘವೇಂದ್ರ ಉಪನ್ಯಾಸಕರುಗಳಾದ ಹರೀಶ್ ಕುಮಾರ್ ಟಿ ಜಿ, ಪ್ರಶಾಂತ್ ಲಿಂಗಮ್, ರಾಮಚಂದ್ರಪ್ಪ, ಹರೀಶ್, ಕುಮಾರಿ ಭವ್ಯ,ನಾಗಲಕ್ಷ್ಮಿ, ದೀಪ, ಹೇಮಲತಾ, ಸುಶೀಲ,ನಂದಿನಿ,ರಾಜಶೇಖರ್,ಶ್ವೇತ ಮೊದಲಾದವರು ಭಾಗವಹಿಸಿದ್ದರು.