ಕನ್ನಡಪ್ರಭ ವಾರ್ತೆ ಮದ್ದೂರು
ನಗರದ ಶಿವಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕದಲೂರು ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಸುಖ-ಶಾಂತಿ, ಸಮೃದ್ಧಿ, ಸರ್ವರ ಒಳಿತಿಗಾಗಿ ನಡೆದ ವಿಶೇಷ ದೀಪಾವಳಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೀಪಾವಳಿ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸುಖ-ಶಾಂತಿ ನೆಲೆಸುವ ಜೊತೆಗೆ ಕೆ.ಆರ್.ಎಸ್ ಅಣೆಕಟ್ಟೆ ಭರ್ತಿಯಾಗಿ, ಕೆರೆಕಟ್ಟೆಗಳು ತುಂಬಿ ರೈತರು ಉತ್ತಮ ಬೇಸಾಯ ಮಾಡುವ ಮೂಲಕ ರೈತರ ಹಲವು ಸಂಕಷ್ಟಗಳು ದೂರವಾಗಲಿ ಎಂದು ಕೋರಿದರು.ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಗ್ರಾಮೀಣ ಭಾಗದ ಜನರು ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಅನುಕೂಲು ಪ್ರತಿ ಲೀಟರ್ ಹಾಲಿಗೆ 7 ರು. ಹೆಚ್ಚಳ ಮಾಡುವ ಮೂಲಕ ರೈತರ ಹಾಗೂ ಹಾಲು ಉತ್ಪಾದಕರ ಹಿತ ಕಾಪಾಡಿ ಮತ್ತಷ್ಟು ಶಕ್ತಿ ತುಂಬಿದ್ದಾರೆಂದು ಹೇಳಿದರು.
ಈ ವೇಳೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕಿ ವಿನುತ ಉದಯ್, ಟ್ರಸ್ಟಿ ಸಿಪಾಯಿ ಶ್ರೀನಿವಾಸ್, ಕೆ ಎಂ.ರವಿ, ಮನ್ಮುಲ್ ಅಧ್ಯಕ್ಷ ಎಂ.ಕೆ ಹರೀಶ್ ಬಾಬು, ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಉದ್ಯಮಿ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಟಿ. ಶಂಕರ್, ನಗರಸಭೆ ಮಾಜಿ ಅಧ್ಯಕ್ಷೆ ಕೋಕಿಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜ್, ಮುಖಂಡರಾದ ಮಮತಾ ಶಂಕರೇಗೌಡ, ಅರುವನಹಳ್ಳಿ ಸಿದ್ದರಾಜು, ಎಂ ಹೋಂಬಯ್ಯ, ಕುಶಲ್ ಗೌಡ, ಇತರರಿದ್ದರು.
ಕಿಕ್ಕೇರಿ:ಹೋಬಳಿಯ ಗಡಿಗ್ರಾಮ ಮಾದಾಪುರದಲ್ಲಿ ಗ್ರಾಮದೇವಿ ಕೆಂಕೇರಮ್ಮದೇವಿಗೆ ವಿಶೇಷ ಪೂಜಾರಾಧನೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇಗುಲ ಪ್ರವೇಶದ್ವಾರವನ್ನು ಹಸಿರು ಚಪ್ಪರ, ಪುಷ್ಪಗಳಿಂದ ಶೃಂಗರಿಸಿದರು. ಕೆಂಕೇರಮ್ಮ ಚಾರಿಟಬಲ್ ಟ್ರಸ್ಟ್‌ನಿಂದ ಮೂಲ ಕೆಂಕೇರಮ್ಮ ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನಡೆಯಿತು .ಮೂಲ ದೇವಿ ಜೊತೆಗೆ ಉತ್ಸವ ಮೂರ್ತಿಗೆ ವಸ್ತ್ರ, ಆಭರಣ, ವಿವಿಧ ಪರಿಮಳ ಪುಷ್ಪಗಳಿಂದ ಶೃಂಗರಿಸಿದರು. ದೇಗುಲ ಪ್ರಾಂಗಣದಲ್ಲಿನ ಅಶ್ವಥ ವೃಕ್ಷಕ್ಕೆ ಪೂಜಿಸಿ ಪರಿಸರ ಪ್ರೇಮ ಮೆರೆದರು.ಭಕ್ತರು ಉಪವಾಸವಿದ್ದು ದೇವರ ನಾಮ ಸ್ತುತಿಸಿದರು. ಮಹಿಳೆಯರು ಲಲಿತಾ ಸಹಸ್ರನಾಮ, ಕೀರ್ತನೆ ಪಠಿಸಿದರು. ತುಪ್ಪದ ದೀಪದ ಆರತಿ ಬೆಳಗಿ ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು. ಗಣಪತಿ ಹೋಮ, ನವಗ್ರಹ ಹೋಮ ಮತ್ತಿತರ ಹೋಮ ಹವನಾದಿಗಳು ಸಾಂಘವಾಗಿ ನಡೆಯಿತು.