ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದಲ್ಲಿ ಏರ್ಪಡಿಸಿದ ವಕೀಲರು ಮತ್ತು ನ್ಯಾಯಾಧೀಶರ ನಡುವೆ ಸಂವಾದದಲ್ಲಿ ಮಾತನಾಡಿ, ಜಿಲ್ಲಾ ನ್ಯಾಯಾಲಯಕ್ಕಾಗಿ ಶ್ರೀರಂಗಪಟ್ಟಣಕ್ಕೆ ಕಕ್ಷಿದಾರರು ಮತ್ತು ವಕೀಲರು ಹೋಗಿ ಬರಲು ತುಂಬಾ ತೊಂದರೆ ಆಗುತ್ತಿತ್ತು. ಇದನ್ನು ವಕೀಲರ ಸಂಘದ ಸದಸ್ಯರು ಹಲವ ವರ್ಷಗಳಿಂದ ಜಿಲ್ಲಾ ನ್ಯಾಯಾಲಯ ಪಟ್ಟಣದಲ್ಲಿ ಪ್ರಾರಂಭಿಸುವಂತೆ ಪ್ರಯತ್ನಿಸಿದ್ದರು ಎಂದರು.
ವಸ್ತು ಸ್ಥಿತಿಯನ್ನು ತಿಳಿಸಿದ್ದರಿಂದ ನಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿ ವಾರದಲ್ಲಿ ಒಂದು ದಿನ ಜಿಲ್ಲಾ ನ್ಯಾಯಾಲಯ ಕಾರ್ಯನಿರ್ವಹಿಸಲು ಮಂಜೂರಾತಿ ನೀಡಿದ್ದು, ಇದನ್ನು ವಕೀಲರು ಮುನ್ನಡೆಸಿಕೊಂಡು ಹೋಗಲು ಶ್ರಮಿಸಬೇಕು ಎಂದರು.ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಶಿವಮೂರ್ತಿ ಮಾತನಾಡಿ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶ್ರೀರಂಗಪಟ್ಟಣಕ್ಕೆ ಹೋಗಿ ಕಾರ್ಯ ಕಲಾಪ ನಡೆಸಲು ವಕೀಲರು ಮತ್ತು ಕಕ್ಷಿದಾರರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ವಕೀಲರು ಹಲವು ಬಾರಿ ಪ್ರಯತ್ನ ಪಟ್ಟು ಜಿಲ್ಲಾ ನ್ಯಾಯಾಲಯಕ್ಕೆ ಶ್ರಮಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ ಮಾತನಾಡಿ, ತಾಲೂಕಿಗೆ ಸಂಬಂಧಪಟ್ಟ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣವು ನಡೆಸಲು ಶ್ರೀರಂಗಪಟ್ಟಣಕ್ಕೆ ತೆರಳಬೇಕಾದ ಅನಿವಾರ್ಯತೆ ಇತ್ತು. ಇನ್ನು ಮುಂದೆ ಪಟ್ಟಣದ ನ್ಯಾಯಾಲಯದಲ್ಲೇ ನಡೆಯುವುದರಿಂದ ಕಕ್ಷಿದಾರರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ತು ಸದಸ್ಯ ಮಹದೇವ್ ಪ್ರಸಾದ್, ಸಂಘದ ಉಪಾಧ್ಯಕ್ಷ ಪುರುಷೋತ್ತಮ್, ಖಜಾಂಚಿ ಪ್ರಸನ್ನ ಕುಮಾರ್, ಜಂಟಿ ಕಾರ್ಯದರ್ಶಿ ದೊಡ್ಡಯ್ಯ, ನಿರ್ದೇಶಕರಾದ ಶಿವಕುಮಾರ್, ಬಿಜೆ ಪ್ರವೀಣ್ , ಗಿರಿಜಾ ಪ್ರತಾಪ್, ಅವಿನಾಶ್, ಜನಾರ್ಧನ್, ತಾಲೂಕಿನ ವಕೀಲರು ಭಾಗವಹಿಸಿದ್ದರು.