ಗುರುಗಳು ಕಲಿಸುವ ಸಂಸ್ಕಾರ ಕಡೆವರೆಗೂ ಉಳಿಯಲಿ

KannadaprabhaNewsNetwork |  
Published : May 11, 2025, 11:46 PM IST
ಪಟ್ಟಣದ ಹೊರ ವಲಯದಲ್ಲಿರುವ ಗದ್ದಿಗೆ ಮಠದ ಆವರಣದಲ್ಲಿ ಶ್ರೀ ಶಿವಲಿಂಗೇಶ್ವರ ಸ್ವಾಮಿ ಗದ್ದುಗೆ ಮಠ ಹಾಗೂ ಶ್ರೀ ಜಯದೇವ ಮಹಾಸ್ವಾಮಿಗಳವರ ಗದ್ದುಗೆಯ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಗಣ್ಯರು ಮತ್ತು ವಿವಿಧ ಮಠಾಧೀಶರುಗಳು ಇದ್ದಾರೆ | Kannada Prabha

ಸಾರಾಂಶ

ಶ್ರೀ ಹಾಲಸ್ವಾಮಿ ವಿರಕ್ತ ಮಠದ ಹಿರಿಯ ಶ್ರೀಗಳಾದ ಜಯದೇವ ಮಹಾಸ್ವಾಮಿಗಳ ಕನಸಿನಂತೆ ಈ ದಿನ ಶಿವಲಿಂಗೇಶ್ವರ ಸ್ವಾಮಿಗಳ ಗದ್ದಿಗೆ ಮಠ ಜೀರ್ಣೋದ್ಧಾರಗೊಂಡು ಕಾಶಿ ಪೀಠದ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಳ್ಳುತ್ತಿದೆ. ಇದು ಈ ಭಾಗದ ಜನರ ಪುಣ್ಯವಾಗಿದೆ ಎಂದು ಶ್ರೀ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮೀಜಿ ನುಡಿದಿದ್ದಾರೆ.

- ಶಿವಲಿಂಗೇಶ್ವರ ಸ್ವಾಮಿ ಗದ್ದುಗೆ ಮಠ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀ ಬಸವ ಜಯಚಂದ್ರ ಸ್ವಾಮೀಜಿ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಶ್ರೀ ಹಾಲಸ್ವಾಮಿ ವಿರಕ್ತ ಮಠದ ಹಿರಿಯ ಶ್ರೀಗಳಾದ ಜಯದೇವ ಮಹಾಸ್ವಾಮಿಗಳ ಕನಸಿನಂತೆ ಈ ದಿನ ಶಿವಲಿಂಗೇಶ್ವರ ಸ್ವಾಮಿಗಳ ಗದ್ದಿಗೆ ಮಠ ಜೀರ್ಣೋದ್ಧಾರಗೊಂಡು ಕಾಶಿ ಪೀಠದ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಳ್ಳುತ್ತಿದೆ. ಇದು ಈ ಭಾಗದ ಜನರ ಪುಣ್ಯವಾಗಿದೆ ಎಂದು ಶ್ರೀ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮೀಜಿ ನುಡಿದರು.

ಪಟ್ಟಣದ ಹೊರವಲಯದ ಗದ್ದಿಗೆ ಮಠದ ಆವರಣದಲ್ಲಿ ಭಾನುವಾರ ಶ್ರೀ ಶಿವಲಿಂಗೇಶ್ವರ ಸ್ವಾಮಿ ಗದ್ದುಗೆ ಮಠ ಹಾಗೂ ಶ್ರೀ ಜಯದೇವ ಮಹಾಸ್ವಾಮೀಜಿ ಅವರ ಗದ್ದುಗೆ ಲೋಕಾರ್ಪಣೆ ಹಾಗೂ ಕಳಸಾರೋಹಣದ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಮನುಷ್ಯ ಎಷ್ಟೇ ಜ್ಞಾನಿಯಾದರೂ ಜ್ಞಾನ ಅವನ ಕೆಲಸಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಆದರೆ, ಗುರುಗಳು ಕಲಿಸಿದ ಸಂಸ್ಕಾರ, ಆದರ್ಶ, ಜೀವನದ ಮೌಲ್ಯಗಳು ಜೀವನದ ಕೊನೆಯವರೆಗೂ ಇರಲಿದೆ. ಶ್ರೀ ಮಠದ ಹಿರಿಯ ಲಿಂಗೈಕ್ಯ ಶ್ರೀಗಳು ನನಗೆ ಕಲಿಸಿದ ಉತ್ತಮ ಸಂಸ್ಕಾರ ಮತ್ತು ಕಾಶಿ ಪೀಠದಲ್ಲಿ ನಾನು ಕಲಿತ ವಿದ್ಯೆಯಿಂದ ಇಂದು ನಿಮ್ಮಗಳ ಮುಂದೆ ಮಠಾಧೀಶರಾಗಿ ಜನಸೇವೆಯಲ್ಲಿ ತೊಡಗುವಂತೆ ಮಾಡಿದೆ ಎಂದರು.

ಸಮಾರಂಭ ಉದ್ಘಾಟಿಸಿದ ಶಾಸಕ ಬಸವರಾಜ ವಿ. ಶಿವಗಂಗಾ ಮಾತನಾಡಿ, ಚನ್ನಗಿರಿ ಪಟ್ಟಣದಲ್ಲಿರುವ ಹಾಲಸ್ವಾಮಿ ವಿರಕ್ತ ಮಠವು ಈ ಭಾಗದ ಜನರ ಆಧ್ಯಾತ್ಮಿಕ ಕೇಂದ್ರವಾಗಿದೆ. ಶ್ರೀ ಮಠದ ಹಿರಿಯ ಶ್ರೀಗಳ ಆಶೀರ್ವಾದದಿಂದ ಈ ಕ್ಷೇತ್ರದ ಶಾಸಕನಾಗಿದ್ದೇನೆ. ನನಗೆ ಅಧಿಕಾರ ಇರಲಿ, ಇಲ್ಲದಿರಲಿ. ನಾನು ಸದಾ ಈ ಮಠದ ಏಳಿಗೆಗೆ ನನ್ನ ಸೇವೆ ಸಲ್ಲಿಸುತ್ತೇನೆ ಎಂದರು.

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಶ್ರೀ ಶಿವಲಿಂಗೇಶ್ವರ ಸ್ವಾಮಿಗಳು ಪವಾಡ ಪುರುಷರಾಗಿದ್ದಾರೆ. ಚನ್ನಗಿರಿ ಮತ್ತು ಚಿಕ್ಕೂಲಿಕೆರೆ, ದೋಣಿಹಳ್ಳಿ ಭಾಗದ ಜನರ ಆರಾಧ್ಯ ದೈವವಾಗಿದ್ದರು. ಈ ಮಠದ ಹಿರಿಯ ಶ್ರೀಗಳಾದ ಜಯದೇವ ಸ್ವಾಮಿಗಳು ಜಾತಿ, ಧರ್ಮದ ಭೇದಗಳಿಲ್ಲದೇ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುತ್ತ, ಮಠದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರ ಮಾರ್ಗದರ್ಶನದಂತೆ ಇಂದಿನ ಪೀಠಾಧಿಪತಿ ಆಗಿರುವ ಶ್ರೀ ಬಸವ ಜಯಚಂದ್ರ ಮಹಾಸ್ವಾಮಿಗಳು ಮಠವನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾಶಿ ಗುರುಪೀಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ದಿವ್ಯ ಸಮ್ಮುಖವನ್ನು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮಹಿಮಾ ಜೆ. ಪಟೇಲ್, ದೈವ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬೂದಿಸ್ವಾಮಿ, ವೀರಶೈವ ಸಮಾಜದ ಗೌರವ ಅಧ್ಯಕ್ಷ ರಾಜಶೇಖರಯ್ಯ, ಚಂದ್ರಯ್ಯ, ಎಲ್.ಎಂ.ರೇಣುಕಾ, ಜ್ಯೋತಿ ಕೊರಿ ಕೊಟ್ರೇಶ್, ಕಮಲಾ ಹರೀಶ್, ಮುರುಡಪ್ಪ, ಜವಳಿ ಮಹೇಶ್, ಸಾಗರದ ಶಿವಲಿಂಗಪ್ಪ, ರೂಪ ಮುರುಡೇಶ್, ಸಂಜು ಪಾಟೀಲ್, ಎಚ್.ಬಿ. ರುದ್ರಯ್ಯ, ಸುರೇಶ್, ಸಂಗಮೇಶ್, ಪಿ.ಆರ್. ಮಂಜುನಾಥ್ ಮೊದಲಾದವರು ಹಾಜರಿದ್ದರು.

- - - -11ಕೆಸಿಎನ್‌ಜಿ1.ಜೆಪಿಜಿ:

ಕಾರ್ಯಕ್ರಮವನ್ನು ಶಾಸಕ ಬಸವರಾಜ ಶಿವಗಂಗಾ ಉದ್ಘಾಟಿಸಿದರು. ಶ್ರೀ ಬಸವ ಜಯಚಂದ್ರ ಸ್ವಾಮೀಜಿ, ಶ್ರೀ ಚಂದ್ರಶೇಖರ ಶಿವಾಚಾರ್ಯರು, ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಗಣ್ಯರು ಇದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ