ನರಗುಂದ: ಆದಿವಾಸಿ ಜನಾಂಗದವರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಆದ್ದರಿಂದ ಸರ್ಕಾರ ಈ ಜನಾಂಗಕ್ಕೆ ಹತ್ತಾರು ಸೌಲಭ್ಯಗಳನ್ನು ನೀಡಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲದೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಶಾಂತಲಿಂಗ ಶ್ರೀಗಳು ಹೇಳಿದರು.
ಈ ಜನಾಂಗದವರು ಕಾಯಕ ಮಾಡಿ ಬದುಕುತ್ತಾರೆ. ಮೇಲಾಗಿ ಗ್ರಾಮದಲ್ಲಿ 200 ವರ್ಷಗಳಿಂದ ವಾಸ ಮಾಡುತ್ತಿದ್ದಾರೆಂದು ಇತಿಹಾಸದಿಂದ ತಿಳಿದುಬರುತ್ತದೆ. ಗ್ರಾಮದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆದರೆ ಅವರ ಸೇವೆ ದೊಡ್ಡದಿದೆ. ಹಿಂದಿನ ದಿನಗಳಲ್ಲಿ ಈ ಸಮುದಾಯದ ನಾಯಕ ಬಿರ್ಸೆ ಮುಂಡಾ ಎಂಬವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರು ಎಂದು ಸ್ಮರಿಸಿದರು.
ಪಿಕಾರ್ಡ್ ಬ್ಯಾಂಕಿನ ನಿರ್ದೇಶಕ ಬಿ.ಬಿ. ಐನಾಪೂರ ಮಾತನಾಡಿ, ಗ್ರಾಮದಲ್ಲಿ ಆದಿವಾಸಿ ಜನಾಂಗದವರು ಹೊಂದಾಣಿಕೆಯಿಂದ ಜೀವನ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಟಿಎಪಿಎಂಸಿ ನಿರ್ದೇಶಕ ಚಂದ್ರಶೇಖರ ದಂಡಿನ ಮಾತನಾಡಿ, ಈ ಭಾಗದಲ್ಲಿ ಸಮುದಾಯದಲ್ಲಿ ಏನೋ ತಂಟೆ, ತಕಾರಾರು ಬಂದರೆ ಗ್ರಾಮದ ಸರದಾರ ಹತ್ತಿರ ಬಂದು ಆ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹೋಗುತ್ತಾರೆ. ಮೇಲಾಗಿ ಈ ಜನಾಗಂದವರು ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಹೋಗದೆ ತಮ್ಮ ಸಮುದಾಯದಲ್ಲಿ ಬಗೆಹರಿಸಿಕೊಳ್ಳುವುದು ಬಹಳ ವಿಶೇಷವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹರಣಶಿಕಾರಿ ಜನಾಂಗದ ಉಡುಗೆ ತೊಡುಗೆ ಧರಿಸಿ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ನಿವೃತ್ತಿ ಶಿಕ್ಷಕ ಎಸ್.ಬಿ. ದಂಡಿನ, ನಾಗರಾಜ ಹರಣಶಿಕಾರಿ, ಮಾರುತಿ ಪೂಜಾರ, ಚಂದ್ರಪ್ಪ ಹರಣಶಿಕಾರಿ, ಮಲ್ಲಪ್ಪ ಹರಣಶಿಕಾರಿ, ಸುಭಾಸ ಅಂಗಡಿ, ನಾಗಪ್ಪ ಕಟ್ಟಿಮನಿ, ಶೇಖಪ್ಪ ಚವಾಣ, ಮಾನಪ್ಪ ಹರಣಶಿಕಾರಿ, ಚಂದ್ರು ಹರಣಶಿಕಾರಿ, ಎಸ್.ಜಿ. ತೆಗ್ಗಿನಮನಿ, ನಾಗಮ್ಮ ಕಾಳೆ, ಶರಣಬಸಪ್ಪ ನರಸಾಪೂರ, ನಿವೃತ್ತ ಯೋಧ ನಿಂಗಪ್ಪ ಮನನೇಕೊಪ್ಪ, ಚಂದ್ರು ಕೊಣ್ಣೂರ, ಸಂಗಪ್ಪ ಹರಣಶಿಕಾರಿ, ಶಿವಾಜಿ ಕಟ್ಟಿಮನಿ ಸೇರಿದಂತೆ ಮುಂತಾದವರು ಇದ್ದರು. ಪ್ರೊ. ರಮೇಶ ಐನಾಪೂರ ನಿರೂಪಿಸಿ, ವಂದಿಸಿದರು.