ಪರಿಸರ, ವನ್ಯಜೀವಿಗಳ ಕಾಳಜಿ ಕಾರ್ಯಗಳು ಮತ್ತಷ್ಟು ಹೆಚ್ಚಲಿ: ಡಾ. ಎಂ.ಆರ್. ದೇಸಾಯಿ

KannadaprabhaNewsNetwork |  
Published : Nov 28, 2025, 03:15 AM IST
ಹೊಲಿಸೇಂಟ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್, ಅರಣ್ಯ ಇಲಾಖೆ, ಕನ್ನಡಪ್ರಭ ಮತ್ತು ಏಷಿಯಾ ನೆಟ್ ಸುವರ್ಣ ನ್ಯೂಸ್ ಸಹಯೋಗದಲ್ಲಿ ಪ್ರೌಢಶಾಲಾ ಮಕ್ಕಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ-೨೦೨೫ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾರ್ಯಕ್ರಮಗಳು ಕೇವಲ ಭಾಷಣಕ್ಕೆ ಸಿಮೀತವಾಗಬಾರದು. ಅದರ ನಿಜ ಸ್ವರೂಪ ವಿದ್ಯಾರ್ಥಿಗಳಿಗೆ ತಲುಪಬೇಕು. ಅರಣ್ಯ, ಪರಿಸರ ಮತ್ತು ವನ್ಯಜೀವಿ ಕುರಿತಾದ ಕಾಳಜಿ, ಜವಾಬ್ದಾರಿಯನ್ನು ಹೆಚ್ಚಿಸುವ ಕಾರ್ಯ ಇನ್ನೂ ಹೆಚ್ಚಾಗಿ ನಡೆಯಬೇಕಿದೆ ಎಂದು ಅರಣ್ಯ ಪ್ರೇಮಿ, ವನ್ಯಜೀವಿ ಪರಿಪಾಲಕ ಡಾ, ಎಂ.ಆರ್. ದೇಸಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಕಾರ್ಯಕ್ರಮಗಳು ಕೇವಲ ಭಾಷಣಕ್ಕೆ ಸಿಮೀತವಾಗಬಾರದು. ಅದರ ನಿಜ ಸ್ವರೂಪ ವಿದ್ಯಾರ್ಥಿಗಳಿಗೆ ತಲುಪಬೇಕು. ಅರಣ್ಯ, ಪರಿಸರ ಮತ್ತು ವನ್ಯಜೀವಿ ಕುರಿತಾದ ಕಾಳಜಿ, ಜವಾಬ್ದಾರಿಯನ್ನು ಹೆಚ್ಚಿಸುವ ಕಾರ್ಯ ಇನ್ನೂ ಹೆಚ್ಚಾಗಿ ನಡೆಯಬೇಕಿದೆ ಎಂದು ಅರಣ್ಯ ಪ್ರೇಮಿ, ವನ್ಯಜೀವಿ ಪರಿಪಾಲಕ ಡಾ, ಎಂ.ಆರ್. ದೇಸಾಯಿ ಹೇಳಿದರು.

ಪಟ್ಟಣದ ಹೊಲಿಸೇಂಟ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್, ಅರಣ್ಯ ಇಲಾಖೆ, ಕನ್ನಡಪ್ರಭ ಮತ್ತು ಏಷಿಯಾ ನೆಟ್ ಸುವರ್ಣ ನ್ಯೂಸ್ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಪ್ರೌಢಶಾಲಾ ಮಕ್ಕಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ-೨೦೨೫ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು, ಮನುಷ್ಯರು ನಿಸರ್ಗದ ಭಾಗವಾಗಿದ್ದು, ನಿಸರ್ಗದಲ್ಲಿರುವ ಪ್ರಾಣಿ ಪಕ್ಷಿ, ಕ್ರಿಮಿಕೀಟಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಒಂದು ಕಾರ್ಯಕ್ರಮಕ್ಕೆ ಬೇಕಾದ ಆಹ್ವಾನ ಪತ್ರಿಕೆ ತಯಾರಿಗೆ ಒಂದು ಗಿಡ ಹಾಳು ಮಾಡುತ್ತಿದ್ದೇವೆ. ಈ ರೀತಿ ಪರಿಸರಕ್ಕೆ ಧಕ್ಕೆ ತರುವ ಆಡಂಬರ ಆಚರಣೆ ಬದಲು ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಒತ್ತು ನೀಡುವ ಮೂಲಕ ಪರಿಸರ ಉಳಿಸಲು ಬದ್ಧರಾಗಿರಬೇಕು ಎಂದರು.

ತಹಸೀಲ್ದಾರ್ ವಿನೋದ ಹತ್ತಳ್ಳಿ, ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್. ಆದಾಪೂರ ಮಾತನಾಡಿ, ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿ ಕುರಿತಾಗಿ ಅರಿವು ಮೂಡಿಸುವ ಜೊತೆಗೆ ಮಕ್ಕಳ ಭಾವನೆ ಪರಿಸರ ಶುದ್ಧೀಕರಿಸುವ ಕಡೆಗೆ ಗಮನ ಸೆಳೆಯುವ ಕೆಲಸವನ್ನು ಕನ್ನಡಪ್ರಭ ಪತ್ರಿಕೆ ಮಾಡುತ್ತಿರುವುದು ಶ್ಲಾಘನೀಯ. ತಾಲೂಕಿನ ಮಕ್ಕಳು ಜಿಲ್ಲೆ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವಂತಾಗಲಿ ಎಂದು ಹಾರೈಸಿದರು.

ಬೀಳಗಿ ಶ್ರೀ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಕಲೆ,ಸಾಹಿತ್ಯ, ಸಂಗೀತ ಯಾವುದೇ ಕ್ಷೇತ್ರವಿರಲಿ ಭಾಗವಹಿಸಬೇಕು. ಚಿತ್ರಕಲೆ ಸ್ಪರ್ಧೆಯಲ್ಲಿ ಅರಣ್ಯ ವನ್ಯಜೀವಿ ಕುರಿತಾದ ವಿಷಯ ತೆಗೆದುಕೊಂಡಿರುವುದು ಉತ್ತಮವಾಗಿದೆ. ಇಂದಿಲ್ಲಿ ಪರಿಸರ ಕಾಳಜಿ, ರಕ್ಷಣೆ ಜವಾಬ್ದಾರಿ ಹೆಚ್ಚಿಸುವ ಕೆಲಸ ನೆಡೆದಿದೆ. ಇಂತಹ ಕೆಲಸಗಳನ್ನು ಕನ್ನಡಪ್ರಭ ಪತ್ರಿಕೆಯ ವತಿಯಿಂದ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಕುಂಚ, ಕಾವ್ಯ ಗಾಯನ ಮೂಲಕ ಚಾಲುಕ್ಯ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಶಿವಾನಂದ ಹಿರೇಮಠ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿದರು. ಸಿಪಿಐ ಎಚ್.ಬಿ. ಸಣಮನಿ, ವಲಯ ಅರಣ್ಯಾಧಿಕಾರಿ ಅಮ್ರತ ಗಂಡೋಶಿ, ಚಿತ್ರಕಲಾ ಸಂಘದ ತಾಲೂಕು ಅಧ್ಯಕ್ಷ ಎಸ್.ಬಿ. ಲಮಾಣಿ, ಹೊಲಿಸೇಂಟ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಎ.ಎಂ. ಸೋಲಾಪೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎ.ಎ. ಸೋಲಾಪುರ , ಪತ್ರಕರ್ತರಾದ ಆನಂದ ಜಡಿಮಠ, ಕಾಶಿನಾಥ್ ಸೋಮನಕಟ್ಟಿ, ಶೇಖರ್ ಗೊಳಸಂಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಪರೋಕ್ಷ ಇಂಗಿತ
ಜೈಲಿನ ಬ್ಯಾರಕ್‌ಗಳಿಗೆ ಸಿಸಿಟಿವಿ ಕ್ಯಾಮೆರಾ!