ಇ-ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ

KannadaprabhaNewsNetwork |  
Published : Nov 28, 2025, 03:15 AM IST
ವಿಟಿಯು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅಭ್ಯಾಸದಲ್ಲಿ ಇ-ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಕುಲಪತಿ ಹಾಗೂ ವಿಟಿಯು ಕನ್ಸೊಸಿಯಂನ ಆಡಳಿತಾಧ್ಯಕ್ಷ ಡಾ.ವಿದ್ಯಾಶಂಕರ.ಎಸ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅಭ್ಯಾಸದಲ್ಲಿ ಇ-ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಕುಲಪತಿ ಹಾಗೂ ವಿಟಿಯು ಕನ್ಸೊಸಿಯಂನ ಆಡಳಿತಾಧ್ಯಕ್ಷ ಡಾ.ವಿದ್ಯಾಶಂಕರ.ಎಸ್ ಸಲಹೆ ನೀಡಿದರು.

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ವು 2025–26ನೇ ಶೈಕ್ಷಣಿಕ ವರ್ಷದ ವಿಟಿಯು ಕನ್ಸೊಸಿಯಂ ಇ-ಸಂಪನ್ಮೂಲಗಳ ಕುರಿತ ರಾಜ್ಯವ್ಯಾಪ್ತಿ ತಿಂಗಳ ಕಾಲ ತರಬೇತಿ ಸರಣಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಶಸ್ವಿಯಾಗಿ ನಡೆಸಿ ಪೂರ್ಣಗೊಳಿಸಿದೆ. ವಿಟಿಯುಗೆ ಸಂಬಂಧಿಸಿದ ಎಲ್ಲ ತಾಂತ್ರಿಕ ಸಂಸ್ಥೆಗಳ ಡಿಜಿಟಲ್ ಸಾಕ್ಷರತೆ ಮತ್ತು ಸಂಶೋಧನಾ ಸಾಮರ್ಥ್ಯವನ್ನು ವೃದ್ಧಿಸುವ ಪ್ರಮುಖ ಹೆಜ್ಜೆ ಇದು. ಪತ್ರಿಕೆಗಳಲ್ಲಿ ಪ್ರಕಟಣೆ, ಗುಣಮಟ್ಟದ ಸಂಶೋಧನೆ ಮತ್ತು ಎನ್‌ಐಆರ್‌ಎಫ್‌ ಮುಂತಾದ ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಸಂಸ್ಥೆಗಳ ಗೋಚರತೆ ಹೆಚ್ಚಿಸಲು ಇವುಗಳ ಪಾತ್ರ ವಿವರಿಸಿದರು.ಈ ಸರಣಿ ಟ್ರೈನ್ ದ ಟ್ರೈನರ್ ಎಂಬ ವಿಶೇಷ ಕಾರ್ಯಕ್ರಮದೊಂದಿಗೆ ಆರಂಭಗೊಂಡಿತು. ಕರ್ನಾಟಕದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಆಯ್ಕೆಯಾದ 30 ಗ್ರಂಥಪಾಲಕರಿಗೆ ವಿಶೇಷ ತರಬೇತಿ ನೀಡಲಾಯಿತು. ಇವರು ತಮ್ಮ ವಿಭಾಗದ ಕಾಲೇಜುಗಳಿಗೆ ಡಿಜಿಟಲ್ ರಾಯಭಾರಿಗಳಾಗಿ ಕಾರ್ಯನಿರ್ವಹಿಸಿ, ಇ-ಸಂಪನ್ಮೂಲ ಜಾಗೃತಿ ಮತ್ತು ತರಬೇತಿಯನ್ನು ವಿಸ್ತರಿಸುವರು. ಕರ್ನಾಟಕದ 4 ಪ್ರಾಂತಗಳಲ್ಲಿ ಏಕದಿನ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್, ಬೆಂಗಳೂರಿನ ವಿಟಿಯು ಪ್ರಾದೇಶಿಕ ಕೇಂದ್ರ, ಕಲಬುರಗಿಯ ಪಿಡಿಎ ಕಾಲೇಜು ಆಫ್ ಎಂಜಿನಿಯರಿಂಗ್, ಬೆಳಗಾವಿಯ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಈ ಕಾರ್ಯಕ್ರಮಗಳನ್ನು ವಿಟಿಯು ಕನ್ಸೊಸಿಯಂ ಆಶ್ರಯದಲ್ಲಿ ಎನ್‌ಐಇ ಮೈಸೂರು ಮತ್ತು ಪಿಡಿಎ ಕಾಲೇಜು ಆಫ್ ಎಂಜಿನಿಯರಿಂಗ್ ಕಲಬುರಗಿ ಸೇರಿದಂತೆ ಸಂಬಂಧಿತ ಸಂಸ್ಥೆಗಳ ಸಹಕಾರದಿಂದ ಆಯೋಜಿಸಲಾಯಿತು.ಎಲ್ಲ ಕೇಂದ್ರಗಳಲ್ಲಿ ಒಟ್ಟು 500ಕ್ಕೂ ಹೆಚ್ಚು ಗ್ರಂಥಪಾಲಕರು, ಅಧ್ಯಾಪಕರು, ಸಂಶೋಧಕರು ಹಾಗೂ ವೃತ್ತಿಪರರು ಭಾಗವಹಿಸಿದರು.18 ಅಂತಾರಾಷ್ಟ್ರೀಯ ಅಕಾಡೆಮಿಕ್ ಪ್ರಕಾಶಕರು ಈ ಸರಣಿಯಲ್ಲಿ ಭಾಗವಹಿಸಿ ನೇರ ಪ್ರದರ್ಶನಗಳನ್ನು ನೀಡಿದರು. ಈ ಕಾರ್ಯಕ್ರಮಗಳು ವಿಟಿಯು ಸಂಬಂಧಿತ ಕಾಲೇಜುಗಳಲ್ಲಿ ಡಿಜಿಟಲ್ ಸಂಶೋಧನಾ ಮೂಲಸೌಕರ್ಯ ಬಲಪಡಿಸುವ ವಿಟಿಯು ಪ್ರಯತ್ನಕ್ಕೆ ಮಹತ್ವದ ಬೆಂಬಲ ಒದಗಿಸಿದವು.

ಗ್ರಂಥಪಾಲಕ ಮತ್ತು ವಿಟಿಯು ಕನ್ಸೊಸಿಯಂ ಸಂಯೋಜಕ ಡಾ.ಎಸ್.ಬಿ.ತಲ್ಲೋಳ್ಳಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಗ್ರಂಥಪಾಲಕಿ ಸಮೀನ್ ಅಫ್ರೀನ್ ಖಾನ್ ಕಾರ್ಯಕ್ರಮಗಳನ್ನು ನಿರೂಪಿಸಿದರು. ಗ್ರಂಥಾಲಯದ ವಿಭಾಗದ ಅಧಿಕಾರಿ ವಾಣಿ ರಘುವೀರ್ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು. ಭಾಗವಹಿಸಿದ ಪ್ರತಿಯೊಬ್ಬರೂ ವಿಟಿಯು ಕೈಗೊಂಡ ಈ ಕಾರ್ಯಕ್ರಮವನ್ನು ಬಹಳವಾಗಿ ಶ್ಲಾಘಿಸಿ, ಇದು ಡಿಜಿಟಲ್ ಸಾಕ್ಷರತೆ, ಸಂಶೋಧನಾ ಉತ್ಪಾದಕತೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯನ್ನು ಬಲಪಡಿಸುವ ಪರಿವರ್ತನಾ ಪ್ರಯತ್ನವೆಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕುಲಸಚಿವ ಡಾ.ಪ್ರಸಾದ್ ಬಿ.ರಾಂಪುರೆ ಹಾಗೂ ಇತರ ವಿಶ್ವವಿದ್ಯಾಲಯ ಅಧಿಕಾರಿಗಳು ವಿವಿಧ ಅಧಿಕಾರಿಗಳು ಹಾಜರಿದ್ದರು.ಬಾಕ್ಸ್‌..

ಪ್ರಯೋಜನ ಪಡೆದ ವಿದ್ಯಾರ್ಥಿಗಳುಎಸ್.ಜಿ.ಬಾಳೆಕುಂದ್ರಿ ಕೇಂದ್ರೀಯ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ರಾಷ್ಟ್ರೀಯ ಗ್ರಂಥಾಲಯ ವಾರವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಪುಸ್ತಕ ಪ್ರದರ್ಶನ, ಇಂಗ್ಲಿಷ್ ಲ್ಯಾಂಗ್ವೇಜ್ ಲ್ಯಾಬ್ ಪ್ರದರ್ಶನಗಳು ನಡೆದವರು. ಸುಮಾರು 700 ವಿಟಿಯು ಸೇರಿದಂತೆ ಜಿಐಟಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು. ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಪುಸ್ತಕ ವಿಮರ್ಶೆ ಕಾರ್ಯಕ್ರಮ ನಡೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಪರೋಕ್ಷ ಇಂಗಿತ
ಜೈಲಿನ ಬ್ಯಾರಕ್‌ಗಳಿಗೆ ಸಿಸಿಟಿವಿ ಕ್ಯಾಮೆರಾ!