ಧಾರ್ಮಿಕ ಆಚರಣೆಗಳಲ್ಲಿ ನಮ್ಮೆಲ್ಲರಿಗೆ ನೆಮ್ಮದಿ: ಜಗದೀಶ ಶೆಟ್ಟರ

KannadaprabhaNewsNetwork |  
Published : May 10, 2026, 02:45 AM IST
ಫೋಟೋ ಶೀರ್ಷಿಕೆ ೯ಎಸ್‌ಡಿಟಿ೧ಸವದತ್ತಿಯಲ್ಲಿ ನಡೆಯುತ್ತಿರುವ ಗ್ರಾಮದೇವಿಯ ಜಾತ್ರೆಯ ಕಾಡಸಿದ್ದೇಶ್ವರ ವೇದಿಕೆಯ ಮೇಲೆ ನಡೆಯುತ್ತಿರುವ ಧಾರ್ಮಿಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಜಗದೀಶ ಶೆಟ್ಟರ ಮಾತನಾಡಿದರು.ಫೋಟೋ ಶೀರ್ಷಿಕೆ ೯ಎಸ್‌ಡಿಟಿ೨ಸವದತ್ತಿಯಲ್ಲಿ ನಡೆಯುತ್ತಿರುವ ಗ್ರಾಮದೇವಿಯ ಜಾತ್ರೆಯ ಕಾಡಸಿದ್ದೇಶ್ವರ ವೇದಿಕೆಯ ಮೇಲೆ ಮಹಾ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಫೋಟೋ ಶೀರ್ಷಿಕೆ ೯ಎಸ್‌ಡಿಟಿ೩ಸವದತ್ತಿಯಲ್ಲಿ ನಡೆಯುತ್ತಿರುವ ಗ್ರಾಮದೇವಿಯ ಜಾತ್ರೆಗೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರನ್ನು ಗ್ರಾಮದೇವಿ ಉತ್ಸವ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಸವದತ್ತಿಹೊರ ದೇಶಗಳಲ್ಲಿ ಯುದ್ಧದ ವಾತಾವರಣದೊಂದಿಗೆ ಅಲ್ಲಿನ ಜನರಿಗೆ ನೆಮ್ಮದಿಯಿಲ್ಲದಂತಾಗಿದೆ. ಆದರೆ ಭಾರತೀಯ ಪರಂಪರೆಯಲ್ಲಿ ನಡೆಯುತ್ತಿರುವ ಧಾರ್ಮಿಕ ಆಚರಣೆಗಳು ನಮ್ಮೆಲ್ಲರಿಗೂ ನೆಮ್ಮದಿ ತಂದುಕೊಟ್ಟಿವೆ ಎಂದು ಮಾಜಿ ಸಿಎಂ ಹಾಗೂ ಹಾಲಿ ಸಂಸದ ಜಗದೀಶ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಹೊರ ದೇಶಗಳಲ್ಲಿ ಯುದ್ಧದ ವಾತಾವರಣದೊಂದಿಗೆ ಅಲ್ಲಿನ ಜನರಿಗೆ ನೆಮ್ಮದಿಯಿಲ್ಲದಂತಾಗಿದೆ. ಆದರೆ ಭಾರತೀಯ ಪರಂಪರೆಯಲ್ಲಿ ನಡೆಯುತ್ತಿರುವ ಧಾರ್ಮಿಕ ಆಚರಣೆಗಳು ನಮ್ಮೆಲ್ಲರಿಗೂ ನೆಮ್ಮದಿ ತಂದುಕೊಟ್ಟಿವೆ ಎಂದು ಮಾಜಿ ಸಿಎಂ ಹಾಗೂ ಹಾಲಿ ಸಂಸದ ಜಗದೀಶ ಶೆಟ್ಟರ ಹೇಳಿದರು.

ಪಟ್ಟಣದ ಗ್ರಾಮದೇವಿಯ ಕಾಡಸಿದ್ದೇಶ್ವರ ವೇದಿಕೆಯ ಮೇಲೆ ನಡೆಯುತ್ತಿರುವ ಧಾರ್ಮಿಕ ಸಭೆ ಮತ್ತು ಸಾರ್ವಜನಿಕ ಸಭೆಯ ಐದನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐತಿಹಾಸಿಕವಾದಂತ ಗ್ರಾಮದೇವಿ ಜಾತ್ರೆಯನ್ನು ಸವದತ್ತಿ ಪಟ್ಟಣದ ಜನರೆಲ್ಲ ಸೇರಿ ಒಗ್ಗಟ್ಟಿನಿಂದ ಮಾಡುತ್ತಿದ್ದು, 4 ದಶಕಗಳ ನಂತರ ಈ ಜಾತ್ರೆ ನಡೆದರೂ ಸಹಿತ ಅತ್ಯಂತ ವೈಭವಯುತವಾಗಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಅನೇಕ ಧರ್ಮಗುರುಗಳು, ರಾಜಕೀಯ ಮುಖಂಡರನ್ನು ಈ ವೇದಿಕೆಗೆ ಕರೆದು ಜನರಿಗೆ ನಾಲ್ಕು ಹಿತನುಡಿಗಳನ್ನು ನೀಡುವುದರ ಜೊತೆಗೆ ಅನೇಕ ಮನರಂಜನೆ ಕಾರ್ಯಕ್ರಮಗಳನ್ನು ಇಲ್ಲಿ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಬೈಲಹೊಂಗಲ ಆರಾದ್ರಿಮಠದ ವೇ.ಮೂ.ಡಾ.ಮಹಾಂತೇಶ ಶಾಸ್ತ್ರಿಗಳು ಮಾತನಾಡಿ, ಜಾತ್ರೆಯಂತ ಬಂದಾಗ ಅನೇಕ ಸಮಸ್ಯೆಗಳು ಬರುವುದು ಸಹಜವಾಗಿದ್ದು, ಆ ಸಮಸ್ಯೆಗಳಿಗೆ ಆ ತಾಯಿಯೇ ಪರಿಹಾರ ನೀಡುತ್ತಾಳೆ. ಪ್ರತಿಯೊಬ್ಬರ ಸಹಾಯ ಮತ್ತು ಸಹಕಾರದಿಂದಲೇ ಗ್ರಾಮದೇವಿಯ ಜಾತ್ರೆಯ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಕಿಲ್ಲಾತೊರಗಲ್ಲ ಗಚ್ಚಿನಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜಾತ್ರೆಗಳು ಎಲ್ಲರಲ್ಲಿ ಸಮಾನತೆಯ ಭಾವನೆಗಳನ್ನು ಸೃಷ್ಟಿಸುತ್ತಿದ್ದು, ಸವದತ್ತಿಯಲ್ಲಿ ನಡೆಯುತ್ತಿರುವ ಗ್ರಾಮದೇವಿಯ ಜಾತ್ರೆಯು ಎಲ್ಲರಲ್ಲಿ ಭಾವೈಕ್ಯತೆ ಭಾವನೆಯನ್ನು ಮೂಡಿಸಿ ಮಾದರಿ ಜಾತ್ರೆಯಾಗಿ ಹೊರಹೊಮ್ಮಿದೆ ಎಂದರು.

ಶಾಸಕ ವಿಶ್ವಾಸ ವೈದ್ಯ ವೇದಿಕೆ ನೇತೃತ್ವ ವಹಿಸಿದ್ದರು. ಸಮಿತಿ ಅಧ್ಯಕ್ಷ ವಿರುಪಾಕ್ಷ ಮಾಮನಿ ಅಧ್ಯಕ್ಷತೆ ವಹಿಸಿದ್ದರು. ಯಕ್ಕುಂಡಿಯ ಪಂಚಾಕ್ಷರ ಮಹಾಸ್ವಾಮೀಜಿ, ಸಿಧೋಗಿಯ ಮಡಿವಾಳಯ್ಯ ಶಾಸ್ತ್ರಿಗಳು, ಶಿವಪ್ರಸಾದ ದೇವರು ಸಾನ್ನಿಧ್ಯ ವಹಿಸಿದ್ದರು. ಸಮೀಕ್ಷಾ ರಮೇಶ ಕಕನ್ನವರ, ಸಹನಾ ಬಸವರಾಜ ಬಟಕುರ್ಕಿ ಭರತನಾಟ್ಯ ಪ್ರದರ್ಶನ ಮಾಡಿದರು. ವಿಶಾಲಾ ಹಿರೇಮಠ ಕುಚಿಪುಡಿ ನೃತ್ಯ ಪ್ರದರ್ಶಿಸಿದರು.

ಸದಾಶಿವ ಕೌಜಲಗಿ, ಅಶ್ವತ ವೈದ್ಯ, ಎಂ.ಎಸ್.ಪುರದಗುಡಿ, ಅರುಣ ರಾವಳ, ಶಂಕರ ಮುತಗೊಂಡ, ಬಾಬು ಇನಾಮತಿ, ಗದಿಗೆಪ್ಪಾ ಬಂಡಿವಾಡ, ಧರೆಪ್ಪ ಮಡ್ಲಿ, ಮಹಾಂತೇಶ ಗಡೇಕಾರ, ಬಿ.ಎನ್.ಪ್ರಭುನವರ, ಶಂಕರ ಶಾಮರಾಯನವರ, ಮಲ್ಲಿಕಾರ್ಜುನ ಬೇವೂರ, ಪ್ರೀತಮ ಪ್ರಭುನವರ, ಅಪ್ಪಯ್ಯ ಹೂಗಾರ, ಕುಮಾರ ಕೌಜಲಗಿ, ಸಿ.ಎಸ್.ಪಟ್ಟಣಶೆಟ್ಟಿ ಮದನಲಾಲ ಚೋಪ್ರಾ, ವಿರೇಶ ಬ್ಯಾಹಟ್ಟಿ, ಸುರೇಶ ಚೋಪ್ರಾ, ಅಮೀರ ಗೋರಿನಾಯ್ಕ, ವೆಂಕಣ್ಣ ವೈದ್ಯ, ಕಲಮು ಚೂರಿಖಾನ, ಸೋಮಲಿಂಗ ಬೆಳವಡಿ, ಶಂಕರ ಬೇವೂರ, ದೀಪಕ ಜಾನ್ವೇಕರವರನ್ನು ಸಮಿತಿಯ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.

೯ಎಸ್‌ಡಿಟಿ೧

ಸವದತ್ತಿಯಲ್ಲಿ ನಡೆಯುತ್ತಿರುವ ಗ್ರಾಮದೇವಿಯ ಜಾತ್ರೆಯ ಕಾಡಸಿದ್ದೇಶ್ವರ ವೇದಿಕೆಯ ಮೇಲೆ ನಡೆಯುತ್ತಿರುವ ಧಾರ್ಮಿಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಜಗದೀಶ ಶೆಟ್ಟರ ಮಾತನಾಡಿದರು.

೯ಎಸ್‌ಡಿಟಿ೨

ಸವದತ್ತಿಯಲ್ಲಿ ನಡೆಯುತ್ತಿರುವ ಗ್ರಾಮದೇವಿಯ ಜಾತ್ರೆಯ ಕಾಡಸಿದ್ದೇಶ್ವರ ವೇದಿಕೆಯ ಮೇಲೆ ಮಹಾ ದಾನಿಗಳನ್ನು ಸನ್ಮಾನಿಸಿದರು.

೯ಎಸ್‌ಡಿಟಿ೩

ಸವದತ್ತಿಯಲ್ಲಿ ನಡೆಯುತ್ತಿರುವ ಗ್ರಾಮದೇವಿಯ ಜಾತ್ರೆಗೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರನ್ನು ಗ್ರಾಮದೇವಿ ಉತ್ಸವ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಧ್ಯಸ್ಥಿಕೆ ವಹಿಸಿ: ರಾಜ್ಯಪಾಲರಿಗೆ ಪಿಡಿಒಗಳ ಸಂಘ ಮನವಿ
ಕಾಂಗ್ರೆಸ್ ಕೇವಲ ರಾಜಕೀಯಕ್ಕಲ್ಲ, ಯೋಜನೆಗಳ ಕೊಡುವ ಪಕ್ಷ: ಎಸ್.ಜಿ. ನಂಜಯ್ಯನಮಠ