ದಾವಣಗೆರೆ: ನಗರದ ಶ್ರೀ ಸಂಘವಿ ಮಹಾವೀರ ಜೈನ್ ಅವರ ಪುತ್ರ, 18ರ ಹರೆಯದ ಮಯಂಕ್ ಏಪ್ರಿಲ್ 1ರಂದು ಲೌಕಿಕ ಸುಖಮಯ ಬದುಕಿನಿಂದ ನಿರ್ಗಮಿಸಿ, ಅತ್ಯಂತ ಕಠಿಣವಾದ ಜನ್ಮ ಜನ್ಮಾಂತರಗಳ ಹುಟ್ಟು -ಸಾವುಗಳ ಜಂಜಾಟಗಳಿಂದ ಮುಕ್ತಿ ಹೊಂದಬಹುದಾದಂತಹ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.
ಅನಂತರ ರೇಣುಕಾ ಮಂದಿರದಲ್ಲಿ ನೂರಾರು ಜೈನ ಸಂತರು, ಆಚಾರ್ಯರ ಸಮ್ಮುಖ ದೀಕ್ಷೆ ಪೂರ್ವಭಾವಿ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ, ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಪುತ್ರ ಸಮರ್ಥ ಶಾಮನೂರು ದಿಕ್ಷಾರ್ಥಿಯಾದ ಮಯಂಕ್ ಅವರನ್ನು ಭೇಟಿಯಾಗಿ ಶುಭ ಹಾರೈಸಿದರು. ಗುರು, ಆಚಾರ್ಯ ಭಗವಂತರ ಆಶೀರ್ವಾದ ಪಡೆದರು.
- - --31ಕೆಡಿವಿಜಿ34ಃ:
ದಾವಣಗೆರೆಯಲ್ಲಿ ನಡೆದ ಮಯಂಕ್ ಮಹಾವೀರ ಜೈನ್ ಅವರ ಸನ್ಯಾಸ ದೀಕ್ಷಾ ಕಾರ್ಯಕ್ರಮದಲ್ಲಿ ಸಮರ್ಥ ಶಾಮನೂರು ಪಾಲ್ಗೊಂಡು, ಶುಭ ಕೋರಿದರು.