ಎಂಸಿಸಿ ಬ್ಯಾಂಕ್ ಬೈಂದೂರು ಶಾಖೆ ಸಾಧನೆ: ಮಹಿಳಾ ದಿನಾಚರಣೆ, ಆರೋಗ್ಯ ಶಿಬಿರ

KannadaprabhaNewsNetwork |  
Published : Mar 11, 2026, 02:30 AM IST
ಕಾರ್ಯಕ್ರಮ ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಮಂಗಳೂರು: ಎಂಸಿಸಿ ಬ್ಯಾಂಕ್- ಬೈಂದೂರು ಶಾಖೆಯು ಆರಂಭವಾದ 6 ತಿಂಗಳಲ್ಲಿ 10 ಕೋಟಿ ರು. ವ್ಯವಹಾರ ದಾಟಿದ ಗಮನಾರ್ಹ ಸಾಧನೆಯ ಸ್ಮರಣಾರ್ಥ ಶಾಖೆಯ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಉಚಿತ ವೈದ್ಯಕೀಯ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.

ಮಂಗಳೂರು: ಎಂಸಿಸಿ ಬ್ಯಾಂಕ್- ಬೈಂದೂರು ಶಾಖೆಯು ಆರಂಭವಾದ 6 ತಿಂಗಳಲ್ಲಿ 10 ಕೋಟಿ ರು. ವ್ಯವಹಾರ ದಾಟಿದ ಗಮನಾರ್ಹ ಸಾಧನೆಯ ಸ್ಮರಣಾರ್ಥ ಶಾಖೆಯ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಉಚಿತ ವೈದ್ಯಕೀಯ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.

ಆಚರಣೆಯ ಭಾಗವಾಗಿ ಬೈಂದೂರು ಶಾಖೆಯ 10 ಸ್ಥಾಪಕ ಗ್ರಾಹಕರು, ಅಧ್ಯಕ್ಷರು, ಅತಿಥಿಗಳು, ಶಾಖಾ ವ್ಯವಸ್ಥಾಪಕರು ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮವನ್ನು ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ಬೈಂದೂರು ಶಾಖೆಯು ಗಮನಾರ್ಹವಾಗಿ ಕಡಿಮೆ ಅವಧಿಯಲ್ಲಿ 10 ಕೋಟಿ ರು. ವ್ಯವಹಾರದ ಮೈಲಿಗಲ್ಲನ್ನು ಸಾಧಿಸಿರುವುದು ಶ್ಲಾಘನೀಯ. ಇದು ಬ್ಯಾಂಕಿನ ಐತಿಹಾಸಿಕ ಮೈಲಿಗಲ್ಲು ಎಂದು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಲಭ್ಯವಿರುವಂತೆ ಸುಧಾರಿತ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ಹೆಚ್ಚಿನ ಸೌಲಭ್ಯಗಳನ್ನು ಪರಿಚಯಿಸಲು ಬ್ಯಾಂಕ್ ಕೆಲಸ ಮಾಡುತ್ತಿದೆ, ರಾಜ್ಯಾದ್ಯಂತ ಬ್ಯಾಂಕಿನ ವಿಸ್ತರಣೆಗೆ ಗ್ರಾಹಕರು ಬೆಂಬಲ ನೀಡುವಂತೆ ಕೋರಿದರು.ಮುಖ್ಯ ಅತಿಥಿಗಳಾಗಿ ಬೈಂದೂರು ಹೋಲಿ ಕ್ರಾಸ್ ಚರ್ಚ್‌ ಧರ್ಮಗುರು ಫಾ. ವಿನ್ಸೆಂಟ್ ಕುವೆಲ್ಲೊ, ರಂಗಭೂಮಿ ಕಲಾವಿದ ಗಣೇಶ್ ಕಾರಂತ್, ಸಮಾಜ ಸೇವಕ ಫಯಾಜ್ ಅಲಿ, ಬೈಂದೂರು ಯೆಡ್ತರೆಯಲ್ಲಿರುವ ಶ್ರೀ ಧರ್ಮಸ್ಥಳ ಸ್ವಸಹಾಯ ಗುಂಪಿನ ಅಧ್ಯಕ್ಷೆ ಶೈಲಾ ಭಾಗವಹಿಸಿದ್ದರು. ಫಾ. ಮುಲ್ಲರ್ ಮೆಡಿಕಲ್ ಕಾಲೇಜು ಅಸ್ಪತೆಯ ಡಾ. ಎಲ್‌ರೊಯ್ ಸಲ್ಡಾನ್ಹಾ, ಶಾಖಾ ನಿರ್ದೇಶಕ ಎಲ್ರಾಯ್ ಕೆ. ಕ್ರಾಸ್ಟೊ, ಜನರಲ್ ಮ್ಯಾನೆಜರ್ ಸುನಿಲ್ ಮಿನೆಜಸ್, ಬೈಂದೂರು ಶಾಖೆಯ ಹಿರಿಯ ವ್ಯವಸ್ಥಾಪಕ ಸಂದೀಪ್ ಕ್ವಾಡ್ರಸ್ ವೇದಿಕೆಯಲ್ಲಿದ್ದರು.

ಗ್ರಾಹಕರು ಮತ್ತು ಸಾರ್ವಜನಿಕರಿಗಾಗಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರವನ್ನು ಫಾ. ಮುಲ್ಲರ್ ಮೆಡಿಕಲ್ ಕಾಲೇಜ್ ಅಸ್ಪತ್ರೆಯ ವತಿಯಿಂದ ಆಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರ ಬ್ರಹ್ಮಕಲಶೋತ್ಸವ ಸಂಪನ್ನ
ಸ್ತ್ರೀಯರ ಸಾಧನೆಗೆ ಪ್ರೋತ್ಸಾಹಿಸಿ: ಅರುಣಾ ಗುಜ್ಜರಿ