ತಿರುಮಲ ಪಾದಯಾತ್ರಿಗಳಿಗೆ ಭೋಜನ ವ್ಯವಸ್ಥೆ

KannadaprabhaNewsNetwork |  
Published : Nov 01, 2026, 03:00 AM IST
೦೧ವಿಜೆಪಿ೩೦ವಿಜಯಪುರ ಪಟ್ಟಣದ ದೇವನಹಳ್ಳಿ ರಸ್ತೆಯಲ್ಲಿ  ಕುಣಿಗಲ್‌ನಿಂದ ತಿರುಪತಿ ತಿರುಮಲಕ್ಕೆ ಸಾಗುತ್ತಿರುವ ಪಾದಯಾತ್ರಿಗಳು. | Kannada Prabha

ಸಾರಾಂಶ

ವಿಜಯಪುರ: ತಿರುಪತಿ ಶ್ರೀನಿವಾಸಸ್ವಾಮಿ ದರ್ಶನದಿಂದ ಈ ಜನ್ಮದಲ್ಲಿ ಪುಣ್ಯ ಹಾಗೂ ಮೋಕ್ಷ ಲಭಿಸಿದರೆ, ಶ್ರೀನಿವಾಸ ಕಲ್ಯಾಣೋತ್ಸವ ದರ್ಶನದಿಂದ ಪಾಪಗಳು ಸಂಪೂರ್ಣ ನಾಶವಾಗುತ್ತವೆ ಎಂದು ಆಚಾರ್ಯ ಶ್ರೀ ಲೋಕನಾಥಾಚಾರ್ಯ ತಿಳಿಸಿದರು

ವಿಜಯಪುರ: ತಿರುಪತಿ ಶ್ರೀನಿವಾಸಸ್ವಾಮಿ ದರ್ಶನದಿಂದ ಈ ಜನ್ಮದಲ್ಲಿ ಪುಣ್ಯ ಹಾಗೂ ಮೋಕ್ಷ ಲಭಿಸಿದರೆ, ಶ್ರೀನಿವಾಸ ಕಲ್ಯಾಣೋತ್ಸವ ದರ್ಶನದಿಂದ ಪಾಪಗಳು ಸಂಪೂರ್ಣ ನಾಶವಾಗುತ್ತವೆ ಎಂದು ಆಚಾರ್ಯ ಶ್ರೀ ಲೋಕನಾಥಾಚಾರ್ಯ ತಿಳಿಸಿದರು.

ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಯುವ ಬಳಗ ಹಾಗೂ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ಅನ್ನದಾನ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಕುಣಿಗಲ್‌ನಿಂದ ತಿರುಪತಿ ತಿರುಮಲ ಪಾದಯಾತ್ರಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

೧೯ ವರ್ಷಗಳಿಂದ ಪಾದಯಾತ್ರೆ:

ಕುಣಿಗಲ್‌ ತಿರುಪತಿ ತಿರುಮಲ ಪಾದಯಾತ್ರಾ ಸಮಿತಿ ಮುಖ್ಯಸ್ಥ ಬಲರಾಮ್ ಮಾತನಾಡಿ, ಕಳೆದ ೧೯ ವರ್ಷಗಳಿಂದ ದಸರಾ ಹಬ್ಬ ಮುಗಿದು ದೀಪಾವಳಿ ಆರಂಭವಾಗುವ ಮುನ್ನ ೮ ದಿನಗಳ ಕಾಲ ತಿರುಪತಿಗೆ ಪಾದಯಾತ್ರೆ ಕೈಗೊಳ್ಳುತ್ತೇವೆ. ಕುಣಿಗಲ್ ಮಾತ್ರವಲ್ಲದೆ ಮಂಡ್ಯ, ಮದ್ದೂರು, ತುರುವೇಕೆರೆ, ಮಾಗಡಿ, ಹುಲಿಯೂರುದುರ್ಗದ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆಂದರು.

ಪಾದಯಾತ್ರಿಗಳಿಗೆ ಪ್ರತಿದಿನ ಬೆಳಗಿನ ಉಪಹಾರ, ಮಧ್ಯಾಹ್ನ, ರಾತ್ರಿ ಊಟ, ಆಂಬುಲೆನ್ಸ್, ದಿನಸಿ ವಾಹನಗಳು, ಅಡುಗೆ ಸಿಬ್ಬಂದಿ ಹಾಗೂ ವೈದ್ಯರು ಮತ್ತು ಶುಶ್ರೂಷಕರ(ನರ್ಸ್) ತಂಡವೂ ಜೊತೆಯಲ್ಲಿರುತ್ತದೆ. ಕುಣಿಗಲ್‌ನಿಂದ ದಾಬಾಸ್‌ಪೇಟೆ, ದೊಡ್ಡಬಳ್ಳಾಪುರ ಮಾರ್ಗವಾಗಿ ವಿಜಯಪುರ ತಲುಪಿದ್ದು, ಇಲ್ಲಿಂದ ಜಂಗಮಕೋಟೆ, ಚಿಂತಾಮಣಿ, ರಾಯಲ್ಪಾಡು ಹಾಗೂ ಆಂಧ್ರದ ವಾಯಲ್ಪಾಡು, ಪೀಲೇರು, ಶ್ರೀನಿವಾಸ ಮಂಗಾಪುರ ಮಾರ್ಗವಾಗಿ ತಿರುಮಲ ಬೆಟ್ಟ ತಲುಪಲಿದೆ ಎಂದರು.

ಈ ವೇಳೆ ಬಳಗದ ಲಕ್ಷ್ಮಣ್, ಮಾತೃ ಮಡಿಲು ತಂಡದ ಜಗದೀಶ್, ಸುವರ್ಣ, ಅನ್ನದಾನ ಸಮಿತಿ ಅನಿಲ್, ನಟರಾಜ್, ಶ್ರೀನಿವಾಸ್, ಮುನಿರಾಜು, ಸೊಸೈಟಿ ನಾಗಪ್ಪ, ಜಿ.ಎಂ.ಚಂದ್ರು, ಮುನಿಕೃಷ್ಣ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ