ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ತಮ್ಮ 15ನೇ ಬಜೆಟ್, ಗ್ಯಾರಂಟಿಗಳ ಅರ್ಥವಿಲ್ಲದ ಆರ್ಥಿಕ ಕೂಪದಲ್ಲಿ ಬಿದ್ದಿರುವುದು ಎದ್ದುಕಾಣುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದರು.
ಬಜೆಟಿನಲ್ಲಿ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಕೊಡುತ್ತೇನೆ ಎಂದಿದ್ದು, ನಮ್ಮ ಭಾಜಪ ಸರ್ಕಾರದ ಕೊಡುಗೆಯನ್ನೇ ಅವರು ಪುನರುಚ್ಚರಿಸಿದ್ದಾರೆ. ಹಿಂದುಗಳಿಗೆ ಬಿಡಿಗಾಸೂ ನೀಡದೇ ತಮ್ಮ ಅಚ್ಚುಮೆಚ್ಚಿನ ಪಂಗಡಕ್ಕೆ ಅಪಾರ ಅನುದಾನ ಘೋಷಿಸಿ, ತಮ್ಮ ಬಾಂಧವರಿಗೆ ನಿಷ್ಠೆ ತೋರಿಸಿದ್ದಾರೆ ಎಂದು ತಿಳಿಸಿದರು.
ಮಧ್ಯರಾತ್ರಿ 1 ಗಂಟೆವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿ, ಗಾಂಧಿ ತತ್ವವನ್ನು ಗಾಳಿಗೆ ತೂರಿ, ರಾಜ್ಯದ ಕಾನೂನು ಸುವ್ಯವಸ್ಥೆಗೆ ದೊಡ್ಡ ಪೆಟ್ಟು ನೀಡಲು ಹೊರಟಿದ್ದಾರೆ. ಈ ಸರ್ಕಾರದಲ್ಲಿ ಯಾವುದು ನೆಟ್ಟಗಿಲ್ಲ ಎಂಬುದು ಬುರುಡೆ ಬಜೆಟ್ ನಲ್ಲಿ ಕಾಣಬಹುದು ಎಂದು ಆರೋಪಿಸಿದ್ದಾರೆ.- - - -16ಎಸ್‌ಎಂಜಿಕೆಪಿ05: ಎಸ್.ಎನ್. ಚನ್ನಬಸಪ್ಪ