ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಂತರ ಮಾತನಾಡಿದ ಶಾಸಕರು, ಗ್ರಾಪಂ ಕಟ್ಟಡ ಹಾಗೂ ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟುವ ಜೊತೆಗೆ ಗ್ರಾಮದಿಂದ ಬೆಳವಾಡಿಗೆ ಹೋಗುವ ನಾಲೆ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.
ಈ ಹಿಂದೆ ಇದ್ದ ಗ್ರಾಪಂ ಕಟ್ಟಡವು ಅತ್ಯಂತ ಚಿಕ್ಕದಾಗಿದ್ದು, ಇಲ್ಲಿ ಸಭೆ ಸಮಾರಂಭ ನಡೆಸಲು ಕಷ್ಟವಾಗುತ್ತಿದ್ದ ಕಾರಣ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಮಾದರಿಯಾಗಿ ನಿರ್ಮಿಸಲು ಒಂದು ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದರು.ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟಡ ಕಾಮಗಾರಿ ಶೀಘ್ರ ಮುಗಿಸಿ ಜನರ ಆರೋಗ್ಯ ಸೇವೆಗೆ ಸಿಗುವಂತಾಗಲಿ. ಗ್ರಾಮದ ರಸ್ತೆ ಅಭಿವೃದ್ಧಿ ಮಾಡಲು ಮುಖಂಡರು ನನ್ನ ಗಮನಕ್ಕೆ ತಂದಿದ್ದಾರೆ. ಹಂತ ಹಂತವಾಗಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಚಲುವಪ್ಪ, ಸಿ.ಎಸ್.ವೆಂಕಟೇಶ್, ತಾಪಂ ಇಒ ಚಂದ್ರು, ಪಿಡಿಒ ಶಿಲ್ಪ, ಗುತ್ತಿಗೆದಾರ ಹರೀಶ್ ಮತ್ತು ಗ್ರಾಮದ ಮುಖಂಡರು ಹಾಜರಿದ್ದರು.
ಮಂಡ್ಯ: ತಾಲೂಕಿನ ಕೊಮ್ಮೇರಹಳ್ಳಿಯ ಶ್ರೀ ಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಸೆ.೬ರಂದು ಮಧ್ಯಾಹ್ನ ೧ ಗಂಟೆಗೆ ಹರಕೆ ಹೊತ್ತ ಭಕ್ತರಿಂದ ಬಾಯಿಬೀಗ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾತನೂರಿನ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸನ್ನಿಧಿಯಿಂದ ಶ್ರೀಬೀರೇಶ್ವರ ದೇವರ ಜೊತೆ ಬಾಯಿಬೀಗದ ಸಮೇತ ಊರಿನಿಂದ ಹೊರಟು ಶ್ರೀ ಕಂಬದ ನರಸಿಂಹಸ್ವಾಮಿ ಬೆಟ್ಟಕ್ಕೆ ಸಾಮೂಹಿಕವಾಗಿ ಹೋಗಿ ಹರಕೆ ಒಪ್ಪಿಸಿ ಪೂಜಾ ಸೇವೆ ಸಲ್ಲಿಸಲಿದ್ದಾರೆ. ಭಕ್ತರು ಸಕಾಲಕ್ಕೆ ಆಗಮಿಸಿ ಬಾಯಿಬೀಗ ಮೆರವಣಿಗೆಯಲ್ಲಿ ಭಾಗವಹಿಸುವಂತೆ ದೇವಸ್ಥಾನ ಸೇವಾ ಸಮಿತಿ ಕೋರಿದೆ.