ಸಂಘಗಳ ಕಾರ‍್ಯಕ್ಷಮತೆ ಹೆಚ್ಚಿಸಿ ಉತ್ತಮ ಸೌಲಭ್ಯ ಕಲ್ಪಿಸಲು ಕ್ರಮ

KannadaprabhaNewsNetwork |  
Published : Apr 02, 2026, 01:30 AM IST
ಫೋಟೋ: 1 ಹೆಚ್‌ಎಸ್‌ಕೆ 5ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡರನ್ನು ದೊಡ್ಡಗಾನಹಳ್ಳಿ ಡೇರಿ ಅಧ್ಯಕ್ಷ ಎನ್ ಮುನಿರಾಜ್ ಹಾಗೂ ಪದಾಧಿಕಾರಿಗಳು ಗ್ರಾಮಸ್ಥರು ಸನ್ಮಾನಿಸಿದರು. | Kannada Prabha

ಸಾರಾಂಶ

ಹಾಲು ಉತ್ಪಾದಕರ ಸದಸ್ಯ ಸಂಘಗಳಿಗೆ ಬಮೂಲ್ ಶಕ್ತಿಯಾಗಿದ್ದು, ಈ ಸಂಘಗಳ ಬಲವರ್ಧನೆಗೆ ₹೩.೪೪ ಕೋಟಿ ಅನುದಾನ ಒದಗಿಸಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಹಾಲು ಉತ್ಪಾದಕರ ಕಾರ‍್ಯಕ್ಷಮತೆಯನ್ನು ಹೆಚ್ಚಿಸಲು ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಜರುಗಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಗ್ರಾಮೀಣ ಭಾಗದ ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಿ ಹೆಚ್ಚಿನ ಲಾಭ ಪಡೆಯಬೇಕು ಎಂದು ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡ ಹೇಳಿದರು.

ನಂದಗುಡಿ ಹೋಬಳಿ ದೊಡ್ಡಗಾನಹಳ್ಳಿ ಹಾಲು ಉತ್ಪಾದಕರ ಸಹಕಾರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಹಾಲು ಉತ್ಪಾದಕರ ಸದಸ್ಯ ಸಂಘಗಳಿಗೆ ಬಮೂಲ್ ಶಕ್ತಿಯಾಗಿದ್ದು, ಈ ಸಂಘಗಳ ಬಲವರ್ಧನೆಗೆ ₹೩.೪೪ ಕೋಟಿ ಅನುದಾನ ಒದಗಿಸಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಹಾಲು ಉತ್ಪಾದಕರ ಕಾರ‍್ಯಕ್ಷಮತೆಯನ್ನು ಹೆಚ್ಚಿಸಲು ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಜರುಗಿಸಲಾಗಿದೆ. ಡಿ.ಕೆ. ಸುರೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನೂತನ ಆಡಳಿತ ಮಂಡಳಿ ಕೈಗೊಂಡು ಹಲವು ಸುಧಾರಣೆಯ ಕ್ರಮಗಳಿಂದಾಗಿ 2025-26ನೇ ಸಾಲಿನಲ್ಲಿ ₹60 ಕೋಟಿ ಆದಾಯವನ್ನು ಪಡೆದುಕೊಂಡಿದೆ. ಕಳೆದ ಯುಗಾದಿ ಹಬ್ಬದಂದು 1800 ಗುತ್ತಿಗೆ ಕಾರ್ಮಿಕರಿಗೆ ತಲಾ ₹5 ಸಾವಿರ ಉಡುಗೊರೆ ನೀಡಿದ್ದು, ಹಾಲು ಪ್ಯಾಕೇಜಿಂಗ್ ಟ್ರ್ಯಾಕಿಂಗ್ ಹಾಗೂ ಆನ್‌ಲೈನ್ ಬುಕಿಂಗ್‌ಗೆ ಎಐ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಡೈರಿಗೆ ಹಾಲು ಹಾಕಿದ ತಕ್ಷಣವೇ ಹಾಲಿನ ತೂಕ, ಪ್ಯಾಟ್ ಪ್ರಮಾಣ ಹಾಗೂ ದೊರೆಯುವ ಹಣದ ಸಂಪೂರ್ಣ ಮಾಹಿತಿ ಒಂದೇ ನಿಮಿಷದಲ್ಲಿ ಹಾಲು ಉತ್ಪಾದಕರ ಮೊಬೈಲ್‌ಗೆ ಬರುವ ವ್ಯವಸ್ಥೆಯನ್ನು ತರಲಾಗಿದೆ ಎಂದರು.

ದೊಡ್ಡಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಮುನಿರಾಜ್, ಉಪಾಧ್ಯಕ್ಷ ಕೃಷ್ಣಪ್ಪ, ಹೆಡಕನಹಳ್ಳಿ ಎಸ್ ಎಫ್‌ಎಸ್‌ಸಿಎಸ್ ಮಾಜಿ ಅಧ್ಯಕ್ಷ ಮಂಜುನಾಥ್, ನಾರಾಯಣಸ್ವಾಮಿ ಅವರನ್ನು ಬಿ.ವಿ ಸತೀಶ್‌ಗೌಡರು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅದ್ಧೂರಿಯಾಗಿ ನಡೆದ ಶ್ರೀಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರದಲ್ಲಿ ಏರಿಕೆ