ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಈ ಕುರಿತು ಗುರುವಾರ ಬನಹಟ್ಟಿ ಮಂಗಳವಾರ ಪೇಟೆ ದೈವ ಮಂಡಳಿ ಕಚೇರಿಯಲ್ಲಿ ವಿವಿಧ ನಾಗರಿಕ ಸಂಘಟನೆಗಳ ಮುಖಂಡರು ಭಾಗಿಯಾಗಿ ಇನ್ನುಳಿದ ಪಟ್ಟಣದ ಹೊರವಲಯದಲ್ಲಿರುವ ದಾಭಾ ಹಾಗೂ ಅಂಗಡಿಕಾರರಿಗೂ ಮನವಿ ಮೂಲಕ ಬಂದ್‌ಗೆ ತಿಳಿಸಲಾಗುವುದೆಂದು ಸ್ಪಷ್ಟಪಡಿಸಿದರು.
ಈ ಸಂದರ್ಭ ಮಾಂಸಾಹಾರ ಮಾರಾಟಗಾರರು ಹಾಗೂ ಅಂಗಡಿಕಾರರ ಮುಖಂಡರು ಸಭೆಯಲ್ಲಿ ಭಾಗಿಯಾಗಿ ನಗರದ ಹಾಗೂ ದೈವದ ಹಿತದೃಷ್ಟಿಗೆ ಬದ್ಧರಾಗಿದ್ದು, ಎಲ್ಲರ ಸಹಮತದೊಂದಿಗೆ ಪ್ರತಿ ಸೋಮವಾರ ಸಂಪೂರ್ಣ ಮಾಂಸಾಹಾರ ನಿಷೇಧಿಸುವಲ್ಲಿ ಒಪ್ಪಿಗೆ ಸೂಚಿಸಿದರು.ಇದೇ ಸಂದರ್ಭ ಶ್ರೀಶೈಲಪ್ಪ ದಭಾಡಿ, ಮಲ್ಲಿಕಾರ್ಜುನ ತುಂಗಳ, ಸಿದ್ಧನಗೌಡ ಪಾಟೀಲ, ಶಂಕರ ಸೊರಗಾಂವಿ, ದಾನಪ್ಪ ಹುಲಜತ್ತಿ, ಬುಡಾನ ಜಮಾದಾರ, ಶಶಿಕಾಂತ ಹುನ್ನೂರ, ಅಶೋಕ ಬಾಣಕಾರ, ಫಿರೋಜ ಜಕಾತಿ, ಅಜೀಜ ಶೇಖ್, ಮುನ್ನಾ ಮುಲ್ಲಾ, ಮುಸ್ತಾಕ ಹಲಗಲಿ ಸೇರಿದಂತೆ ಅನೇಕರಿದ್ದರು.