ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಶ್ರೀ ಶಂಭುಲಿಂಗ ಮಹಾಸ್ವಾಮಿಗಳ 16ನೆಯ ಪುಣ್ಯಾರಾಧನೆ ನಿಮಿತ್ತ ರನ್ನ ಬೆಳಗಲಿಯ ಶ್ರೀ ಲಕ್ಷ್ಮಿಗದ್ದುಗೆ ಗುಡಿಯಲ್ಲಿ ಆಯೋಜಿಸಿರುವ 15 ದಿನಗಳವರೆಗೆ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಶರಣ ಚರಿತಾಮೃತ ಗ್ರಂಥದ ವಿಷಯದ ಮೇಲೆ ಮೇದಾರ ಕೇತಯ್ಯನ ಕುರಿತು ಪ್ರವಚನ ನೀಡಿದ ಅವರು, ಕೇತಯ್ಯ ಬಸವಣ್ಣನವರ ಸಮಕಾಲೀನ ಶರಣ. ಅನುಭಾವಿ, ಶುದ್ಧ ಕಾಯಕ ಜೀವಿ, ನಿತ್ಯ ದಾಸೋಹಿ, ಸದ್ಭಕ್ತ, ನಿಷ್ಠೆಯಿಂದ ಕೂಡಿದ ಆಚಾರವಂತ ಎಂದು ಹೇಳಿದರು.
ಶರಣೆ ಇಂದುಮತಿ ತಾಳಿಕೋಟಿ ಮಾತನಾಡಿ, ಕಾಯಕ ತತ್ವ ಮತ್ತು ಶರಣ ಶ್ರೀ ಮೇದಾರ ಕೇತಯ್ಯನ ಕುರಿತು ಪ್ರವಚನ ನೀಡಿ ಕೇತಯ್ಯನವರು ಬಸವಣ್ಣನವರ ಜೊತೆ ಸೇರಿ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದರು ಎಂದು ಹೇಳಿದರು.ಶರಣ ಮಹಾದೇವ ಕಂಬಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.